
ತಾಲೂಕ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 27- ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಸದಸ್ಯರ ಆಯ್ಕೆ ಘೋಷಿಸಲಾಗಿದೆ. ಒಟ್ಟು 15 ಸ್ಥಾನಗಳಿಗೆ ಇದೇ 30ರಂದು ಮತದಾನ ನಡೆಯಬೇಕಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ಮೀಸಲಿದ್ದ ಕ್ಷೇತ್ರಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ವೆಂಕರಡ್ಡಿ ಘೋಷಿಸಿದ್ದಾರೆ.
ಸಾಮಾನ್ಯ ಕ್ಷೇತ್ರಕ್ಕೆ ಸಾಲಭಾವಿ ಶಾಲೆಯ ಶಿಕ್ಷಕ ಶಿವಪುತ್ರಪ್ಪ ಲಂಬಾಣಿ, ಲಕಮಾಪುರ ಶಾಲೆಯ ಈಶ್ವರಯ್ಯ ಹಲಸಿನಮರದ, ಗಾವರಾಳ ಶಾಲೆಯ ನಾಗರಾಜ ಹನಸಿ, ಗುದ್ದೆಪ್ಪನಮಠ ಶಾಲೆಯ ಬಾಬುಸಾಬ ಕೆ., ಶಿರೂರ ಶಾಲೆಯ ಸಂಗಪ್ಪ ರಾಜೂರ, ಬಂಡಿ ಶಾಲೆಯ ಬಸವನಗೌಡ ರಾಯನಗೌಡ್ರ, ಲಿಂಗನಬಂಡಿ ಶಾಲೆಯ ಲಿಂಗಪ್ಪ ಹಡಪದ, ಕುಡಗುಂಟಿ ಶಾಲೆಯ ಗುಂಡಪ್ಪ ಅಸೂಟಿ, ಬೇವೂರು ಶಾಲೆಯ ಮೆಹಬೂಬಸಾಬ ಉಮಚಗಿ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿಗೆ ಮೀಸಲಿದ್ದ ಕ್ಷೇತ್ರಕ್ಕೆ ಮುರಡಿ ತಾಂಡಾದ ರಮೇಶ ಕಾರಭಾರಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಕ್ಷೇತ್ರಕ್ಕೆ ಕುದ್ರಿಮೋತಿ ಶಾಲೆಯ ಮಂಗಳಪ್ಪ ಯಲಿಗಾರ, ಹಿಂದುಳಿದ ಅ ವರ್ಗಕ್ಕೆ ಕಲ್ಲೂರು ಶಾಲೆಯ ಮಂಜುನಾಥ ತುರುಬಾಳ, ಹಿಂದುಳಿದ ಬ ವರ್ಗಕ್ಕೆ ಸಿದ್ದೆಕೊಪ್ಪದ ಶಿವಕುಮಾರ ಹೊಂಬಳ, ಮಹಿಳಾ ಮೀಸಲು ಕ್ಷೇತ್ರಕ್ಕೆ ಮುಧೋಳ ಶಾಲೆಯ ಶಿಕ್ಷಕಿ ಸುವರ್ಣ ಪಾಟೀಲ ಹಾಗೂ ಕುದ್ರಿಕೊಟಗಿ ಶಾಲೆಯ ಅನ್ನಪೂರ್ಣ ಪಾಟೀಲ ಚುನಾಯಿತರಾಗಿದ್ದಾರೆ.