
ತೆಕ್ಕಲಕೋಟೆ : ಪಟ್ಟಣ ಪಂಚಾಯತ್ 2.29 ಲಕ್ಷ ರೂ ಉಳಿತಾಯ ಬಜೆಟ್ ಆಡಳಿತ ಅಧಿಕಾರಿ ತಾಹಸಿಲ್ದಾರ್ ಎಚ್ ವಿಶ್ವನಾಥ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,31 – ತಾಲೂಕು ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ತಾಲೂಕ ತಹಸಿಲ್ದಾರ್ ಹಾಗೂ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಎಚ್ ವಿಶ್ವನಾಥ ಅವರ ಅಧ್ಯಕ್ಷತೆಯಲ್ಲಿ ಬಜೆಟ್ ಸಭೆ ನಡೆಯಿತು.
ಆಡಳಿತಾಧಿಕಾರಿ ತಹಶೀಲ್ದಾರ್ ಎಚ್ ವಿಶ್ವನಾಥ ಮತ್ತು ಸದಸ್ಯರು ಅಧಿಕಾರಿಗಳು ಬಜೆಟ್ ಪ್ರತಿಯನ್ನು ಪ್ರದರ್ಶಿಸಿದರು ತೆಕ್ಕಲಕೋಟೆ ಪಟ್ಟಣದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ತಹಶೀಲ್ದಾರ್ ಎಚ್ ವಿಶ್ವನಾಥ ಅವರು ಉತ್ತಮವಾದ ಬಜೆಟ್ ತಯಾರಿಸಲಾಗಿದೆ ಎಂದು ಸರ್ವ ಸದಸ್ಯರು ಈ ಬಜೆಟ್ ಗೆ ಒಪ್ಪಿಗೆ ಸೂಚಿಸಲು ಸಭೆಯಲ್ಲಿ ಮಂಡಿಸಲಾಗುವುದು ಎಂದು ಅವರು ಹೇಳಿದರು.
2024- 25ನೇ ಸಾಲಿನ 2.29 ಲಕ್ಷ ರೂ ಉಳಿತಾಯ ಬಜೆಟ್ ಮಂಡಿಸಿದರು ಹೆಚ್ಚು ಚರ್ಚೆ ಇಲ್ಲದೆ ಸದಸ್ಯರ ಒಪ್ಪಿಗೆ ಮೇರೆಗೆ ಬಜೆಟ್ ಗೆ ಅನುಮೋದನೆ ನೀಡಲಾಯಿತು 19 ಜನ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಪಟ್ಟಣ ಪಂಚಾಯತ್ ಸಭೆಯಲ್ಲಿ ನಿರೀಕ್ಷಿತ ಆದಾಯ 19, 96, 37,000ರೂ ಹಾಗೂ 19 ,94,08,000 ರೂ ಖರ್ಚು ನಿರೀಕ್ಷಿಸಲಾಗಿದೆ ನಿರೀಕ್ಷಿತ ಆದಾಯ 15ನೇ ಹಣಕಾಸು ಯೋಜನೆಯಿಂದ 3.85ಕೋಟಿ ರೂ ಎಸ್ ಎಫ್ ಸಿ ಅನುದಾನ1 ಕೋಟಿ 92 ಲಕ್ಷ ರೂ ಶೇ.20 ಮತ್ತು ಶೇ.10 ಶೇ.7.25 ಹಾಗೂ ಶೇ.5 ಯೋಜನೆಗಳಿಂದ ರೂ.70.40 ಲಕ್ಷ ವಿದ್ಯುತ್ ಅನುದಾನ ರೂ.5.52 ಕೋಟಿ ನಾಗರೋತ್ಥಾನ ಅನುದಾನ ರೂ.1.10 ಕೋಟಿ ಡಾ ನಲ್ಮ್ ಅನುದಾನ ರೂ.22.55 ಲಕ್ಷ ಸ್ವಚ್ಛ ಭಾರತ ಅನುದಾನ ರೂ.99 ಲಕ್ಷ ಸೇರಿದಂತೆ ಒಟ್ಟು ರೂ.19,96,37,000 ಆದಾಯವನ್ನು ನಿರೀಕ್ಷಿಸಲಾಗಿದೆ.
ನಿರೀಕ್ಷಿತ ಖರ್ಚು ನೀರು ಸರಬರಾಜು ದುರಸ್ತಿ ಮತ್ತು ನಿರ್ವಹಣೆ ರೂ.7.70 ಲಕ್ಷ ಬೀದಿ ದೀಪ ಮತ್ತು ನೀರು ಸರಬರಾಜು ರೂ.5.52ಕೋಟಿ ಪರಿಶಿಷ್ಟರ ಕಲ್ಯಾಣಕ್ಕೆ ರೂ.49.50 ಲಕ್ಷ ವಿಕಲಚೇತನರ ಕಲ್ಯಾಣಕ್ಕೆ ರೂ.8.25 ಲಕ್ಷ ಪ್ರಕೃತಿ ವಿಕೋಪ ಪರಿಹಾರಕ್ಕೆ ರೂ.25 ಲಕ್ಷ ಬೀದಿ ದೀಪ ನಿರ್ವಹಣೆ ರೂ.28.50 ಲಕ್ಷ ಸಾರ್ವಜನಿಕ ಉದ್ಯಾನವನ ರೂ.5.50 ಲಕ್ಷ ಆಡಳಿತ ವೆಚ್ಚಗಳು ರೂ.1.11 ಕೋಟಿ ಕೆರೆಗಳ ಅಭಿವೃದ್ಧಿಗೆ ರೂ.1.77 ಕೋಟಿ ರಸ್ತೆಗಳ ಅಭಿವೃದ್ಧಿಗೆ ರೂ.1.81 ಕೋಟಿ ಚರಂಡಿಗಳ ನಿರ್ಮಾಣಕ್ಕೆ ರೂ.1.43 ಕೋಟಿ ಸೇರಿದಂತೆ ಒಟ್ಟೂ ರೂ.19,94,08,000 ಖರ್ಚು ನಿರೀಕ್ಷಿಸಿದೆ ಸದಸ್ಯರ ಅಸಮಾಧಾನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಫುಟ್ಪಾತ್ ಒತ್ತುವರಿಯಾಗಿದ್ದು ಡಬ್ಬಾ ಅಂಗಡಿ ತೆರವುಗೊಳಿಸಬೇಕು ಎಂದು ಸದಸ್ಯ ವಿ ಮಂಜುನಾಥ್ ಆಗ್ರಹಿಸಿದರು.
ಸಾರ್ವಜನಿಕರು ತೆರಿಗೆ ಕಟ್ಟಲು ಬಂದರೆ ಪಂಚಾಯಿತಿಗೆ ಅಲೆದಾಡಿಸುತ್ತಾರೆ ಹೀಗಾದರೆ ಪಂಚಾಯಿತಿಗೆ ಹೇಗೆ ಆದಾಯ ಬರುತ್ತದೆ ಎಂದು ಸದಸ್ಯ ಜಾಡರ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಪರಶುರಾಮ ಪಟ್ಟಣ ಪಂಚಾಯತ್ ಸದಸ್ಯರು ರಾಷ್ಟ್ರೀಯ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಪಟ್ಟಣ ಪಂಚಾಯತ್ ಸಿಬ್ಬಂದಿ ಮತ್ತಿತರರು ಹಾಜರಿದ್ದರು.