WhatsApp Image 2024-04-22 at 4.33.01 PM (1)

 ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು : ಶಾಸಕ ಬಿ.ಎಂ.ನಾಗರಾಜ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 22- ತಾಲೂಕು ಸಿರಿಗೇರಿ ಕೊಂಚಿಗೇರಿ ದಾಸಪುರ ಹಾಗೂ ಸಿದ್ದರಾಮಪುರ ಗ್ರಾಮಗಳಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ ಕೆ ರಾಜಶೇಖರ ಹಿಟ್ನಾಳ್ ಅವರ ಪರವಾಗಿ ಬಿರುಸಿನ ಚುನಾವಣಾ ಪ್ರಚಾರದಲ್ಲಿ ಮತದಾರರನ್ನು ಉದ್ದೇಶಿಸಿ ಶಾಸಕ ಬಿ ಎಂ ನಾಗರಾಜ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರವಸೆ ಕೊಟ್ಟಂತೆ ಐದು ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗದ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ತಲುಪಿಸಿದ್ದೇವೆ ಜನಪರ ಯೋಜನೆಗಳಿಗಾಗಿ ಹಾಗೂ ನಮ್ಮೆಲ್ಲರ ಶಾಂತಿ ಸಹೋದರತೆಗೆ ಡಾ ಮಲ್ಲಿಕಾರ್ಜುನ ಖರ್ಗೆ ಅವರ ಕಾಂಗ್ರೆಸ್ ನಾಯಕತ್ವವನ್ನು ಬೆಂಬಲಿಸಬೇಕು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕೈ ಬಲ ಪಡಿಸಬೇಕು ಹಾಗೂ ರಾಜಶೇಖರ ಹಿಟ್ನಾಳ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಜವಾಬ್ದಾರಿ ನಿಮ್ಮೆಲ್ಲರದು ಮತ್ತು ನಮ್ಮೆಲ್ಲರದು ಕಾಂಗ್ರೆಸ್ ಗೆ ಅದರ ಇತಿಹಾಸವಿದೆ ದೇಶದಲ್ಲಿ ನಡೆದ ನುಡಿದಂತಹ ಪಕ್ಷ ಕಾಂಗ್ರೆಸ್ ಸರ್ವ ಧರ್ಮೀಯರಿಗೂ ಎಲ್ಲಾ ವರ್ಗದವರಿಗೂ ಶಾಂತಿ ಸಹೋದರತೆಯ ಶಕ್ತಿ ನೀಡುವ ಪಕ್ಷ ಕಾಂಗ್ರೆಸ್ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಹಿಳೆಯರಿಗೆ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗ ರುದ್ರ ಗೌಡ, ಮಲ್ಲಿಕಾರ್ಜುನ, ಬಾಲಪ್ಪ ಜಮೀನ್ದಾರ್, ಸೈಯದ್ ಮೋಹಿದೀನ್ ಖಾದ್ರಿ, ಗೊರವರ ಶ್ರೀನಿವಾಸ, ಸಾಹುಕಾರ್ ಪಾಲಾಕ್ಷಿ ಗೌಡ, ಕೊಡ್ಲೆ ಮಲ್ಲಿಕಾರ್ಜುನ, ಮರಿ ರಾಜೇಗೌಡ, ಕೆ ಬಸವನಗೌಡ, ಸಿರುಗುಪ್ಪ ನಗರಸಭಾ ಸದಸ್ಯರಾದ ಕಾಯಿಪಲ್ಲೆಶ್, ಬಿ ಎಂ ಅಪ್ಪಾಜಿ ನಾಯಕ್, ಕಾಂಗ್ರೆಸ್ ಮುಖಂಡರಾದ ಬಿ ಎಂ ಮಣಿಕಂಠ ನಾಯಕ್, ಕೋಟಿ ರೆಡ್ಡಿ, ಸಿರಿಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು, ಸಿ ಎಂ ನಾಗರಾಜ ಸ್ವಾಮಿ, ಅಡಿವಪ್ಪ ಸ್ವಾಮಿ, ಮಲ್ಲಯ್ಯ ಸ್ವಾಮಿ, ರಾರಾವಿ ವೆಂಕಟೇಶ, ಲಕ್ಷ್ಮಣ ಭಂಡಾರಿ, ಜಲಾಲಿ ರಘು, ಸಿದ್ದರಾಮಪುರ ಗ್ರಾಮದ ವೀರೇಶ ಗೌಡ, ಮುದುಕನ ಗೌಡ, ದಾಸಪುರ ಗ್ರಾಮದ ಚಂದ್ರಪ್ಪ, ಶೇಖರಪ್ಪ, ರುದ್ರಪ್ಪ, ಹನುಮಂತಪ್ಪ, ಬಸವರಾಜ ಕೊಂಚಗೇರಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಿದ್ಧನಗೌಡ, ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಗ್ರಾಮಗಳ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು, ಬಹು ಸಂಖ್ಯೆಗಳಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರಿಗೆ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಮನೆ ಮನೆ ತೆರಳಿ ಮತವನ್ನು ಯಾಚಿಸಿದರು.

Leave a Reply

Your email address will not be published. Required fields are marked *

error: Content is protected !!