IMG-20231207-WA0023

ಡಿ. 10 ರಂದು ಸವಿತಾ ಮುದ್ಗಲ್ ಅವರ ಪುಸ್ತಕಗಳ ಲೋಕಾರ್ಪಣೆ

ಕರುನಾಡ ಬಳಗು ಸುದ್ದಿ

ಕೊಪ್ಪಳ.07 ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ ಜಿಲ್ಲಾ ಶಾಖೆ ಹಾಗೂ ಕೊಪ್ಪಳ ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಿರಂತರ ಪ್ರಕಾಶನ ಗದಗ, ಹೆಚ್.ಎಸ್.ಆರ್.ಎ. ಪ್ರಕಾಶನ ಅವರ ಸಹಯೋಗದಲ್ಲಿ ಕವಯತ್ರಿ ಶ್ರೀಮತಿ ಸವಿತಾ ಮುದ್ಗಲ್ ಅವರು ರಚಿಸಿದ ನೆರಳಿಗಂಟಿದ ಭಾವ ಹಾಗೂ ಕಥಾ ಸರೋವರ ಸಂಕಲನಗಳ ಲೋಕಾರ್ಪಣೆ ಸಮಾರಂಭವು ಕೊಪ್ಪಳದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇದೇ ಡಿ. 10ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.
ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಪಂಚಾಯತ್ ಸಿ.ಎ.ಓ ಅಮೀನ್.ಮ.ಅತ್ತಾರ ಅವರು ಉದ್ಘಾಟನೆ ನೆರವೇರಿಸುವರು. ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಬಿ.ಕೆ.ರವಿ ಪುಸ್ತಕಗಳ ಬಿಡುಗಡೆ ಮಾಡಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪಾಟೀಲ್ ಹೆರೂರು ವಹಿಸುವರು.

ನೆರಳಿಗಂಟಿದ ಭಾವ ಕುರಿತು ಗುಂಡೂರು ಪವನ್ ಕುಮಾರ್ ಹಾಗೂ ಕಥಾ ಸರೋವರ ಕುರಿತು ಲಿಂಗಾರಡ್ಡಿ ಆಲೂರು ಅವರು ಅನುಸಂಧಾನ ಮಾಡುವರು. ಕವಯತ್ರಿ ಶ್ರೀಮತಿ ಸವಿತಾ ಮುದ್ಗಲ್, ಬಳ್ಳಾರಿ ಜೆಸ್ಕಾಂ ಜಾಗೃತ ದಳದ ಆರಕ್ಷಕ ನಿರೀಕ್ಷಕರಾದ ಉದಯರವಿ, ಕೊಪ್ಪಳ ತಾಲೂಕಾ ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಬಿ ಗೊಂಡಬಾಳ ಉಪಸ್ಥಿತರಿರುವ .

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ ಜಿಲ್ಲಾ ಶಾಖೆಯ ಅಧ್ಯಕ್ಷೆ ಶ್ರೀಮತಿ ಮುಮ್ತಾಜ್ ಬೇಗಂ ಅವರು ಪ್ರಾಸ್ತಾವಿಕವಾಗಿ ಮಾತನಾಡುವರು ಎಂದು ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ರಾಮಚಂದ್ರಗೌಡ ಬಿ ಗೊಂಡಬಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!