
ದೇಶದ ಭದ್ರತೆಗಾಗಿ ಮತ್ತೊಮ್ಮೆ ಮೋದಿ ಸರ್ಕಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 21- ದೇಶ ಅಭಿವೃದ್ಧಿ ಮತ್ತು ಭದ್ರತೆಗಾಗಿ ಮತ್ತೊಮ್ಮೆ ಮೋದಿ ಸರ್ಕಾರವನ್ನು ತರಲು ಬಿಜೆಪಿಗೆ ಮತ ನೀಡಬೇಕೆಂದು ಇಂದು ಕೌಲ್ ಬಜಾರ್ ವಿಭಾಗದ ಮಂಡಲ ಅಧ್ಯಕ್ಷ ವಿ ನಾಗರಾಜ್ ರೆಡ್ಡಿ ಅಧ್ವರದಲ್ಲಿ ಮನೆಮನೆಗೂ ಭೇಟಿ ನೀಡಿ ಕಾಡುಗಳ ಹಂಚಿಕೆ ಮತ್ತು ಪ್ರಚಾರ ಕಾರ್ಯಕ್ರಮ ನಡೆಯಿತು.
ಕೌಲ್ ಬಜಾರ್ ಪ್ರಾಂತದಲ್ಲಿ ವ್ಯಾಪಾರಸ್ಥರನ್ನು ಮತ್ತು ಮಹಿಳೆಯರನ್ನು ಮನೆಮನೆಗೂ ಮತ್ತು ರಸ್ತೆ ಬೀದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಮೋದಿ ಗ್ಯಾರಂಟಿ ಕಾರ್ಡುಗಳನ್ನು ಹಂಚಿ ಬಿಜೆಪಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಬಿ ಶ್ರೀರಾಮುಲು ಪರವಾಗಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿ ನಾಗರಾಜ ರೆಡ್ಡಿ ಅವರು ಮಾತನಾಡುತ್ತಾ ಕಳೆದ ಹತ್ತು ವರ್ಷಗಳಿಂದ ನರೇಂದ್ರ ಮೋದಿ ಸರ್ಕಾರ ದೇಶ ರಕ್ಷಣಾ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವ ವಿಷಯವನ್ನು ತಿಳಿಸಿದರು.
ಅಷ್ಟೇ ಅಲ್ಲದೆ ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಇದ್ದಾಗ ಕೈಗೊಂಡ ಹಲವಾರು ಯೋಜನೆಗಳನ್ನು ಜನರಿಗೆ ಎಳೆ ಎಳೆಯಾಗಿ ಬಿಡಿಸಿ ತಿಳಿಸಿದರು. ಬಿಜೆಪಿ ಸಂಕಲ್ಪ ಮೋದಿ ಗ್ಯಾರಂಟಿ ಕಾರ್ಡ್ ಆಯುಷ್ಮಾನ್ ಯೋಜನೆ ಅಡಿಯ 5ಲಕ್ಷದವರೆಗೆ ಉಚಿತ ಚಿಕಿತ್ಸೆ, ಪಿ. ಎಂ ಕಿಸಾನ್ ಸನ್ಮಾನ್ಯ ನಿಧಿ ಅಡಿಯಲ್ಲಿ ರೈತರಿಗೆ ವಾರ್ಷಿಕ 6000, ಪಿಎಂ ಅವಾಜ್ ಯೋಜನೆ ಅಡಿಯಲ್ಲಿ 3, ಕೋಟಿ ಬಡ ಮನೆಗಳ ನಿರ್ಮಾಣ ಯೋಜನೆ, ಮತ್ತು ಪ್ರಧಾನ ಮಂತ್ರಿ ಸೂರ್ಯ ಫರ್ ಮಫ್ತ್ ಬಿಜಿಲಿ ಯೋಜನೆ ಅಡಿಯಲ್ಲಿ 300 ಯೂನಿಟ್ಸ್ ವರೆಗೆ ಉಚಿತ ವಿದ್ಯುತ್, ಮುದ್ರಾ ಯೋಜನೆ ಅಡಿಯಲ್ಲಿ 20 ಲಕ್ಷದವರೆಗೆ ಸಾಲ, ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆಜಿ ಉಚಿತ ರೇಷನ್ ಯೋಜನೆಗಳ ಬಗ್ಗೆ ತಿಳಿಸಿ, ಮೇ 7 ನೇ ತಾರೀಕು ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆ ಮತದಾನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ನೀಡಬೇಕೆಂದು, ಬಡವರ ಪರ ನಾಯಕರಾದ ಬಿ ಶ್ರೀರಾಮುಲು ಮತ ನೀಡಬೇಕೆಂದು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಗೋವಿಂದರಾಜಲು,, ಬಿಜೆಪಿ ರಾಜ್ಯ ವಿಭಾಗದ ಪದಾಧಿಕಾರಿಗಳು ಮತ್ತು ಮಾಜಿ ಕಾರ್ಪೊರೇಟರ್ ಸಂಜಯ್, ಕೌಲ್ ಬಜಾರ್ ವಿಭಾಗದ ಮಾಜಿ ಮಂಡಲ ಅಧ್ಯಕ್ಷರು ಜೆ.ಶಂಕರಪ್ಪ, ಬಿಜೆಪಿ ರೈತ ಮೋರ್ಚಾ, ವಿಭಾಗದ ಜಿಲ್ಲಾ ಉಪಾಧ್ಯಕ್ಷರು, ಕೆ ಶ್ಯಾಮ್ ಸುಂದರ್, ಕೌಲ್ ಬಜಾರ್ ವಿಭಾಗದ ಬಿಜೆಪಿ ಮಂಡಲ ಉಪಾಧ್ಯಕ್ಷರು ವೆಂಕಟೇಶ್ ಜೊತೆಗೆ ಹಲವಾರು ಮಂದಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.