
ತುಂಗಭದ್ರಾ ಜಲಾಶಯದ ಸಾಗುವಳೆ ನೀರು ನವಂಬರ್ 30ರವರೆಗೆ ಸರಬರಾಜು ಮಾಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30- ತುಂಗಭದ್ರಾ ಜಲಾಶಯದ ಸಾಗುವಳಿಯ ನೀರನ್ನು ನವಂಬರ್ 30ರವರೆಗೆ ಬಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರು ಸಂಗನಕಲ್ಲು ಕೃಷ್ಣಪ್ಪ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರವನ್ನು ಕಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಜಿಲ್ಲೆಯ ಹಲವಾರು ಕಡೆ ರೈತರು ಈಗಾಗಲೇ ಮೆಣಸಿನಕಾಯಿ, ಭತ್ತ, ಮೆಕ್ಕೆಜೋಳ, ಬೆಳೆಗಳು ಈಗ ತಾನೆ ತೆನೆ ಬಿಡುತ್ತಿದ್ದು ಬೇಸಾಯದ ಸಾಗುವಳಿಗೆ ನೀರಿನ ಅವಶ್ಯಕತೆ ಇದೆ ಎಂದರು. ಹಾಗಾಗಿ ಸರ್ಕಾರವು ಡ್ಯಾಮ್ ನಲ್ಲಿ ನೀರಿನ ಪರಿಣಾಮವನ್ನು ಗಮನದಲ್ಲಿ ಇಟ್ಟುಕೊಂಡು, ಮತ್ತೊಂದು ಕಡೆ ರೈತರಿಗೆ ನವೆಂಬರ್ 30ರವರೆಗೂ ನೀರು ಬಿಡಬೇಕೆಂದು ಒತ್ತಾಯಿಸಿದರು.
ಬೆಳೆಗಳು ಒಣಗಿ ರೈತರಿಗೆ ನಷ್ಟವಾದರೆ ಇದರಿಂದ ಆತ್ಮಹತ್ಯೆಗಳು ಆಗುವ ಸಂಭವ ಹೆಚ್ಚಾಗಿರುತ್ತದೆ ಇದರ ಬಗ್ಗೆ ನಿರ್ಲಕ್ಷ ತೋರಿದಲ್ಲಿ ಎಲ್ಲಾ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಮಾಗಡಿ ಭೂಮಿಗಳಲ್ಲಿ ಮೆಣಸಿನಕಾಯಿ ಸಾಗುವಳಿಗೆ ಒಂದು ಎಕರೆಗೆ ಒಂದು ಲಕ್ಷ, ಅದೇ ರೀತಿಯಾಗಿ ಬತ್ತಕ್ಕೆ 35,000, ಜೋಳಕ್ಕೆ ಇಪ್ಪತ್ತೈದು ಸಾವಿರ, ಹತ್ತಿಗೆ 50,000, ರೈತರು ಪೆಟ್ಟು ಬಡಿ ಇಟ್ಟಿರುವದಾಗಿ ತಿಳಿಸಿದರು. ಇಷ್ಟೆಲ್ಲ ರೈತರಿಗೆ ನಷ್ಟವಾದರೆ ಕಷ್ಟಕರ ಆದಕಾರಣ ನೀರನ್ನು ನವೆಂಬರ್ 30ರವರೆಗೆ ಹರಿಸಬೇಕು ಎಂದು ಕೋರಿದರು.
ಈ ಸಂದರ್ಭವಾಗಿ ಸಂಘದ ಸಂಘಟನಾ ಕಾರ್ಯದರ್ಶಿ ಜಗನ್ನಾಥ, ಖಜಾಂಚಿ, ಕೆ ಮಾರಣ್ಣ, ತಾಲೂಕ ಅಧ್ಯಕ್ಷರು, ಯರ್ರಿಸ್ವಾಮಿ, ಡಿ ವಿಷ್ಣುವರ್ಧನ್ ರೆಡ್ಡಿ ಮತ್ತು ಹಲವಾರು ರೈತರು ಮುಖಂಡರು ಪಾಲ್ಗೊಂಡಿದ್ದರು.