IMG-20240207-WA0006

ಧರ್ಮ ಹೆಸರಿನ ದ್ವೇಷ ವಿಷ ಬೀಜ ಬಿತ್ತನೆ ಬೇಡ ಸಂವಿಧಾನ ಆಶಯಕ್ಕೆ ಬದ್ಧರಾಗೋಣ : ಕಾಂಗ್ರೆಸ್ ಮುಖಂಡ ಬಿ ಎಂ ಸತೀಶ್

ಕರುನಾಡ ಬೆಳಗು ಸುದ್ದಿ 

ಸಿರುಗುಪ್ಪ,7- ಸಂವಿಧಾನ ಅಂಗೀಕಾರವಾಗಿ 75 ವರ್ಷ ಪೂರೈಸಿದ ಹಿನ್ನೆಲೆ ಭಾರತ ಸಂವಿಧಾನಕ್ಕೆ ಪ್ರತಿಯೊಬ್ಬರು ಬದ್ಧರಾಗಿ ಸಂವಿಧಾನ ಆಶಯದಂತೆ ನಾವೆಲ್ಲರೂ ನಡೆಯೋಣ ಎಂದು ಕಾಂಗ್ರೆಸ್ ಮುಖಂಡ ನಗರಸಭಾ ಮಾಜಿ ಅಧ್ಯಕ್ಷ ಬಿ ಎಂ ಸತೀಶ್ ಅವರು ಹೇಳಿದರು.

