ನ. 5 ರಂದು ಪುಸ್ತಕ ಬಿಡುಗಡೆ ಹಾಗೂ ಸಿ. ಕಾಲಿಮಿರ್ಚಿ ಅವರ ಸಾಹಿತ್ಯ ಸಾಂಸ್ಕೃತಿಕ ಅನುಸಂಧಾನ ಕುರಿತು ಕಾರ್ಯಕ್ರಮ
ಕೊಪ್ಪಳ, 04- ಭಾಗ್ಯನಗರದ ಸೃಜನಶೀಲ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ಇಲ್ಲಿನ ಬಾಲಾಜಿ ಫಂಕ್ಷನ್ ಸಭಾಂಗಣದಲ್ಲಿ ನ. 5ರಂದು ಬೆಳಿಗ್ಗೆ 11 ಗಂಟೆಗೆ ಸಾಹಿತಿ ಅಕ್ಬರ್ ಸಿ. ಕಾಲಿಮಿರ್ಚಿ ಅವರ ಸಾಹಿತ್ಯ ಸಾಂಸ್ಕೃತಿಕ ಅನುಸಂಧಾನ ಕುರಿತು ಕಾರ್ಯಕ್ರಮ ಜರುಗಲಿದೆ.
ಅಂದು ರವಿವಾರ ವೇದಿಕೆಯಲ್ಲಿ ವಿಚಾರಗೋಷ್ಠಿ, ಹನುಮಂತಪ್ಪ ಎನ್. ಉಪ್ಪಾರ ಅವರ ‘ಅರಳುವ ಹೂಗಳು’ ಮಕ್ಕಳ ಕವನ ಸಂಕಲನ ಲೋಕಾರ್ಪಣೆಯೂ ನಡೆಯಲಿದೆ. ಸಾಹಿತಿ ಪ್ರಮೋದ ತುರ್ವಿಹಾಳ್ ಅಧ್ಯಕ್ಷತೆ ವಹಿಸಲಿದ್ದು, ವಿಮರ್ಶಕ ಎಚ್.ಎಸ್. ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಪ‍್ರಾಧ್ಯಾಪಕ ಶರಣಬಸಪ್ಪ ಬಿಳಿಯೆಲೆ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಎಸ್. ಮಾಲಗಿತ್ತಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
ಅನ್ಮಾನ ; ಪತ್ರಕರ್ತ ಹುಸೇನಪಾಷಾ, ಛಾಯಾಗ್ರಾಹಕ ಪ್ರಕಾಶ ಕಂದಕೂರ, ಸಾಹಿತಿ ಇಸ್ಮಾಯಿಲ್ ತಳಕಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪಡೆದ ