
ತಾಳಕನಕಾಪೂರದಲ್ಲಿ ಉಚಿತ ಆರೋಗ್ಯ ಶಿಬಿರ
ಆಯುರ್ವೇದವು ಜನಗಳ ಮನೆ ಮುಟ್ಟಲಿ : ಸಿರವಾರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,೨೨- ಜನರಿಗೆ ಆಯುರ್ವೇದ ಮರಿಚೀಕೆಯಾಗಿದ್ದು ಆಯುರ್ವೇದವು ಜನಗಳ ಮನೆ ಮುಟ್ಟ ಬೇಕಿದ್ದು ಸರ್ಕಾರದ ಆಯುರ್ವೇದವನ್ನು ಮನೆ ಮನೆಗೆ ಮುಟ್ಟಿಸಲು ಶ್ರಮವಹಿಸುತ್ತಿದೆ ಜನರು ಇದರ ಸದುಪಯೋಗ ಪಡೆದು ಕೋಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ವೈ.ಜೆ.ಸಿರವಾರ್ ಹೇಳಿದರು.
ಅವರು ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯಿತ್ ಕೊಪ್ಪಳ ಮತ್ತು ಜಿಲ್ಲಾ ಆಯುಷ್ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ತಾಳಕನಕಾಪುರದಲ್ಲಿ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಖ್ಯವಾಗಿ ಪರಿಶಿಷ್ಠ ಜಾತಿ ಜನಾಂಗಗಳಿಗೆ ಆಯುರ್ವೇದ ಮರಿಚೀಕೆಯಾದ್ದರಿಂದ ಆಯುರ್ವೇದವು ಅಂತ ಜನಗಳ ಮನೆ ಮುಟ್ಟಲಿ ಎನ್ನುವ ಉದ್ದೇಶದಿಂದ ಇಂದು ಈ ಕಾರ್ಯಕ್ರಮವನ್ನು ತಾಳಕನಕಾಪುರದಲ್ಲಿ ಹಮ್ಮಿಕೊಂಡಿದೆ ನಾಗರಿಕರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತಾಡಿದ ಡಾ. ರಾಜಶೇಖರ ನಾರನಾಳ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಆಯುರ್ವೇದ ಮನೆ ಮತ್ತು ಮನಗಳಿಗೆ ತಲುಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಆಯುರ್ವೇದವನ್ನು ಮುಖ್ಯವಾಹಿನಿಗೆ ತರಲು ಬಯಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾಮದ ಮುಖಂಡ ವೀರಣ್ಣ ಕಟ್ಟಿಮನಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಆಗಮಿಸಿದ ಗ್ರಾಮಪಂಚಾಯತ್ ಸದಸ್ಯ ಜಗದೀಶ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಾ. ಜ್ಯೋತಿ ಮತ್ತು ಡಾ. ಶಿಲ್ಪಾ ಅವರು ಮನೆ ಮದ್ದು ಮತ್ತು ಅದರ ಪ್ರಾತ್ಯೆಕ್ಷತೆಯನ್ನು ತಿಳಿಸಿದರು. ಡಾ. ಶೈಬಾಜ್ ಗುತ್ತಿಯವರು ಆಯುರ್ವೇದ ಪ್ರಾಮುಖ್ಯತೆ ಮತ್ತು ದಿನಚರ್ಯೆ ಮತ್ತು ಋತು ಚರ್ಚೆಯ ಬಗ್ಗೆ ಜನರಿಗೆ ಮಾಹಿತಿ ತಿಳಿಸಿಕೊಟ್ಟರು .
ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು ಒಟ್ಟಾಗಿ 175 ಜನರು ಇದರ ಫಲಾನುಭವಿಗಳಾದರು . ಈಕಾರ್ಯಕ್ರಮದಲ್ಲಿ ಯೋಗವನ್ನು ಕಲಿಸಿಕೊಡಲಾಯಿತು. ಊರಿನ ಮನೆ ಮನೆಗೆ ಹೋಗಿ ಆಯುರ್ವೇದ ಸಸಿಗಳನ್ನು ಮತ್ತು ಆಯುರ್ವೇದ ಔಷಧಿಯ ಕಿಟ್ ಬ್ಯಾಗನ್ನು ಜನರಿಗೆ ಹಂಚಲಾಯಿತು.
ಗ್ರಾಮಪಂಚಾಯತ ಅಧ್ಯಕ್ಷ ಈರಣ್ಣ ಕಟ್ಟಿಮನಿಯವರು ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಧ್ಯಾಮಣ್ಣ ಮತ್ತು ಗ್ರಾಮಪಂಚಾಯತ್ ಸದಸ್ಯ ರವಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ .ಎಫ್. ಅನುಷ್ಠಾನ ಅಧಿಕಾರಿ ಸ್ವಾಗತವನ್ನು ಡಾ.ಕವಿತಾ ಹೆಚ್ ನೆರವೇರಿಸದರು , ಕಾರ್ಯಕ್ರಮದ ನಿರೂಪಣೆಯನ್ನು ರೇಶ್ಮಾ ಯೋಗ ತರಬೇತುದಾರರು ನೆಡಸಿಕೊಟ್ಟರು.