
ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿ : ಮುದ್ದಾಬಳ್ಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಕನಕಗಿರಿ ಹಾಗೂ ಆನೆಗೊಂದಿ ಉತ್ಸವದ ಕಲಾವಿದರ ಕುರಿತು ಸಹೋದರ ಸಮಾನರಾದ ಭಾಷಾ ಹಿರೇಮನಿ ಕಿನ್ನಾಳ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಎಲ್ಲ ಆರೋಪಗಳು ನಿರಾಧಾರ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿ ಎಂದು ಕಲಾವಿದ ಕೆ.ಎಫ್.ಮುದ್ದಾಬಳ್ಳಿ ಆಗ್ರಹಿಸಿದರು.
ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಕಲಾವಿದರಿರುವ ಕುಟುಂಬ ಸಂಗೀತ, ಸಾಹಿತ್ಯ ಕಲೆ ನಮ್ಮ ಕುಟುಂಬಕ್ಕೆ ಮೊದಲಿನಿಂದಲೂ ಬಂದ ಬಳುವಳಿ. ಈಗ ನಾವೆಲ್ಲ ವಿಭಕ್ತ ಕುಟುಂಬ. ಪ್ರತ್ಯೇಕವಾಗಿ ವಾಸವಾಗಿದ್ದು ಉತ್ಸವದ ಸಂದರ್ಭದಲ್ಲಿ ಅವಕಾಶಕ್ಕಾಗಿ ಅರ್ಜಿ ಹಾಕಬಾರದೇ? ಅವಕಾಶ ಸಿಕ್ಕರೆ ಬಳಸಿಕೊಳ್ಳಬಾರದೇ? ಎಂದು ಪ್ರಶ್ನಿಸಿದರು.
ಸಂಭಾವನೆ ಹಣದಲ್ಲಿ ಪರ್ಸಂಟೇಜ್ ಮಾತನಾಡಿಕೊಂಡು ಒಂದೇ ಕುಟುಂಬದ ಮೂವರಿಗೆ ಎರಡೂ ಉತ್ಸವಗಳಲ್ಲಿ ಅವಕಾಶ ನೀಡಲಾಗಿದೆ ಎಂಬುದು ಶುದ್ಧ ಸುಳ್ಳು. ಅವಕಾಶ ಸಿಕ್ಕಿದ್ದು ನಿಜ, ಆದರೆ ಸಂಭಾವನೆಯ ಪರ್ಸಂಟೇಜ್‌ನಿಂದಲ್ಲ, ಕಲಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಗಳ ಹಿನ್ನೆಲೆ ನೋಡಿಕೊಂಡು ಅವಕಾಶ ಕೊಟ್ಟಿದ್ದಾರೆ ಎಂದು ಭಾವಿಸಿದ್ದೇನೆ. ಇದರಲ್ಲಿ ಅನುಮಾನಿಸುವ ಅಂಶಗಳಿದ್ದರೆ ಈ ಬಗ್ಗೆ ತನಿಖೆಯಾಗಲಿ, ತಪ್ಪಿತಸ್ಥರು ಕಲಾವಿದರೇ ಇರಲಿ, ಅಧಿಕಾರಿಗಳೇ ಇರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಲೀಲ್ ಪಾಷಾ ಮುದ್ದಾಬಳ್ಳಿ ಇದ್ದರು.