
ಡೆಂಗಿ ಪ್ರಕರಣ : ಮನೆಗಳಿಗೆ ಭೇಟಿ ಆರೋಗ್ಯ ಅಧಿಕಾರಿ ಡಾ.ಬಿ.ಈರಣ್ಣ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 27- ಸಮುದಾಯ ಆರೋಗ್ಯ ಕೇಂದ್ರ ತೆಕ್ಕಲಕೋಟೆ ವ್ಯಾಪ್ತಿಯ ಬರುವ ವಾರ್ಡ್ ಸಂಖ್ಯೆ 11 ರಿಂದ 18. ಮತ್ತು 03 ಹಾಗೂ 08 ನೇ ವಾರ್ಡಿನಲ್ಲಿ ಡೆಂಗೀ ಪ್ರಕರಣಗಳು ವರದಿಯಾದ ಹಿನ್ನಲೆಯಲ್ಲಿ ಪಟ್ಟಣ ಪಂಚಾಯ್ತಿಗೆ ಬೇಟಿ ನೀಡಿ ಡೆಂಗೀ ಪುಕರಣ ಕಂಡು ಬಂದ ಮನೆಗಳ ಸುತ್ತಮುತ್ತ 100 ಮನೆಗಳಲ್ಲಿ ಒಳಾಂಗಣ ಧೂಮಿ ಕರಣ ಮಾಡಲು ಸೂಚಿಸಿದರು.
ಸದರಿ ವಾರ್ಡ್ ಗಳಲ್ಲಿ ಡಾ ಬಿ ಈರಣ್ಣ ತಾಲೂಕು ಆರೋಗ್ಯಾಧಿಕಾರಿಗಳು ಸಿರುಗುಪ್ಪ ಇವರು ಡೆಂಗೀ ಪ್ರಕರಣಗಳ ಮನೆ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಡೆಂಗ್ಯೂ ಜ್ವರ ಬರುವ ರೀತಿ ಅದರ ಲಕ್ಷಣಗಳು ಖಾಯಿಲೆ ಬಾರದಂತೆ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಭೀಮರಾಜ ತಾಲೂಕು ಆರೋಗ್ಯ ಅಧಿಕಾರಿಗಳು ಇದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಕರೂರು ಮತ್ತು ಶಿರಿಗೇರಿ ಹಾಗೂ ತಾಳೂರಿನ ಎಲ್ಲಾ ಪ್ರಾಥಮಿಕ ಆರೋಗ್ಯ ಸುರಕ್ಷತ ಅಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ನಿಯೋಜನೆ ಮಾಡಿಕೊಂಡು ಮನೆ ಮನೆಗೆ ತೆರಳಿ ಲಾರ್ವ ಸಮೀಕ್ಷೆ, ಆರೋಗ್ಯ ಶಿಕ್ಷಣ ನೀಡಲು ಸಮುದಾಯ ಆರೋಗ್ಯ ಕೇಂದ್ರ ತೆಕ್ಕಲಕೋಟೆಯ ಪಿ ಹೆಚ್ ಸಿ ಓ ಮತ್ತು ಹೆಚ್ ಐ ಓ ಆಶಾ ಕಾರ್ಯಕರ್ತೆಯರೊಂದಿಗೆ 25 ತಂಡಗಳನ್ನು ರಚಿಸಿದರು.
ಆ ತಂಡಗಳು ಮನೆ ಮನೆ ಭೇಟಿ ನೀಡಿ ಲಾರ್ವ ಸಮೀಕ್ಷೆ, ಜ್ವರ ಸಮೀಕ್ಷೆ ಹಾಗೂ ಆರೋಗ್ಯ ಅರಿವು ಮೂಡಿಸಿದರು.
ರವೀಂದ್ರ ಜಿನಗಾ . ನಾಗರಾಜ ಜಿಲ್ಲಾ ಮಲೇರಿಯ ನಿಯಂತ್ರಣ ಕಛೇರಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಬಳ್ಳಾರಿ ಇವರು ಮನೆ ಮನೆ ಭೇಟಿ ನೀಡಿ ಲಾರ್ವ ಸಮೀಕ್ಷೆಯ ಅಡ್ಡ ತಪಾಸಣೆ ಮಾಡಿ ಆರೋಗ್ಯ ಶಿಕ್ಷಣ ನೀಡಿದರು. ಆರೋಗ್ಯ ಶಿಕ್ಷಣ ನೀಡಿದರು.
ರಾಚೋಟಯ್ಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹಾಗೂ ಶ್ರೀನಿವಾಸ ಮಲೇರಿಯ ತಾಂತ್ರಿಕ ಮೇಲ್ವಿಚಾರಕರು ಇವರು ಲಾರ್ವ ಪ್ರಾತ್ಯಕ್ಷತೆಯನ್ನು ತೋರಿಸುವ ಮೂಲಕ ಆರೋಗ್ಯ ಶಿಕ್ಷಣ ನೀಡಿದರು.
ಎ.ಅಬ್ದುಲ್ ನಬಿ ಪಟ್ಟಣ ಪಂಚಾಯಿತಿ ತೆಕ್ಕಲಕೋಟೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಪತ್ರಕರ್ತರು ಉಪಸ್ಥಿತರಿದ್ದರು.