63ad083d-0a7b-4438-bb1e-3afc228e3d2c

ದಲಿತರಿಗೆ ಕಾಂಗ್ರೆಸ್ ನಿಂದ ಅನ್ಯಾಯ
ಮೋಸ ಮಾಡುವುದು ಕಾಂಗ್ರೆಸ್ ಹುಟ್ಟು ಗುಣ – ಕಾರಜೋಳ

ಕರುನಾಡ ಬೆಲಗು ಸುದ್ದಿ
ಕೊಪ್ಪಳ, ೨೩- ದೇಶದಲ್ಲಿ ಸಮಾನತೆಗಾಗಿ ಹೋರಾಟ ನಿರಂತರವಾಗಿದೆ. ಮಾದಿಗರಿಗೆ ಒಳಮಿಸಲಾತಿಯನ್ನು  ಬಿಜೆಪಿ ನೀಡಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಅವರು ಕೊಪ್ಪಳ ನಗರದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಜರುಗಿದ ಮಾದಿಗರ ಆತ್ಮ ಗೌರವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಹಾಗೂ ಆರ್ ಎಸ್ ಎಸ್ ಸಾಮಾಜಿಕ ನ್ಯಾಯ ನೀಡಲು ಕೇಶವ ಕೃಪಾದಲ್ಲಿ ನೂರಾರು ಸಭೆ ಮಾಡಿ ಎಲ್ಲರೂ ಬೆಂಬಲದಿಂದ ಒಳ ಮಿಸಲಾತಿಗೆ ಬಿಜೆಪಿ ಸರ್ಕಾರ ನೀಡಿತು ಎಂದರು.
ಬಿಜೆಪಿಯ ಯಡಿಯೂರಪ್ಪ ಸದಶಿವ ಆಯೋಗದ ವರದಿ ತಯಾರಿಸಲು 11 ಕೋಟಿ ಹಣ ನೀಡಿ ವರದಿ ತಯಾರಿಸಲು ಹಣ ನೀಡಿ ಸಹಾಯ ಮಾಡಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಾದಿಗರಿಗ ಒಳ ಮೀಸತಿ ಭರವಸೆ ನೀಡಿ ಮುಖ್ಯಮಂತ್ರಿಯಾಗಿ ಹಿಂದೆ ಕಾಂಗ್ರೆಸ್ ಐದು ವರ್ಷ ಅಧಿಕಾರದಲ್ಲಿ ಇದ್ದರು ಜಾರಿ ಮಾಡಲಿಲ್ಲಾ. ಕಾಂಗ್ರೆಸ್ ಮಾದಿಗರಿಗೆ ಅನ್ಯಾಯ ‌ಮಾಡಿತು ಎಂದು ಆರೋಪಿಸಿದರು.
ವಿಫಲ ; ಒಳ ಮಿಸಲಾತಿ‌ ನೀಡಿದ ಮಾದಿಗರು ಬಿಜೆಪಿಗೆ ಮತ ನೀಡದೆ – ಅಧಿಕಾರ ನೀಡದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರು ಈ ಸರ್ಕಾರ ಒಳ ಮಿಸಲಾತಿ ನೀಡುತ್ತಿಲ್ಲಾ ಎಂದು ಆರೋಪಿಸಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರ ಸಾಮಜಿಕ ಕ್ರಾಂತಿ ಮೂಲಕ ಜಾತಿ.ಧರ್ಮದ ಹೆಸರಿನಲ್ಲಿ ಶೋಷಣೆ ವಿರೋಧಿಸಿ ಜಾಗೃತಿ ಮೂಡಿಸಿದರು.  ಸ್ವಾತಂತ್ರ್ಯ ನಂತರ  ಬಾಬಸಾಹೇಬರು ನಮಗೆ ಮೊದಲೂ ಮಿಸಲಾತಿ ನೀಡಿದಾಗ ಮೊದಲು ಎಸ್‌ ಸಿ ಜಾತಿಯಲ್ಲಿ ೬ ಜಾತಿಗಳಿದ್ದವು ಇಗ ನೂರು‌ ಜಾತಿಗಳನ್ನು ಕಾಂಗ್ರೆಸ್ ಸೇರಿಸಿದೆ. ಒಳಮಿಸಲಾತಿ ಅಗತ್ಯವಿದೆ. ಸಾಮಾಜಿಕ .ಶೈಕ್ಷಣಿಕ ಹಾಗೂ ಆರ್ಥಿಕ ವಾಗಿ ಹಿಂದುಳಿದವರಿಗೆ ನ್ಯಾಯ ವದಗಿಸಲು ಒಳಮಿಸಲಾತಿ ಅಗತ್ಯ ಎಂದರು.

ಬಿಜೆಪಿ ನೀಡಿದ ಮಿಸಲಾತಿಯನ್ನು ಕಾಂಗ್ರೆಸ ಪಕ್ಷ ನ್ಯಾಯಾಲಯದಲ್ಲಿ ದಾವೆ ಹೂಡಿದೆ   ತಿಂಗಳಲ್ಲಿ ಒಳ ಮಿಸಲಾತಿಗೆ ಸುಪ್ರೀಂ ಮೂಲಕವೆ ಸಾಮಾಜಿಕ ನ್ಯಾಯದ ಒಳ ಮಿಸಲಾತಿಗೆ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು  ಮರಳಸಿದ್ದಮಠದಸ್ವಾಮಿಗಳು ವಹಿಸಿದ್ದರು.ಸಂಸದ ಸಂಗಣ್ಣ ಕರಡಿ. ವಿಧಾನ ಪರಿಷತ್ತ ಸದಸ್ಯೆ ಹೇಮಲತಾ ನಾಯಕ. ಶಾಸಕ ದೊಡ್ಡನಗೌಡ ಪಾಟೀಲ್‌, ಮಾಜಿ ಸಚಿವ  ಹಾಲಪ್ಪ ಆಚಾರ. ಮಾಜಿ ಶಾಸಕ ಬಸವರಾಜ ದಡೆಸಗೂರ. ದಲಿತ ಮುಖಂಡ ನರಸಪ್ಪ ರಾಯಚೂರ , ಯುವ ಮುಖಂಡರಾದ  ಗಣೇಶ ಹೊರತಟ್ನಾಳ, ಮಹಾಲಕ್ಷ್ಮೀ ಕಂದಾರಿ  ಇತರರು ಇದ್ದರು.

 

 

Leave a Reply

Your email address will not be published. Required fields are marked *

error: Content is protected !!