
ತಾವರಗೇರಾ: ರಾಷ್ಟೀಯ ಅಂಧತ್ವ ನಿವಾರಣ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ತಾವರಗೇರಾ, ೦೮- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸಮುದಾಯ ಅರೋಗ್ಯ ಕೇಂದ್ರ ತಾವರಗೇರಾ ಇವರ ಸಂಯುಕ್ತ ಆಶ್ರಯದಲ್ಲಿ “ರಾಷ್ಟೀಯ ಅಂಧತ್ವ ನಿವಾರಣ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊ ಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಉಚಿತ ಕಣ್ಣಿನ ತಪಾಸಣೆ, ಅರ್ಹ ಫಲಾನುಭಾವಿಗಳನ್ನ ಆಯ್ಕೆ ಮಾಡಿ ಉಚಿತ ಕಣ್ಣಿನ ಪೊರೆ ಶಸ್ತç ಚಿಕಿತ್ಸೆ ಮಾಡಿಸುವದು ಈ ಕಾರ್ಯಕ್ರಮದ ಉದ್ದೇಶ, ಅದರಂತೆ ಸಮುದಾಯ ಆರೋಗ್ಯ ಕೇಂದ್ರ ತಾವರಗೇರಾ, ಪ್ರತಮೀಕ ಆರೋಗ್ಯ ಕೇಂದ್ರ ಮುದೇನೂರ ಹಾಗು ಹಿಮನ್ನಾಪೂರ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಿ, ಒಟ್ಟು ೩೫ ಜನರನ್ನು ಕಣ್ಣಿನ ಶಸ್ತç ಚಿಕಿತ್ಸೆಗೆ ಗುರುತಿಸಲಾಯಿತು.
ಅದರಲ್ಲಿ ೨೨ಜನ ಫಲಾನುಭವಿಗಳನ್ನು ಉಚಿತ ವಾಹನದಲ್ಲಿ ಕೊಪ್ಪಳದ ಲಯನ್ಸ ಕಣ್ಣಿನ ಆಸ್ಪತ್ರೆಗೆ ಉಚಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆಗೆ ಕಳುಹಿಸಿ ಕೊಡಲಾಯಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ತಾವರಗೇರಾದ ಸಮುದಾಯ ಆರೋಗ್ಯ ಕೇಂದ್ರದಿAದ ಉಚಿತ ವಾಹನದಲ್ಲಿ ೨೨ ಜನ ಫಲಾನುಭಾವಿಗಳನ್ನು ಕಣ್ಣಿನ ಶಸ್ತç ಚಿಕಿತ್ಸೇಗೆ ಕಳುಹಿಸಲಾಯಿತು.