9a7d6b02-2b84-4b4a-87c7-59c64913e14d

ಡಿ, ೨೫ ರಂದು  ೧೯೯೨-೯೩ನೇ ೭ನೇ ತರಗತಿಯ ವಿಧ್ಯಾರ್ಥಿ ಬಳಗದಿಂದ 

ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೨೨- ನಗರದ ಮಾದರಿ ಹಿರಿಯ ಹಿರಿಯ ಪ್ರಾಥಮಿಕ ಶಾಲೆಯ ೧೯೯೨-೯೩ನೇ ೭ನೇ ತರಗತಿಯ ವಿಧ್ಯಾರ್ಥಿ ಬಳಗದಿಂದ  ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇದೇ ಡಿ, ೨೫ ರಂದು ಸೋಮವಾರ ಬಸ್ಸ್‌ ನಿಲ್ದಾಣ ಹತ್ತಿರವಿರುವ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳ್ಳಿಗೆ ೯ ಕ್ಕೆ ಜರುಗಲಿದೆ.

ಕಾರ್ಯಕ್ರಮದ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ವಹಿಸಿಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಟಿ,ಎಸ್‌ ಉದ್ಘಾಟಿಸಲಿದ್ದಾರೆ, ಡಮ್‌ ಹೆಚ್ಚ್‌,ಪಿಎಸ್‌ ಶಾಲೆಯ ಮುಖ್ಯೋಪಾಧ್ಯರಾದ ಅಶೋಕ ಕಂಚಗಾರ ಅಧ್ಯಕ್ಷತೆ ವಹಿಸಲಿದ್ದಾರೆ.

ಗುರುವೃಂದ:  ಕಾರ್ಯಕ್ರಮಕ್ಕೆ ಅಜ್ಜಪ್ಪ ಏಳುಭಾವಿ, ವಿರುಪಾಕ್ಷಪ್ಪ ಮೇಟಿ, ಪ್ರಾಣೇಶ ಹೆಚ್ಚ್‌, ಅಕ್ಕಮಹಾದೇವಿ ಕಲಹಾಳ,  ಉಷಾಬಾಯಿ ಯಾದಗೀರಕರ, ಲಕ್ಷ್ಮೀಬಾಯಿ ಯಾದಗೀರಿ,  ನಾಗಮ್ಮ ಯಲಬುರ್ಗಾ, ಆಸ್ಮತ ಬೇಗಂ, ಪರಿಮಳ ಕುಲಕರ್ಣಿ, ಗುಂಡಮ್ಮ ಪಾಟೀಲ್‌, ಗೀತಾಬಾಯಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೇಂದು ಸಂಘಟಕರು ಪ್ರಕಟಣೆಯಲ್ಲಿ ತಿಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!