
ಡಿ. 10 ರಂದು ವಕೀಲರ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 08- ಜಿಲ್ಲಾ ವಕೀಲರ ಸಂಘದಿಂದ ವಕೀಲರ ದಿನಾಚರಣೆ ಡಿ. 10 ರಂದು ಜಿಲ್ಲಾ ಕೋರ್ಟ್ ಆವರಣದಲ್ಲಿ ಜರುಗಲಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ.ಕಣವಿ ಹೇಳಿದರು.
ಶುಕ್ರವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮವನ್ನು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ವಿ.ಶ್ರೀಶಾನಂದ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ ರವರು, ಅಡಿಷನಲ್ ರಿಜಿಸ್ಟ್ರಾರ್ (ಜುಡಿಷಿಯಲ್) ವೆಂಕಟೇಶ ಹುಲಗಿ ಆಗಮಿಸಲಿದ್ದಾರೆ.
ವೇದಿಕೆಯಲ್ಲಿ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಆಸೀಫ್ ಅಲಿ, ಎಸ್.ಹರೀಶ್, ಮಹಿಳಾ ವಕೀಲರ ಘಟಕದ ರಾಜ್ಯಧ್ಯಕ್ಷರಾದ ಸಂಧ್ಯಾ ಮಾದಿನೂರು ಉಪಸ್ಥಿತರಿರುವರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಅಧ್ಯಕ್ಷತೆ ವಹಿಸುವರು.
20 ವರ್ಷಗಳಿಂದ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸುತ್ತಿರುವವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ವಕೀಲರ ದಿನಾಚರಣೆ ನಿಮಿತ್ತ ವಕೀಲರ 12 ತಂಡಗಳಿಗೆ ಚೆಸ್, ವಾಲಿಬಾಲ್, ಕ್ರಿಕೆಟ್ ಮತ್ತು ಮಹಿಳಾ ವಕೀಲರಿಗಾಗಿ ರಂಗೋಲಿ, ಮೆಹಂದಿ, ಸೂಪರ್ ಮಿನಿಟ್ ಸ್ಪರ್ಧೆ ನಡೆಸಿದ್ದು ವಿಜೇತರಿಗೆ ಬಹುಮಾನ ವಿತರಣೆ ಇರಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಿ. ಸಜ್ಜನ, ಜಂಟಿ ಕಾರ್ಯದರ್ಶಿ ಎಲ್.ಹೆಚ್. ಹಿರೇಗೌಡರ, ಖಜಾಂಚಿ ಸಿ.ಎಂ.ಪೊಲೀಸ್ ಪಾಟೀಲ್, ಮಹಿಳಾ ಪ್ರತಿನಿಧಿ ಪುಷ್ಪಾ ಬೇವೂರು ಉಪಸ್ಥಿತರಿದ್ದರು.