
ತ್ರೈಮಾಸಿಕ ಕೆಡಿಪಿ ಸಭೆ
ಸಮಸ್ಯೆಗಳ ಪರಿಹಾರಕ್ಕೆ ನಾಂದಿ
ಕರುನಾಡ ಬೆಳಗು ಸುದ್ದಿ
ಕುಕನೂರ, ೧೪- ಯಲಬುರ್ಗಾ ತಾಲೂಕ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಸಾಬ್ ಅಕ್ತಾರ ಕೊಪ್ಪಳ ಮತ್ತು ತಾಲೂಕಾ ಪಂಚಾಯತ್ ನೋಡಲ್ ಅಧಿಕಾರಿಗಳು ರವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಜರುಗಿತು.
ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಹಲವಾರು ಯೋಜನೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನೆಯನ್ನು ಮಾಡಿದರು.
ಮುಖ್ಯವಾಗಿ ಯಲಬುರ್ಗಾ ಮತ್ತು ಕುಕನೂರ ತಾಲೂಕನ್ನು ಬರಗಾಲ ತಾಲೂಕಾಗಿ ಸರ್ಕಾರ ಘೋಷಣೆ ಮಾಡಿದ್ದು, ಅದಕ್ಕಾಗಿ ಗ್ರಾಮಗಳಲ್ಲಿ ಜನಸಾಮಾನ್ಯರಿಗೆ ಕುಡಿಯೋ ನೀರಿಗೆ ಸಮಸ್ಯೆ ಯಾಗದಂತೆ ಮುನ್ನೆಚರಿಕೆ ವಹಿಸಬೇಕು, ಮುಂದಿನ 3 ತಿಂಗಳಲ್ಲಿ ಕುಡಿಯೋ ನೀರು ಸಮಸ್ಯೆಯಾಗುವ ಗ್ರಾಮಗಳನ್ನು ಗುರುತಿಸಿ ಮುನ್ನೆಚರಿಕೆ ಕ್ರಮಗಳನ್ನು ವಹಿಸಬೇಕು, ಗ್ರಾಮಗಳ ವಾರು ಜಾನುವಾರುಗಳಿಗೆ ಬೇಕಾಗುವ ಮೇವಿನ ಪ್ರಮಾಣ ಲಭ್ಯವಿದೆ ಎಂಬುದನ್ನು ಸಂಗ್ರಹಿಸಿವಿಟ್ಟುಕೊಳ್ಳಬೇಕು ಎಂದರು.
ಸ್ಥಳದಲ್ಲಿ ಮಾನ್ಯ ಮುಖ್ಯ ಯೋಜನಾಧಿಕಾರಿಗಳು ಡಿ. ಮಂಜುನಾಥ ಸರ್, ಯಲಬುರ್ಗಾ ಮತ್ತು ಕುಕನೂ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಪಾಟೀಲ್ ಸರ್, AEE ಶ್ರೀಧರ್ ತಳವಾರ್, ರಿಜ್ವಾನ್ ಮೇಡಂ, ಸೇರಿದಂತೆ ವಿವಿಧ ಅನುಷ್ಠಾನ ಇಲಾಖೆ ಅಧಿಕಾರಿಗಳು, AD PR ವೆಂಕಟೇಶ್ ವಂದಾಲ್ ಸರ್, ಫಕೀರಪ್ಪ ಕಟ್ಟಿಮನಿ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಶರಣಪ್ಪ ಕೆಳಗಿನ ಮನಿ ಸರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ವಿವಿಧ ಇಲಾಖೆಯ ವಿಷಯ ನಿರ್ವಾಹಕರು ಹಾಜರಿದ್ದರು.