
ತೆಕ್ಕಲಕೋಟೆ : ಮನೆ ಛಾವಣಿ ಕುಸಿತ ತಹಶೀಲ್ದಾರ್ ಶಂಶೇ ಆಲಂ ಭೇಟಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 29- ತಾಲೂಕು ತೆಕ್ಕಲಕೋಟೆಯಲ್ಲಿ ಈಚೆಗೆ ಸುರಿದ ಮಳೆಯಿಂದ ನೆನೆದಿದ್ದ ಎರಡು ಮನೆಗಳ ಛಾವಣಿ ಸೋಮವಾರ ಕುಸಿದಿವೆ.
9ನೇ ವಾರ್ಡಿನ ರಾಮಲಿಂಗಮ್ಮ ಹಾಗೂ 12ನೇ ವಾರ್ಡಿನ ಶೇಖಪ್ಪ ಅವರ ಮನೆಯ ಛಾವಣಿ ಕುಸಿದಿವೆ ಅದೃಷ್ಟಾವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಆಡಳಿತ ಅಧಿಕಾರಿ ಹಾಗೂ ತಹಸಿಲ್ದಾರ್ ಶಂಸೇ ಆಲಂ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ಕಂದಾಯ ನಿರೀಕ್ಷಕ ಸುರೇಶ ಬಾಬು ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಇತರರು ಇದ್ದರು.