IMG_20231125_162823

ತಂತ್ರಜ್ಞಾನದ ಕಾಲದಲ್ಲೂ ಕನ್ನಡ ಉಳಿಸಿ

ಪತ್ರಕರ್ತ ಪ್ರಮೋದ್ ಜಿ.ಕೆ. ಅಭಿಮತ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 25-  ಇಂದು ಮಾಹಿತಿ ತಂತ್ರಜ್ಞಾನದ ಪ್ರಭಾವಕ್ಕೆ ಒಳಗಾಗಿ ಕನ್ನಡ ಭಾಷಾಭಿಮಾನ ಕುಂಠಿತವಾಗಿದೆ .ಇದರ ಮಧ್ಯೆ ಕನ್ನಡ ಬೆಳೆಸಿ ಉಳಿಸುವ ಕಾರ್ಯ ಮಾಡೋಣ ಎಂದು ಪತ್ರಕರ್ತ ಪ್ರಮೋದ್ ಜಿ ಕೆ, ಅಭಿಮತ ವ್ಯಕ್ತಪಡಿಸಿದರು.

ಅವರು ಭಾಗ್ಯನಗರದ ಪಯೋನಿರಾ ಪಬ್ಲಿಕ್ ಶಾಲೆಯಲ್ಲಿ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಆಯೋಜಿಸಿದ್ದ ದಿ. ಬಸಪ್ಪ ಕೆಂಚಪ್ಪ ದಿವಟರ್, ದಿ ಯಮನಪ್ಪ ನಿಂಗಪ್ಪ ಮುರಳಿ, ದಿ. ಮರಿಗೌಡ ಮಲ್ಲನಗೌಡರ, ದಿ ಅಂದಮ್ಮ ಮರಿಗೌಡ ಮಲ್ಲನಗೌಡರ ಅವರ ದತ್ತಿ ಉಪನ್ಯಾಸ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಕನ್ನಡಕ್ಕೆ ತನ್ನದೇ ಆದ ಸ್ಥಾನ ಮಾನವಿದೆ. ಇಂದು ಮಾಹಿತಿ ತಂತ್ರಜ್ಞಾನದ ಹೊಡೆತಕ್ಕೆ ನಲುಗಿದೆ ಆದರೆ ಮಾತೃಭಾಷೆಯಲ್ಲಿ ಸಂಸ್ಕೃತಿ ಅಭಿಮಾನವಿದೆ ಎಂದು ಹೇಳಿದರು.


ಸ್ಪಟಿಕ ಹೂ ಸಂಜೀವಿನಿ ಗಿಡದಲ್ಲಿ ಇದ್ದಂತೆ ಕನ್ನಡಿಗರ ಹೃದಯದಲ್ಲಿ ಆತ್ಮಾಭಿಮಾನವಿದೆ ಎಂದು ಸಾಹಿತ್ಯಿಕ ಮತ್ತು ಸಾಮಾಜಿಕ ಜವಾಬ್ದಾರಿ ವಿಷಯ ಕುರಿತು ವಿಚಾರ ಮಂಡಿಸಿದ ದಾವಲ್ ಸಾಬ್ ಮುಜಾವರ ಅವರು ನುಡಿದರು.
ಜೀವನದ ಮೌಲ್ಯಗಳನ್ನು, ಬದುಕನ್ನು ಕಟ್ಟಿಕೊಡುವ ಶಕ್ತಿ ಇಂದಿಗೂ ವಚನ ಸಾಹಿತ್ಯಕ್ಕಿದೆ ಎಂದು ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಶರಣಪ್ಪ ಬಳಿಗಾರ್ ಅಭಿಪ್ರಾಯಪಟ್ಟರು.
ಮಕ್ಕಳು ಓದಿನ ಜೊತೆಗೆ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತ ಸಾಧೀಕಲಿ ಕರೆ ನೀಡಿದರು.
ಒಳ್ಳೆಯ ಕೇಳುಗ ಜ್ಞಾನ ಸಂಪಾದನೆ ಮಾಡುತ್ತಾನೆ ಎಂದು ಈ ಶಾಲೆಯ ಪ್ರಾಂಶುಪಾಲರಾದ ದತ್ತಾತ್ರೇಯ ಸಾಗರ ಮಕ್ಕಳಿಗೆ ಕಿವಿ ಮಾತು ಹೇಳಿದರು.
ಈ ವರ್ಷ ವರ್ಷಪೂರ್ತಿ ಕನ್ನಡ ಕಾರ್ಯಕ್ರಮ ಸಂಘಟಿಸಲಾಗುವುದು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಘಟಕದ ಅಧ್ಯಕ್ಷ ರಾಮಚಂದ್ರಗೌಡ ಬಿ ಗೊಂಡಬಾಳ ಅವರು ತಿಳಿಸಿದರು.
ಈ ಸಮಾರಂಭದಲ್ಲಿ ಕವಯತ್ರಿ ಮಾಲಾ ಬಡಿಗೇರ, ಡಾ. ಮಹಾಂತೇಶ ಮಲ್ಲನಗೌಡರ, ಗಿರೀಶ್ ಪಾನಘಂಟಿ, ಚನ್ನಬಸಪ್ಪ ಕಡ್ಡಿಪುಡಿ, ರಮೇಶ ತುಪ್ಪದ, ಶಿವಕುಮಾರ ಕುಕನೂರು, ಸೋಮನಗೌಡ ವರಗನಾಳ, ಮಂಜುನಾಥ ಅಂಗಡಿ, ಶರಣು ಡೊಳ್ಳಿನ, ಮಹೇಶ್ ಗೌಡ ಗೊಂಡಬಾಳ , ವಿನೋದ್ ಡೊಳ್ಳಿನ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದತ್ತಿ ಪ್ರಶಸ್ತಿಗಳಿಗೆ ಭಾಜನರಾದ ಯಲ್ಲಪ್ಪ ಹರ್ನಾಳಗಿ ( ಬಿಸಿಲು ಬಾಯಾರಿದಾಗ ಕವನಸಂಕಲನ ), ಜಹಾನ್ ಆರಾ ಕೊಳೂರು ( ನನ್ನೂರ ಕೌದಿ ಕೃತಿ ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಹ್ಯಾಟಿ ನಿರೂಪಿಸಿದರೆ, ಶ್ರೀನಿವಾಸ ಬಡಿಗೇರ ಆಶಯ ನುಡಿಯನ್ನು ಹೇಳಿದರು. ಬಸವರಾಜ ಶಿರಗುಂಪ್ಪಿ ಶೆಟ್ಟರ್ ಸ್ವಾಗತಿಸಿದರೆ ಶಿಲ್ಪಾ ಗಣಾಚಾರಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!