
ಡೆಂಗಿ ಜ್ವರ ಪತ್ತೆ ಪರಿಕ್ಷೆಗಾಗಿ ದರಗಳ ಪರಿಷ್ಕರಣೆ : ಡಾ ಟಿ.ಲಿಂಗರಾಜು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ಕೊಪ್ಪಳ ಜಿಲ್ಲೆಯಲ್ಲಿ ಡೆಂಗಿ ಜ್ವರ ಪತ್ತೆ ಹಚ್ಚುವ ಪರಿಕ್ಷೆಗಳಾದ ಇ.ಎಲ್.ಐ.ಎಸ್.ಎ ಹಾಗೂ ರ‍್ಯಾಪಿಡ್ ಟೆಸ್ಟ್ಗಳ ದರವನ್ನು ಮರುನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದಲ್ಲಿ ಡೆಂಗಿ ಜ್ವರ ಪತ್ತೆ ಹಚ್ಚುವ ಇ.ಎಲ್.ಐ.ಎಸ್.ಎ (ELISA) ಹಾಗೂ ರ‍್ಯಾಪಿಡ್ ಟೆಸ್ಟ್ (Rapid Test)ಗಳ ದರವನ್ನು ಪರಿಷ್ಕರಿಸಿ ಮರು ನಿಗದಿಗೊಳಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಟೆಸ್ಟಿಂಗ್ ಲ್ಯಾಬ್‌ಗಳಿಗೆ ಡೆಂಗಿ ಜ್ವರ ಪತ್ತೆ ಹಚ್ಚುವ ಇ.ಎಲ್.ಐ.ಎಸ್.ಎ ಎನ್‌ಎಸ್1 ಪರೀಕ್ಷೆಗೆ ರೂ.300, ಇ.ಎಲ್.ಐ.ಎಸ್.ಎ ಐಜಿಎಂ ಪರೀಕ್ಷೆಗೆ ರೂ.300 ಹಾಗೂ ಸ್ಕಿನಿಂಗ್ ಟೆಸ್ಟ್ : ರ‍್ಯಾಪಿಡ್ ಕಾರ್ಡ್ ಟೆಸ್ಟ್ ಫಾರ್ ಎನ್‌ಎಸ್1 ಐಜಿಎಂ & ಐಜಿಜಿ ಪರೀಕ್ಷೆಗಳಿಗೆ ರೂ. 250 ದರಗಳನ್ನು ಮರುನಿಗದಿಗೊಳಿಸಿದೆ.
ಈ ಆದೇಶವನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020, ಸೆಕ್ಷನ್ 4(1) & 4(2) ಕೆ ಅಡಿಯಲ್ಲಿ ಹೊರಡಿಸಲಾಗಿರುತ್ತದೆ. ಎಲ್ಲಾ ಖಾಸಗಿ ಆಸ್ಪತ್ರೆಗಳು, ಖಾಸಗಿ ಪ್ರಯೋಗಶಾಲೆಗಳು, ಡಯಾಗ್ನೋಸ್ಟಿಕ್ ಲ್ಯಾಬ್‌ಗಳು ಡೆಂಗಿ ಜ್ವರ ಪತ್ತೆ ಹಚ್ಚುವ ಪರೀಕ್ಷೆಯ ಪರಿಷ್ಕçೃತ ದರಗಳ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರಕಟಣೆ ತಿಳಿಸಿದೆ.