
ತೆಕ್ಕಲಕೋಟೆ : ಜೆಸ್ಕಾಂ 250 ಕಿವಾ ಟಿಸಿ ಅಳವಡಿಸಲು ಒತ್ತಾಯ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 25- ತಾಲೂಕು ತೆಕ್ಕಲಕೋಟೆ ಪಟ್ಟಣದ 3ನೇ ವಾರ್ಡ್ ನಿವಾಸಿಗಳು ಜೆಸ್ಕಾಂ ಜೆಇ ಯಲ್ಲಪ್ಪ ಅವರಿಗೆ ನೂರು ಕಿಲೋ ವ್ಯಾಟ್ ಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಸದಸ್ಯ ನಸಿರುದ್ದೀನ್ ಅವರು ಮಾತನಾಡಿದರು 250 ಕಿಲೋ ಗ್ರಾಹಕರಿಗಾಗಿ ವ್ಯಾಟ್ ನ ಟಿಸಿಯನ್ನು ಅಳವಡಿಸಬೇಕು ಇಲ್ಲದಿದ್ದರೆ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಯೂನುಸ್ ನಾಗರಾಜ ಸುಭಾನ್ ಆಜಂ ಮೆಹಬೂಬ್ ಬಾಷಾ ರಜಾಕ್ ಚಾಂದ್ ಬಾಷಾ ಇತರರು ಇದ್ದರು.