
ಧರ್ಮಸ್ಥಳ ಮಂಜುನಾಥ ಗುಂಪಿನಿಂದ
“ವಾತ್ಸಲ್ಯ ಮನೆ ಯೋಜನೆ”ಗೆ ಚಾಲನೆ
ಕರುನಾಡ ಬೆಳಗು ಸುದ್ದಿ
ತಾವರಗೇರಾ, ೦೩- ಶ್ರೀಧರ್ಮಸ್ಥಳ ಮಂಜುನಾಥ ಗ್ರಾಮೀಣ ಅಭಿವೃದ್ದಿ ಯೋಜನೆಯ “ವಾತ್ಸಲ್ಯ ಮನೆ ಯೋಜನೆ ಅಡಿಯಲ್ಲ ಗುಂಪಿನ ಕಡುಬಡವರಾದ ಸದಸ್ಯರಿಗೆ ಈ ಯೋಜನೆ ಅಡಿಯಲ್ಲಿ ಉಚಿತ ವಸತಿ ನೀರ್ಮಾಣ ಮಾಡಿಕೊ ಡಲಗುತ್ತದೆ, ಯಾವಸದಸ್ಯರು ತಮ್ಮ ಸ್ವಂತ ಖಾಲಿ ನಿವೇಶನವನ್ನು ಹೊಂದಿರುತ್ತಾರೆ ಅವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಈ ಯೋಜನೆ ಅಡಿಯಲ್ಲಿ ಪಟ್ಟಣದ ಅನಸುಯಾ ಮೇಗಳಮನಿ ಅವರ ವಾತ್ಸಲ್ಯ ಮನೆಯ ಭುಮಿ ಪೂಜೆ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಯೋಜನಾ ಅಧಿಕಾರಿಗಳಾದ ಶೇಖರ್ ನಾಯಕ್ ಅವರು ವೇದಿಕೆಯಲ್ಲಿ ಇರುವ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಬದಲ್ಲಿ ಜಿಲ್ಲಾ ನಿರ್ಧೆ ಶಕರಾದ ಸದಾನಂದ ಬಂಗೇರ ಅವರು ಭಾಗವಹಿಸಿ ವಾತ್ಸಲ್ಯ ಕಾರ್ಯಕ್ರಮಗಳು ಹಾಗು ಇನ್ನಿತರ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಗುಂಪಿನ ಎಲ್ಲಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಗುರುಮುರ್ತಿ ಸ್ವಾಮಿಗಳು, ಜಿಲ್ಲಾಜನಜಾಗ್ರತಿ ವೇದಿಕೆಸದಸಯರಾದ ರುದ್ರಪ್ಪ ಅಕ್ಕಿ, ಪ್ರಮುಖರಾದ ದೊಡ್ಡಪ್ಪ ಮೇಗಳಮನಿ, ಚೆನ್ನಪ್ಪ ಬುಡಕುಂಟಿ, ಒಕ್ಕುಟದ ಅಧ್ಯಕ್ಷರಾದ ಕೌಸರ್ ಬಾನು, ಮೇಸ್ತಿç ಗಂಗಾಧರಯ್ಯ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಿವಲಿಲಾ, ಮೇಲ್ವಿಚಾರಕರಾದ ಶಾಂತಮೂ ರ್ತಿ ಹಿರೇಮಠ, ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು, ಹಿತೈಷಿಗಳು ಭಾಗವಹಿಸಿದ್ದರು. ಈ ಸಂದರ್ಬದಲ್ಲಿ ಮಾನ್ಯ ಜಿಲ್ಲಾ ನಿರ್ಧೇಶಕರು ಭುಮಿ ಪೂಜೆ ಮಾಡಿ ಸಾಂಕೇತಿಕವಾಗಿ ಭುಮಿಯನ್ನು ಅಗೆದು ಶುಭ ಹಾರೈಸಿದರು.