
ತರಲಕಟ್ಟಿ ರಸ್ತೆಯಲ್ಲಿ ಕಸದರಾಶಿ
ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ
ಕರುಣಾಡ ಬೆಲಗು ಸುದ್ದಿ
ಯಲಬುರ್ಗಾ17 ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಮೇನ್ ರಸ್ತೆಯಲ್ಲಿ ಕಸ. ಮತ್ತು ತಿಪ್ಪೆಗಳ ರಾಶಿ ರಾಶಿ ಹಾಕಿರುವದರಿಂದ ತ್ಯಾಜ್ಯಗಳ ತಾಣವಾಗಿದೆ ಇದನ್ನು ಕಂಡ ಕಾಣದಂತೆ ಕಣ್ಣುಂಚಿ ಕುಳಿತುಕೊಂಡ ಗ್ರಾಮ ಪಂಚಾಯಿತಿ ಅಧಿಕಾರಿ ಗಳು.ರಸ್ತೆಯ ಮೇಲೆ ಬಸ್. ಬೈಕ್ ಗಾಡಿ ಓಡಾಡಲು ತೊಂದರೆಯಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ವಾರ್ಡ ಸದಸ್ಯರು. ಯಾವುದೇ ಕ್ರಮಕೈಗೊಂಡಿಲ್ಲಾ. ಇದು ಗ್ರಾಮಸ್ಥರ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಓವರ ಹೆಡ್ ಟ್ಯಾಂಕಿನಿಂದ ರಂಗಮಂದಿರದ ವರಗೆ ತಿಪ್ಪೆಗಳು ಹಾಕಿರುವದರಿಂದ ತರಲಕಟ್ಟಿ ಗ್ರಾಮವು ಇಷ್ಟು ನಿರ್ಲಕ್ಷವಾಗಿದೆ ಎಂದು ಪ್ರಯಾಣಿಕರು ಮಾತನಾಡಿಕೊಳ್ಳುತ್ತಾರೆ ನೋಡುಗರಿಗೆ ಗ್ರಾಮದಲ್ಲಿ ತಿಪ್ಪೆಯ ಕಸ ಚಲ್ಲಾಪಿಲ್ಲಿಯಾಗಿ ಬಿದ್ದಿರುವದು ನೋಡಿದರೆ ಬೇಸರದ ಸಂಗತಿಯಾಗಿದೆ. ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಸ. ತಿಪ್ಪೆಗಳು ಸ್ವಾಗತವನ್ನು ನೀಡುತ್ತದೆ
ಕಸದ ರಾಶಿ ಅಷ್ಟೆಯಲ್ಲ ಕೃಷಿ ಪರಿಕರಣಗಳಾದ ಕುಂಟೆ ಮಡಿಕೆ.ಎತ್ತಿನ ಚಕ್ಕಡಿ ಬಂಡಿ. ಮತ್ತು ಬೆಳಿಗ್ಗೆ ಮತ್ತು ಸಂಜೆ ಜಾನುವಾರುಗಳನ್ನ ರಸ್ತೆಯ ಮೇಲೆ ಕಟ್ಟುವದು ಮತ್ತು ಗೃಹ ಬಳಕೆಯ ಕಟ್ಟಿಗೆಗಳು ಕಲ್ಲು ರಸ್ತೆಯ ಮೇಲೆ ಹಾಕಿರುವದರಿಂದ ಸಂಚಾರಕ್ಕೆ ತೊಂದರೆ ಯಾಗಿದೆ ಒಂದು ವಾಹನ ಬಂದರೆ ಮತ್ತೋಂದು ವಾಹನ ಎದುರಿಗೆ ಬರುವಹಾಗಿಲ್ಲ ಅಷ್ಟೋಂದು ರಸ್ತೆ ಚಿಕ್ಕದಾಗಿದೆ ಇದೇ ರಸ್ತೆಯ ಮೇಲೆ ಸಾಕಷ್ಟು ಬಾರಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಇದು ಕಾಣುವದಿಲ್ಲವೆ…? ಅಥವಾ ಕಂಡರು ಕಾಣದಂತೆ ಕೈ ಕಟ್ಟಿ ಕುಳಿತುಕೊಂಡಿರುವದು ಯಾವ ನ್ಯಾಯ..? ಎಂದು ಪ್ರಯಾಣಿಕರು ಮಾತನಾಡಿಕೊಳ್ಳುತಿದ್ದಾರೆ
ರಸ್ತೆ ಸಾರ್ವಜನಿಕ ಆಸ್ತಿ ರಸ್ತೆಯ ಮೇಲೆ ಯಾರು ತಿಪ್ಪೆಗಳನ್ನು ಹಾಕುವದಾಗಲಿ ಜಾನುವಾರುಗಳನ್ನು
ರಸ್ತೆಯ ಬದಿ ಕಟ್ಟುವದಾಗಲಿ,ಮಾಡಬಾರದು ಇದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತದೆ ಸಾರ್ವಜನಿಕ ಆಸ್ತಿ ಪ್ರತಿಯೂಬ್ಬರು ಸ್ವಛ್ಚತೆ ಕಾಪಾಡಿಕೊಂಡು ಹೋಗಬೇಕು ಅದನ್ನು ಬಿಟ್ಟು ರಸ್ತೆಯ ಬದಿ ಕಸ. ತಿಪ್ಪೆರಾಶಿ ಇದನ್ನುಹಾಕುವದರಿಂದ ಏನಾದರು ಅಪಘಾತ ಸಂಭವಿಸಿದರೆ ಅದಕ್ಕೆ ತಿಪ್ಪೆಗಳ ರಾಶಿ ಹಾಕಿದವರೆ ಹೊಣೆಗಾರರಾಗ ಬೇಕಾಗುತ್ತದೆ ಎಂದು ಹೇಳಿದರು ಇನ್ನೂ ಮುಂದಾದರು ಸ್ವಚ್ಛತೆ ಕಡೇ ಗಮನಹರಿಸಿ ರಸ್ತೆಯ ಮೇಲೆ ಇರುವ ಕಸ ತಿಪ್ಪೆಗಳನ್ನು ತೆರವುಗೊಳಿಸಬೇಕು ಎಂದು ಮಲ್ಲನಗೌಡ ಪೋಲಿಸ್ ಪಾಟೀಲ ನ್ಯಾಯವಾದಿಗಳು ತರಲಕಟ್ಟಿ ಹೇಳಿದರು.