
ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯಕ
ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳ ಗುರ್ಕಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೧೨- ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯಕ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಶ್ರೀ ಕ್ಷೇತ್ರ ಚೇಳ್ಳಗುರ್ಕಿಯಲ್ಲಿ ಪವಾಡ ಪುರುಷ ಶ್ರೀ ಎರ್ರಿತಾತನವರ ಮುತ್ತಿನ ಪಲ್ಲಕ್ಕಿ ಜಾತ್ರೆ ಪ್ರಯುಕ್ತ ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯಿಂದ ಹಮ್ಮಿಕೊಂಡಿದ್ದ ವಾಲಿಬಾಲ್ ಟೂರ್ನಿಯನ್ನು ಉದ್ಘಾಟಿಸಿ, ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಅವರು ಕ್ರಿಕೆಟ್ನಲ್ಲಿ ಚೆಂಡು ದೂರುಕ್ಕೆ ಹೋದಷ್ಟು ರನ್ ಹೆಚ್ಚು ಆದರೆ ವಾಲಿಬಾಲ್ ನಲ್ಲಿ ಚೆಂಡು ದೂರ ಬಿದ್ದರೆ ಜೌಟ್ ಆಗಿ ಅಂಕ ಕಳೆದುಕೊಳ್ಳುತ್ತಾರೆ.
ಅಮೇರಿಕಾದಲ್ಲಿ ಹುಟ್ಟಿದ ವಾಲಿಬಾಲ್ ಆಟ ಇಂದು ಈ ಹಳ್ಳಿಯಲ್ಲಿ ಟೂರ್ನಿಯ ರೂಪದಲ್ಲಿ ಆಡುತ್ತಿರುವುದು ನೋಡಿದರೆ ನಿಜಕ್ಕೂ ರೋಮಾಂಚನ.ನೋಡುಗರಿಗೆ ರಸದೌತಣ ನೀಡುವಂತ್ತಿತ್ತು.ಆದ್ದರಿಂದ ಯುವಕರು ಕ್ರೀಡೆಯಲ್ಲಿ ತೋರಿಸಿದಷ್ಟು ಉತ್ಸಾಹವನ್ನು ಓದಿನಲ್ಲಿ ತೋರಿಸಿ ಉತ್ತಮ ಅಂಕ ಪಡೆದು ಉದ್ಯೋಗಸ್ಥರಾಗಬೇಕು ಎಂದು ಹೇಳಿದರು.
ಟೂರ್ನಿಯಲ್ಲಿ ಅಂಬೇಡ್ಕರ್ ತಂಡ ನಾಯಕ ಪ್ರಕಾಶ್, ಜೈಭೀಮ್ ತಂಡ ಪ್ರವೀಣ ಹಾಗೂ ಬಾಬಾ ಸಾಹೇಬ್ ತಂಡ ನಾಯಕ ಎಸ್. ಟಿ.ಎರ್ರಿಸ್ವಾಮಿ ಪಾಲ್ಗೊಂಡಿದ್ದವು.ಫೈನಲ್ ಗೆ ಅಂಬೇಡ್ಕರ್ ತಂಡ ಮತ್ತು ಜೈಭೀಮ್ ತಂಡ ಬಂದು ರೋಚಕ ಪಂದ್ಯದಲ್ಲಿ ಕ್ರಮವಾಗಿ 21 ಮತ್ತು 25 ಅಂಕಗಳನ್ನು ಪಡೆದು ಜೈಭೀಮ್ ತಂಡ ಜಯಗಳಿಸಿತು.
ಶಿಕ್ಷಕರಾದ ರಾಘವೇಂದ್ರ, ಪರಸ,ಸುಂದರ, ಕಾರ್ತಿಕ್,ದೊಡ್ಡ ಸುಂಕಪ್ಪ, ಎರ್ರೆಪ್ಪ,ರಾಮಣ್ಣ,ನಾಗರಾಜ,ಯೇಸು, ಸೋಮಶೇಖರ್,ಎರ್ರಿ,ಕೇಶವ,ಅಮರ, ಬಸವರಾಜ,ಸಾಮುಯಲ್ ಮುಂತಾದವರು ಉಪಸ್ಥಿತರಿದ್ದರು.