1837a0cd-45e8-4abc-80de-e3945db9dc20

ತಾಳಕೇರಿ ಪ್ರಗತಿ ಪರ ರೈತ ಸೋಗಲಿಂಗಪ್ಪ

ಮಂತ್ರಿ ಹೊಲದಲ್ಲಿ ಕ್ಷೇತ್ರೋತ್ಸವ

ಕರುನಾಡ ಬೆಳಗು ಸುದ್ದಿ

ಯಲಬುರ್ಗ, 31 – ದೇಶದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ.ಇದ್ದಷ್ಟು ಕಡಿಮೆ ಭೂಮಿಯಲ್ಲಿ , ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವುದು ಇವತ್ತಿನ ದಿನಮಾನಗಳಲ್ಲಿ ಅನಿವಾರ್ಯವಾಗಿದೆ , ನಮ್ಮ ದೆಶಕ್ಕೆ ಆಹಾರ ಭದ್ರತೆ ಸಮಸ್ಯ ಉಂಟಾಗಬಾರದು ಆದ್ದರಿಂದ ನಾವೂ ನೀವೂಗಳು ಸುಧಾರಿತ ತಳಿಗಳನ್ನೇ ಬೆಳೆಯಬೇಕು.
ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಮತ್ತು ರೈತರು ಬಿತ್ತನೆ ಮಾಡುವ ಮುನ್ನ ಬೀಜಗಳ ಆಯ್ಕೆಯಲ್ಲಿ ವಿಚಾರಮಾಡಿ ಬೀಜಗಳನ್ನು ಖರದಿ ಮಾಡಬೇಕೆಂದು ಕಾವೇರಿ ಸಿಡ್ಸ ಕಂಪನಿಯ ಎಸ್,ಓ ನೀಲಪ್ಪ ಗೋಡಿ ಹೇಳಿದರು .
ಅವರು ತಾಲೂಕಿನ ತಾಳಕೇರಿ ಗ್ರಾಮದ ಪ್ರಗತಿ ಪರ ರೈತ ಸೋಮಲಿಂಗಪ್ಪ ಮಂತ್ರಿ ಅವರ ಕೃಷಿ ಹೊಲದಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಭೂಮಿತಾಯಿಗೆ ಒಳ್ಳೆ ಇಳುವರಿ ನೀಡುವಂತ ಬಿಜಗಳಾದಂತ ಕಾವೇರಿ 244, 8333, ಮತ್ತು 25 K55 ಗಳಂತ ಬೀಜಗಳನ್ನು ಬಿತ್ತನೆಗೆ ಮಾಡುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು. ನೇರವಾಗಿ ರೈತ ಸೋಮಲಿಂಗಪ್ಪ ಮಂತ್ರಿಯವರ ಜಮೀನಿನಲ್ಲಿ ತೋರಿಸುವುದರ ಮೂಲಕ ವಿವರಿಸಿದರು ‘ಕಾವೇರಿ -244 ತಳಿಯ ಮೆಕ್ಕೇಜೋಳ ಬೆಳೆದರೆ ಎಕರೆಗೆ 40-45 ಕ್ವಿಂಟಲ್‌ವರೆಗೂ ಇಳುವರಿ ಪಡೆಯಬಹುದೆಂದು ಹೇಳಿದರು.

ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ, ಪ್ರಗತಿಪರ ರೈತರಾದ ಸೋಮಲಿಂಗಪ್ಪ ಮಂತ್ರಿ ಮೈಲಾರಪ್ಪ ಎಸ್,ಜಗದೀಶ ದೇವಲ್,ಹನಮೇಶ ಕೊಂಡಗುರಿ,ನಾಗರಾಜ ಕುಷ್ಟಗಿ,ನಾಗಬಸಪ್ಪ ಮೂದೇನೂರ,ಚಂದ್ರು ಚಳಗೇರಾ ಬಸಣ್ಣ ಹನಮಸಾಗರ ಎಪಿಎಂಸಿ ಮಾಜಿ ಸದಸ್ಯ ಹನಮಂತಪ್ಪ ದೇವಲ್,ಚಿದಾನಂದಪ್ಪ ಹರಕಂಗಿ ಶರಣಪ್ಪ ಸಿದ್ದಾಪೂರ,ದೇವಪ್ಪ ಹರಕಂಗಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!