
ದಲಿತರ ಕುಂದುಕೊರತೆ ಸಭೆ
ಕರುನಾಡು ಬೆಳಗು ಸುದ್ದಿ
ಕುಕನೂರ, 21- ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಶನಿವಾರ ಪಿಎಸ್ಐ ಟಿ. ಗುರುರಾಜ ಅವರು ಮಾತನಾಡಿ, ದಲಿತರ ಬಗ್ಗೆ ಯಾರಾದರೂ ನೋವುಂಟು ಮಾಡಿದರೆ ಹಾಗೂ ಮಧ್ಯ ಮಾರಾಟ ಜಾಲತಾಣ ಏನಾದರೂ ದೊರೆತರೆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಬಡವರಲ್ಲಿ ಚಿಣ್ಣರು ಯಾವುದೇ ಚಟ ಇದ್ದರು ಅವರನ್ನು ತಿಳಿ ಹೇಳುವಂತ ಕೆಲಸವಾಗಬೇಕಾಗಿದೆ. ದಲಿತರ ಕಾಲೋನಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ನಮಗೆ ತಿಳಿಸಿ ಎಂದರು.
ಈ ಸಭೆಯಲ್ಲಿ ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ಯುವ ಮುಖಂಡ ಲಕ್ಷ್ಮಣ ಕಾಳಿ, ಶರಣಪ್ಪ ಚಲವಾದಿ, ರಾಘು ಕಾತರಕಿ, ಶ್ರೀಧರ್ ಭಂಡಾರಿ, ರಘು ಮಳೆಕೊಪ್ಪ, ನಾಗರಾಜ ಚಲವಾದಿ, ಪಕೀರಪ್ಪ ಕಾಳಿ, ವೀರೇಶ್ ಬಂಕದಮನಿ, ಸಂತೋಷ್ ಬಂಕದಮನಿ, ಯಮನೂರಪ್ಪ ವಡ್ಡರ್, ಕುಮಾರ್ ಕಾಳಿ, ಇನ್ನೂ ಅನೇಕ ದಲಿತ ಮುಖಂಡರು ಪಾಲ್ಗೊಂಡಿದ್ದರು.