ನಗರದ ನೇತಾಜಿ ವ್ಯಾಯಾಮ ಶಾಲಾ ಮೈದಾನದಲ್ಲಿ ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಸಿರುಗುಪ್ಪ ತಾಲೂಕು ಆಡಳಿತ ತಾಲೂಕು ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ನಗರಸಭೆ ಸಹ ಭಾಗಿತ್ವದಲ್ಲಿ ಸಂವಿಧಾನ ಮೂಲ ಆಶಯದಂತೆ ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡುತ್ತಾ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಉದ್ದೇಶಪೂರ್ವಕ ದ್ವೇಷ ಹುಟ್ಟು ಹಾಕುವ ವಿಷ ಬಿತ್ತುವ ಬೀಜ ಕೆಲಸ ಅನೇಕ ಶಕ್ತಿಗಳಿಂದ ನಡೆದಿದೆ ವಿಷ ಬೀಜ ಬಿತ್ತುವುದು ಬೇಡ ಭಾರತ ವೈದ್ಯತೆ ಎಲ್ಲಿ ಏಕತೆಯ ಹೊಂದಿದ ದೇಶ ಇಲ್ಲಿ ಹಲವಾರು ಧರ್ಮಗಳು ಜಾತಿ ಜನಾಂಗದವರು ಇದ್ದರೂ ಎಲ್ಲರೂ ಭಾರತೀಯರು ನಾವೆಲ್ಲ ಒಂದೇ ಎನ್ನುವ ಸಂಸ್ಕೃತಿ ಇಲ್ಲಿದೆ ಎಂದರು ಡಾ ಬಿ ಆರ್ ಅಂಬೇಡ್ಕರ್ ತಾಲೂಕ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ ಅವರು ಮಾತನಾಡಿ ಭಾರತದ ಸಂಸ್ಕೃತಿ ಅಗಾಧವಾಗಿ ಮಯವಾಗಿದೆ ಏಕತೆ ಹೊಂದಿದೆ ದೇಶ ಎಲ್ಲಾ ಜಾತಿಯ ವಿವಿಧ ಹಬ್ಬಗಳು ಆಚರಣೆ ಬೇರೆ ಯಾವುದೇ ರಾಷ್ಟ್ರದಲ್ಲಿ ನೋಡಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ದಲಿತ ಸಂಘ ಅಂಬೇಡ್ಕರ್ ಸಂಘದ ಹೆಚ್ ಬಿ ಗಂಗಪ್ಪ ಅವರು ಮಾತನಾಡಿ ನಮ್ಮ ದೇಶದಲ್ಲಿ ಜಾತಿ ವಿವಿಧ ಧರ್ಮದ ಜನರು ವಾಸಿಸುತ್ತಿದ್ದಾರೆ ನಾವೆಲ್ಲ ಭಾರತೀಯ ಎಂಬ ಭಾವನೆ ಎಲ್ಲರಲ್ಲಿದೆ ನಮ್ಮ ಸುಂದರವಾದ ದೇಶ ಇಡೀ ಜಗತ್ತಿನಲ್ಲಿ ಯಾವುದೇ ದೇಶವು ಇಲ್ಲ ಆಚರಣೆಗಳು ಭಾಷೆಗಳು ಪದ್ದತಿಗಳು ಸಂಪ್ರದಾಯಗಳು ಅನನ್ಯತೆಗೆ ಸಾಕ್ಷಿಯಾಗಿವೆ ಎಂದರು ಮುಖ್ಯ ಭಾಷಣಕಾರ ಉಪನ್ಯಾಸಕ ಪಂಪಾಪತಿ ಅವರು ಮಾತನಾಡಿ ಭಾರತದ ಭೂಮಿ ಸಾವಿರಾರು ವರ್ಷಗಳಿಗೂ ಮೀರಿದ ಸಂಸ್ಕೃತಿ ಹೊಂದಿದ ದೇಶ 6452 ಜಾತಿಗಳು ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಸಿಖ್ ಪಾರ್ಸಿ ಮತಗಳು 52 ಬುಡಕಟ್ಟುಗಳಲ್ಲಿ ಹಂಚಿ ಹೋಗಿರುವ 29 ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ 1618 ಭಾಷೆಗಳನ್ನು ಮಾತಾ ನಾಡುವ ವೈದ್ಯಮಯ ದೇಶ ವಾಗಿದೆ ನಾವೆಲ್ಲ ಭಾರತೀಯರು ಎಂಬ ಭಾವನೆ ಎಲ್ಲರಲ್ಲಿ ಇದೆ ನಮ್ಮ ದೇಶ ಸುಂದರವಾದ ದೇಶ ಇಡೀ ಜಗತ್ತಿನಲ್ಲಿ ಯಾವ ದೇಶವು ಇಲ್ಲ ಎಂದು ಅವರು ವಿವರಿಸಿ ಮಾತನಾಡುತ್ತಿದ್ದರು ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ ಅವರು ಸಂವಿಧಾನ ಅಂಗೀಕಾರವಾದ ಕುರಿತು ಮತ್ತು ಭಾರತದ ಸಂವಿಧಾನಕ್ಕೆ ಅದರ ಆಶಯದಂತೆ ನಾವೆಲ್ಲರೂ ತಿಳಿದು ಕೊಂಡು ನಡೆಯಬೇಕು ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕ ತಹಸಿಲ್ದಾರರ ಶಿರಸ್ತೆದಾರ ಸಿದ್ದಾರ್ಥ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ ತಾಲೂಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಮಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಲಿಂಗ ರಾಜರೆಡ್ಡಿ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಎ ಅಬ್ದುಲ್ ನಬಿ ನಗರಸಭಾ ಮಾಜಿ ಅಧ್ಯಕ್ಷರ ಪತಿ ಕಾಂಗ್ರೆಸ್ ಮುಖಂಡ ಬಿ ಮುತ್ಯಾಲಯ್ಯ ಶೆಟ್ಟಿ ನಗರಸಭಾ ಸದಸ್ಯರಾದ ಮಹಾದೇವ ಕಾಯಿಪಲ್ಲೆ ನಾಗರಾಜ ಕೋಟಿ ರೆಡ್ಡಿ ನಗರಸಭೆ ಮಾಜಿ ಸದಸ್ಯ ಭೋವಿ ಸಮಾಜದ ಹುಲುಗಪ್ಪ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಶಾಲಾ ಶಿಕ್ಷಕರು ಮಕ್ಕಳು ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಸಂವಿಧಾನ ಜಾತ ಅಭಿಯಾನದ ಕಲಾತಂಡಗಳು ಗಣ್ಯಮಾನ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು ದಲಿತ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!