
ತಾವರಗೇರಾ; ಯಾದವ ಸಮಾಜದಿಂದ ಹಾಲುಗಂಬ ಏರುವ ಸ್ಪರ್ಧೆ
ತಾವರಗೇರಾ, 25 – ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ದಸರಾ ಹಬ್ಬದ ಪ್ರಯುಕ್ತ ಯಾದವ ಸಮಾಜದಿಂದ ಹಾಲುಗಂಬ ಏರುವ ಸ್ಪರ್ಧೆ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವು ಪಟ್ಟಣದ ಯಾದವ ಸಮಾಜದಿಂದ ಬೆಳಗ್ಗೆ ಕಂಬಕ್ಕೆ ಸೂರಮಾ, ಹಾಲು, ಮಸರು,ತುಪ್ಪ ಹಚ್ಚಿ ಸಂಪ್ರದಾಯದಂತೆ ಹಾಲುಕಂಬವನ್ನು ಏರಲು ಸಿದ್ದಪಡಿಸಲಾಯಿತು.
ಹಾಲುಕಂಬ ಏರುವ ಸ್ಪರ್ಧಾಳುಗಳನ್ನು ಸಾಲಗಟ್ಟನಿಲ್ಲಲು ತಿಳಿಸಲಾಗಿತ್ತು,ಚಿಟಿಗಳನ್ನು ಎತ್ತುವದರ ಮೂಲಕ ಸರತಿಬಂದಾಗ ಕಂಬ ಏರಲು ಅವಕಾಶ ಮಾಡಿ ಕೊಡಲಾಗಿತ್ತು, ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಶಿವನಗೌಡ ತಂ/ಹನುಮನಗೌಡ ಕಟ್ಟಿಮನಿ ಇವರು ಹಾಲುಗಂಬ ಏರುವದರ ಮೂಲಕ ವಿಜಯಶಾಲಿ ಆದರು.
ಪ್ರತಿ ವರ್ಷ ಆಡಳಿತದಲ್ಲಿ ಇರುವ ಶಾಸಕರು ವಿಜೇತರಿಗೆ ೧೧ತೊಲೆ ಬೇಳ್ಳಿ ಕಡಗವನ್ನು ನೀಡುವದು ಸಂಪ್ರದಾಯವಾಗಿ ರುಡಿಸಿಕೊಂಡು ಬರಲಾಗಿತ್ತು, ಈ ಬಾರಿ ವಿಜೇತ ಸ್ಪರ್ಧಿಗೆ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಇವರು ಸ್ಪಧೆಯಲ್ಲಿ ಗೆದ್ದ ಹನಮಪ್ಪ ಭೀಮಪ್ಪ ಬಂಗಿ ಸಾ.ಕೃಷ್ಣಗಿರಿ ಹಾಗು ಗಿರಿಯಪ್ಪ ತಂದಿ ಕೊಮಾರೆಪ್ಪ ಗದ್ದೇರಟ್ಟಿ ಇವರಿಗೆ ೧೧ತೊಲೆ ಬೆಳ್ಳಿ ಕಡಗ ನೀಡಿದರು. ಇದರ ಜೊತೆಯಲ್ಲಿ ಸಂಪ್ರದಾಯದಂತೆ ಪ.ಪಂ.ವತಿಯಿಂದ ವಸ್ತುಗಳನ್ನು ನೀಡಲಾಯಿತು.
ನಂತರ ದಶಮಿದಿಂಡು ಪಲ್ಲಕ್ಕಿಯನ್ನು ವಿವಿಧ ಸಮಾಜದ ಮುಖಂಡರ ನೇತೃತ್ವದಲ್ಲಿ ಬನ್ನಿಮಹಾಂಕಾಳಿ ಕಟ್ಟೆಗೆ ವಿವಿಧ ಮಂಗಳವಾಧ್ಯ ಹಾಗು ಭಜನೆ ಗಳೊಂದಿಗೆ ಮೆರವಣಿಗೆ ಮೂಲಕ ಕರೆತಂದು ಪೂಜೆ ಸಲ್ಲಿಸಿ, ಬನ್ನಿ ಕೊಟ್ಟು ಭಂಗಾರದ ಹಾಗೆ ಇರೋಣ ಎಂದು ಬನ್ನಿ ವಿನಿಮಯ ಮಾಡಿಕೊಂಡು ದಸರಾ ಹಬ್ಬವನ್ನು ಸಂಬ್ರಮದಿಂದ ಆಚರಿಸಲಾಯಿತು.
ಫೋಟೋ ಕ್ಯಾಫ್ಸನ್-ತಾವರಗೇರಾ ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ಯ ಯಾದವ ಸಮಾಜದಿಂದ ಹಾಲುಕಂಬ ಏರುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪಧೆಯಲ್ಲಿ ಹನುಮಪ್ಪ ಭೀಮಪ್ಪ ಬಂಗಿ ಹಾಗು ಗಿರಿಯಪ್ಪ ತಂದಿ ಕೊಮಾರೆಪ್ಪ ಕುಸೆಗಲ್ ವಿಜೇತರಾದರು.