
ತೋಟಗಾರಿಕೆ ಇಲಾಖೆಯಿಂದ ಅರ್ಜಿ ಅಹ್ವಾನ
ಕರುನಾಡ ಬೆಳಗು ಸುದ್ದಿ
ವಿಜಯನಗರ, 22- 2024-25ನೇ ಸಾಲಿನ ವಿಜಯನಗರ ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಹಣ್ಣು (ಬಾಳೆ, ದಾಳಿಂಬೆ, ಮಾವು) ಹೂವು ಮತ್ತು ಹೈಬ್ರಿಡ್ ತರಕಾರಿಗಳ ಪ್ರದೇಶ ವಿಸ್ತರಣೆ, ನೀರು ಸಂಗ್ರಹಣಾ ಘಟಕಗಳು, ಸಂರಕ್ಷಿತ ಬೇಸಾಯದಡಿ ನೆರಳು ಪರದೆ, ಸಮಗ್ರ ರೋಗ ಅಥವಾ ಕೀಟ ನಿರ್ವಹಣೆ, ಪ್ಯಾಕ್ ಹೌಸ್, ಈರುಳ್ಳಿ, ಶೇಖರಣಾ ಘಟಕ ಮತ್ತು ತಳ್ಳುವ ಗಾಡಿ ಶೈತ್ಯಾಗಾರ ಘಟಕಗಳಿಗೆ ಸಹಾಯಧನ ಸೌಲಭ್ಯಗಳಿರುತ್ತವೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿಯಲ್ಲಿ ಹಣ್ಣಿನ ಬೆಳೆಗಳಾದ ದಾಳಿಂಬೆ, ನುಗ್ಗೆ ಮತ್ತು ಡ್ರ್ಯಾಗನ್ ಪ್ರೂಟ್, ವಿನೂತನ ತಂತ್ರಜ್ಞಾನ ಕಾರ್ಯಕ್ರಮದಡಿ ಸೋಲಾರ ಪಂಪ್ ಖರೀದಿಸಲು ಅವಕಾಶವಿರುತ್ತದೆ. ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಹನಿ ನೀರಾವರಿ ಯೋಜನೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯಕ್ರಮಗಳಿದ್ದು ರೈತರಿಗೆ ಸಹಾಯಧನ ಸೌಲಭ್ಯಗಳಿರುತ್ತವೆ. ಆಸಕ್ತ ರೈತರು ಹೊಸಪೇಟೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಹೊಸಪೇಟೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.8310291867, ಕಮಲಾಪುರದ ಸಹಾಯಕ ತೋಟಗಾರಿಕೆ ಅಧಿಕಾರಿ ದೂ.8123465548, ಹೊಸಪೇಟೆಯ ಸಹಾಯಕ ತೋಟಗಾರಿಕೆ ಅಧಿಕಾರಿ ದೂ.9902087236, ಮರಿಯಮ್ಮನಹಳ್ಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ದೂ.8073719905 ಗೆ ಸಂಪರ್ಕಿಸಬಹುದಾಗಿದೆ ಎಂದು ಹೊಸಪೇಟೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.