
ದೇಶದ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಕೈ ಬಲಪಡಿಸಿ : ರಾಜಶೇಖರ್ ಹಿಟ್ನಾಳ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,24- ಎಲ್ಲಾ ಧರ್ಮ ಎಲ್ಲಾ ಜಾತಿ ಎಲ್ಲಾ ವರ್ಗದವರಿಗಾಗಿ ಸರ್ವರಿಗಾಗಿ ಸಮಾನವಾಗಿ ಕಾಣುವ ನಾಡಿನ ಜನರ ಮಹಿಳೆಯರ ಖಾತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಹಣ ಹಾಕುತ್ತಿರುವದು ನಮ್ಮ ನಾಡಿನ ಜನರಿಗೆ ಮಹಿಳೆಯರಿಗೆ ಯುವ ಸಮೂಹಕ್ಕೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬುತ್ತಿರುವುದು ಕಾಂಗ್ರೆಸ್ ಸರ್ಕಾರ ಜನರಿಗೆ ಸತ್ಯ ತಿಳಿಸಿ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ಕೆ ರಾಜಶೇಖರ್ ಹಿಟ್ನಾಳ್ ಅವರು ಸಲಹೆ ನೀಡಿದರು.
ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರ ನಿವಾಸದಲ್ಲಿ ಭೇಟಿ ನೀಡಿ ಶಾಸಕರಿಂದ ಗೌರವ ಸ್ವೀಕರಿಸಿ ಮಾತನಾಡುತ್ತಾ ಕಾಂಗ್ರೆಸ್ ಸತ್ಯದ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಮಾಸಿಕ ಉಳಿತಾಯವಾಗುವದು ಕಾಂಗ್ರೆಸ್ ಪಕ್ಷ ನಿಮ್ಮನ್ನು ನಂಬಿಕೆ ಸಾಧ್ಯವಾದಷ್ಟು ಗೌರವ ನೀಡಿದೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಮಹಿಳಾ ನ್ಯಾಯ ಯೋಜನೆ ಗಳಲ್ಲಿ ಮಹಾಲಕ್ಷ್ಮಿ ಯೋಜನೆಯ ಮೂಲಕ ಬರ ಕುಟುಂಬದ ಮನೆ ಯೋಳತಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಕೇಂದ್ರದ ಹೊಸ ಮತ್ತಿತರ ಸೌಲಭ್ಯ ಯೋಜನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಮನೆ ಮನೆ ತೆರಳಿ ತಿಳಿಸಬೇಕೆಂದು ಮನವಿ ಮಾಡಿದರು.
ಶಾಸಕ ಬಿ ಎಂ ನಾಗರಾಜ ಅವರು ಸ್ವಾಗತಿಸಿ ಗೌರವಿಸಿ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಎಲ್ಲಾ ಬೂತುಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ತರುವಂತೆ ಕಾರ್ಯಕರ್ತರಿಗೆ ಮನ ತಲುಪುವಂತೆ ಕಾಂಗ್ರೆಸ್ ಬಲಪಡಿಸುವುದಾಗಿ ಸರ್ವರಲ್ಲಿ ಕೋರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸೈಯದ್ ಮೋಹಿದ್ದೀನ್ ಖಾದ್ರಿ, ಕಲೀಮ್ ಮುಲ್ಲಾ ,ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಸವನವನಗೌಡ ನಗರಸಭಾ ಸದಸ್ಯ ಮೋದಿನ್, ಎ ರಬ್ಬಾನಿ, ಕೋಟಿ ಗೊರವರ ಶ್ರೀನಿವಾಸ,ನಗರ ಸಭೆ ಮಾಜಿ ಅಧ್ಯಕ್ಷ ಬಿ ಮುತ್ಯಾಲಯ್ಯ ಶೆಟ್ಟಿ,ಎಪಿಎಂಸಿ ಮಾಜಿ ಅಧ್ಯಕ್ಷ ವೈ ರಾಮಸ್ವಾಮಿ ಸಾಹುಕಾರ, ನಗರಸಭಾ ತಾಲೂಕ ಪಂಚಾಯತ್ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತಿತರರು ಇದ್ದರು.