
ತುಕಾರಾಮ್ ಗೆಲುವಿಗೆ ಸಂಘಟಿತರಾಗಿ ಶ್ರಮಿಸೋಣ : ಅಲ್ಲಂ ಪ್ರಶಾಂತ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 18- ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿ ಇರುವ ತುಕಾರಾಂ ಅವರ ಅತ್ಯಧಿಕ ಮೆಜಾರಿಟಿ ಯಿಂದ ಗೆಲುವಿಗಾಗಿ ನಾವೆಲ್ಲ ಸಂಘಟಿತರಾಗಿ ಕೆಲಸ ಮಾಡೋಣ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಅಲ್ಲಂ. ಪ್ರಶಾಂತ್ ಅವರು ಹೇಳಿದರು.
ಇಂದು ಗಾಂಧಿನಗರದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲರಿಗೂ ಅನುಕೂಲವಾಗಲು ನೂತನ ಕಚೇರಿಯನ್ನು ನಗರದ ಮಧ್ಯ ಭಾಗದಲ್ಲಿ ಗಾಂಧಿನಗರದಲ್ಲಿ ವ್ಯವಸ್ಥೆ ಮಾಡಿರುವುದಾಗಿ, ಪಕ್ಷದ ಕಾರ್ಯಾಲಯಕ್ಕೆ ಪ್ರತಿದಿನ ಭೇಟಿ ನೀಡುತ್ತಾ ನಮ್ಮ ಪಕ್ಷದ ಅಭ್ಯರ್ಥಿಯಾದ ತುಕಾರಾಂ ಅವರ ಗೆಲುವಿಗಾಗಿ ಕೆಲಸ ಮಾಡಲು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಬಿ. ನಾಗೇಂದ್ರ ಮತ್ತು ನಗರ ಶಾಸಕರಾದ ನಾರಾಭರತ್ ರೆಡ್ಡಿ ನೂತನ ಕಚೇರಿ ರಿಬ್ಬನ್ ಕತ್ತರಿಸುವುದರಿಂದ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಲಿಡ್ಕರ್ ಮಂಡಳಿ ಅಧ್ಯಕ್ಷರಾದ ಮುಂಡರಗಿ ನಾಗರಾಜ್, ಬುಡ ಅಧ್ಯಕ್ಷರಾದ ಜಯಸ್ ಆಂಜನೇಯಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ ಮುರಳಿಕೃಷ್ಣ, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರಾದ ವೆಂಕಟೇಶ್ ಹೆಗಡೆ, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಕಮಲ ಮರಿಸ್ವಾಮಿ, ಮಾಜಿ ಝೆಡ್ ಪಿ ಸದಸ್ಯರು ಎ ಮಾನಯ್ಯ ಕೆಪಿಸಿಸಿ ಮೆಂಬರ್ ಎಲ್ ಮಾರಾಯಣ್ಣ ಮಹಾನಗರ ಪಾಲಿಕೆ ಮಹಾಪೌರರಾದ ಶ್ವೇತ ಉಪಮಹಪೌರರಾದ ಬೀಜಾನಕಮ್ಮ ಹಿರಿಯ ಕಾಂಗ್ರೆಸ್ ಮುಖಂಡರಾದ ರಾಮ ಪ್ರಸಾದ್, ಭಯ ಪಾರ್ಟಿ ವಿಷ್ಣುಕುಮಾರ್, ಪೇರಂ ವಿವೇಕ್, ಪಿ ಗಾದೆಪ್ಪ, ಮೊಕರುಪನಗುಡಿ ಬ್ಲಾಕ್ ಅಧ್ಯಕ್ಷರಾದ ಮೀನಳ್ಳಿ ಚಂದ್ರಶೇಖರ್, ಅಲ್ಲಾಭಕಾಶ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಮಂಜುಳಾ, ಎರಕುಲ ಸ್ವಾಮಿ, ಅಲಿ ವೇಲು ಸುರೇಶ್, ಚಾನೆಳ್,ಮಂಜುನಾಥ್, ಗಳ ಜೊತೆಗೆ ಹಲವಾರು ಮಂದಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.