
ಗಂಗಾವತಿ ನ,೧೦ರಂದು ಶ್ರೀ ಬಸವೇಶ್ವರ ಪುತ್ಥಳಿ ಅನಾವರಣ
ಸಿಎಂ ಯಡಿಯೂರಪ್ಪ ಹಾಗೂ ಸಚಿವರು
ಕರುನಾಡ ಬೆಳಗು ಸುದ್ದಿ
ಗಂಗಾವತಿ,ನ೦೮- ನವೆಂಬರ ೧೦ರಂದು ಜಗಜ್ಯೋತಿ ಬಸವೇಶ್ವರ ಅಶ್ವಾರೂಢ ಕಂಚಿನ ಪುತ್ಥಳಿ ಮೆರವಣಿಗೆ ಹಾಗೂ ಮೂರ್ತಿ ಅನಾವರಣ ಮಾಡಲಾಗುವುದು ಎಂದು ಜಗಜ್ಯೋತಿ ಬಸವೇಶ್ವರ ಟ್ರಸ್ಟ(ರಿ) ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ ಹೇಳಿದರು.
ಅವರು ನಗರದ ಚನ್ನಮಲ್ಲಿಕಾರ್ಜುನ ಮಠದಲ್ಲಿ ಸುದ್ದಿಗೋಷ್ಠೀ ಉದ್ದೇಶಿಸಿ ಮಾತನಾಡಿ ಶ್ರೀಕೃಷ್ಣದೇವರಾಯ ವೃತ್ತದ ಹತ್ತಿರ ನೆಹರು ಉದ್ಯಾನವನದಲ್ಲಿ ಜಗಜ್ಯೋತಿ ಬಸವೇಶ್ವರ ಅನಾವರಣವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ.ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ,ಸAಸದ ಸಂಗಣ್ಣ ಕರಡಿ,ಮಾಜಿ ಸಂಸದ ಹೆಚ್.ಜಿ.ರಾಮುಲು ನೇರವೇರಿಸುವರು.ಶಾಸಕ ಗಾಲಿ ಜನಾರ್ಧನರೆಡ್ಡಿ ಧ್ವಜಾರೋಹಣ ನೇರವೇರಿಸುವರು.ಬೆಂಗಳೂರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಭಾಗವಹಿಸುವರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಅಖಿಲ ಭಾರತ ವಿರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ,ಬಸವ ಪುತ್ಥಳಿ ಸ್ವಾಗತ ಸಮಿತಿಯ ಅಧ್ಯಕ್ಷ ಪರಣ್ಣ ಮುನವಳ್ಳಿ ವಹಿಸುವರು.
ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು,ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರು,ಸುಳೆಕಲ್ ಮಠದ ಭುವನೇಶ್ವರಯ್ಯ ತಾತನವರು, ಅರಳಿಹಳ್ಳಿಯ ಗವಿಸಿದ್ದಯ್ಯ ತಾತಾನವರು ಸಾನಿಧ್ಯವಹಿಸುವರು.
ಸಮಾರಂಭದಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಸಚಿವರುಗಳಾದ ಮಲ್ಲಿಕಾರ್ಜುನನಾಗಪ್ಪ,
ಇಕ್ಬಾಲ ಅನ್ಸಾರಿ,ಸಾಲೋಣಿ ನಾಗಪ್ಪ,ಮಾಜಿ ಶಾಸಕರುಗಳಾದ ಬಸವರಾಜ ಧಡೆಸೂಗೂರ,
ಹೆಚ್.ಆರ್. ಶ್ರೀನಾಥ,ಹೆಚ್.ಎಸ್.ಮುರಳಿಧರ, ಸರ್ವ ಸಮಾಜದ ಮುಖಂಡರು ಮುಂತಾದವರು ಭಾಗವಹಿಸುವರು.
ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ನಿಮಿತ್ಯ ನ,೧೦ರಂದು ಬೆಳ್ಳಿಗ್ಗೆ ೭,೩೦ಗಂಟೆಗೆ ಗಣ್ಯಮಾನರಿಂದ ಎಪಿಎಂಸಿ ಶ್ರೀಚನಬಸವ ತಾತನ ದೆವಸ್ಥಾನದಿಂದ ಮೇರವಣಿಗೆ ಚಾಲನೆ ನೀಡಲಾಗುವುದು.
ನಗರದ ಸಿಬಿಎಸ್ ವೃತ್ತ,ಮಹಾವೀರ ವೃತ್ತ,ಗಾಂಧಿ ವೃತ್ತ,ಬಸವಣ್ಣ ವೃತ್ತ,ವಾಸವಿ ವೃತ್ತ,ಅಂಬೇಡ್ಕರ ವೃತ್ತ,ಜಗರಜೀವನ ರಾಮ ವೃತ್ತ, ಶ್ರೀಕೃಷ್ಣದೇವರಾಯ ವೃತ್ತದ ಮೂಲಕ ನೆಹರು ಉಂದ್ಯಾನವನ ಸೇರುವುದು. ವಿವಿಧಮೇಳಗಳು ಭಾಗವಹಿಸುವವು. ಸರ್ವ ಸಮಾಜದವರು ಭಾವಹಿಸಬೇಕು ಎಂದರು.
ಬಸವದಳದ ಬಸವರಾಜ,ಕೆ,ನಗರಸಭೆ ಮಾಜಿ ಸದಸ್ಯ ರಾಚಪ್ಪ ಸಿದ್ದಾಪೂರ ಮಾತನಾಡಿದರು.
ಈಸಂದರ್ಭದಲ್ಲಿ ವಿಎಸ್.ಎಸ್.ಎನ್ ಅಧ್ಯಕ್ಷ ಶೇಖರಪ್ಪ ಅರಳಿ,ನಗರಸಭೆ ಮಾಜಿ ಉಪಾಧ್ಯಕ್ಷ ಶಂಕರಗೌಡ ಹೊಸಳ್ಳಿ,ಸರಿಗಮ ವಿಜು,ಡಾ/ಶಿವಕುಮಾರ ಮಾಲಿಪಾಟೀಲ,ನಗರಸಭೆ ಸದಸ್ಯರುಗಳಾದ ನವಿನ ಮಾಲಿಪಾಟೀಲ,ಉಮೇಶ ಸಿಂಘನಾಳ,ನವಲಿ ವಾಸುದೇವ,ಶರಭೋಜಿ, ಅಕ್ಕಿ ಆನಂದ,ಪAಚಮ ಸಾಲಿ ಸಮಾಜದ ತಾಲೂಕ ಅಧ್ಯಕ್ಷ ಶಿವಪ್ಪ ಯಲಬುರ್ಗಿ,ಸಂಗಮೇಶಕೋಟೆ, ಚೇತನ ಹೋಸಕೇರಾ,ಅಮರೇಶಪ್ಪ, ಎಕೆ ಮಹೇಶ ಕುಮಾರ, ಮುಂತಾದವರು ಉಪಸ್ಥೀತರಿದ್ದರು.