
ತಾಳೂರಿನ ಗೋದಾಮಿನಲ್ಲಿ ಕಳ್ಳತನದ 330 ಚೀಲ ಭತ್ತ ಪೊಲೀಸರಿಂದ ವಶ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 5- ತಾಲೂಕು ತಾಳೂರು ಗ್ರಾಮದ ಗೋದಾಮಿನಲ್ಲಿ ಭತ್ತ ತುಂಬಿದ ಚೀಲಗಳನ್ನು ಸಂಗ್ರಹಿಸಿ ಇಡಲಾಗಿದ್ದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ಪೋಲಿಸ್ ಡಿ ವೈ ಎಸ್ ಪಿ ವೆಂಕಟೇಶ್ ಉಗಿಬಂಡಿ ತೆಕ್ಕಲಕೋಟೆ ಸಿಪಿಐ ಸುಂದರೇಶ್ ಕೆ ಹೊಳೆಣ್ಣವರ್ ಪಿಎಸ್ಐ ಶಾಂತಮೂರ್ತಿ ಸಿರಿಗೇರಿ ಪಿಎಸ್ಐ ಶ್ರೀನಿವಾಸ್ ಇವರ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ ಆರೋಪಿ ಚಿತ್ರದುರ್ಗ ಜಿಲ್ಲೆಯ ಚಿಪ್ಪಿನಕೆರೆ ಗ್ರಾಮದ ಮುದ್ದು ರಾಜನನ್ನು ಬಂಧಿಸಿ ಎಂಟು ಲಕ್ಷ ರೂ ಮೌಲ್ಯದ 330 ಚೀಲ ತುಂಬಿದ ಭತ್ತವನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕಳೆದ ವರ್ಷ ಜುಲೈ 23ರಂದು ಪ್ರಕರಣ ದಾಖಲಾಗಿತ್ತು ದಾಳಿಯ ಸಂದರ್ಭದಲ್ಲಿ ತೆಕ್ಕಲಕೋಟೆ ಪೊಲೀಸ್ ಠಾಣೆಯ ನಾಗರಾಜ ರಾಮದಾಸ್ ಅಯ್ಯಪ್ಪ ಬಿ ಖಾಸಿಂ ಸಾಬ್ ವಾಲಿಕಾರ್ ಚಂದ್ರಶೇಖರ್ ಸ್ವಾಮಿ ಎಆರ್‌ಎಸ್‌ಐ ಮೋಕ ಪೊಲೀಸ್ ಠಾಣೆಯ ಅನ್ವರ್ ಭಾಷಾ ಸಿರಿಗೇರಿ ಪೊಲೀಸ್ ಠಾಣೆಯ ರಾಮಾಂಜಿನಿ ವಿನೋದ್ ಗೌಡ ಅಮರೇಶ ಪ್ರಭಾಕರ ಭಾಗವಹಿಸಿದ್ದರು.
ಪೊಲೀಸರ ಈ ಕಾರ್ಯ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ್ ಬಂಡಾರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.