
ತರಲಕಟ್ಟಿ ಮಾರುತೇಶ್ವರ ಸ್ವಾಮಿ ಹುಂಡಿ ಹಣ ಎಣಿಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 22- ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಗುರುವಾರ ನಡೆಯಿತು.
ಗ್ರಾಮದ ಮುಖಂಡರು ಹಣ ಎಣಿಕೆ ಮಾಡಲಾಗಿದ್ದು, 40160 ರೂಪಾಯಿ ಹಣ ಸಂಗ್ರಹವಾಗಿದೆ. ಇದರಲ್ಲಿ ಮೂರು ಪೂರಾತನ ಕಾಲದ ನಾಣ್ಯಗಳು ಸಂಗ್ರಹವಾಗಿವೆ ಜಾತ್ರೆ ಮಾಡಿ ಉಳಿದ ಹಣ ಮತ್ತು ಹುಂಡೆಯಲ್ಲಿ ಸಂಗ್ರಹವಾದ ಹಣದಿಂದ ದೇವಸ್ಥಾನ ಜಿರ್ಣೋದ್ದಾರ ಮಾಡಿಸುವದಾಗಿ ಮುಖಂಡರುಗಳಾದ ಸೋಮಲಿಂಗನಗೌಡ ಮಾಲಿ ಪಾಟೀಲ್, ವೀರನಗೌಡ ಪೋಲೀಸ್ ಪಾಟೀಲ್ ಹೇಳಿದರು.
ಮುಖಂಡರುಗಳಾದ ಪ್ರಭುಗೌಡ ಪೋಲೀಸ್ ಪಾಟೀಲ್, ಗ್ರಾಮ ಪಂಚಾಯತ ಸದಸ್ಯ ಬಸಪ್ಪ ಕೊಳೂರು, ಬಸವರಾಜ ವಲ್ಮಕೊಂಡಿ, ಅಶೋಕ ಕೊಡದಾಳ, ತೋಟಪ್ಪ ಬೇವೂರು, ದೊಡ್ಡನಗೌಡ ಮಾಲಿಪಾಟೀಲ್, ಹನಮಂತಪ್ಪ ಹುಗ್ಗೆಪ್ಪ ನವರ, ವೀರನಗೌಡ ಮಾಲಿಪಾಟೀಲ್, ಹಿರಣ್ಯಾಕ್ಷಗೌಡ ಮಾಲಿಪಾಟೀಲ್ ನಾಗಪ್ಪ ಪೂಜಾರ, ದೇವೇಂದ್ರಪ್ಪ ಪೂಜಾರ, ನಾಗಪ್ಪಜ್ಜ ಗೊಂದಿ, ಬಸಣ್ಣ ಹುಳ್ಳಿ, ಕರಿಯಪ್ಪ ವಡ್ಡರ, ಮಂಜಪ್ಪ ಮೇಟಿ ಮತ್ತು ಇತರರು ಭಾಗವಹಿಸಿದ್ದರು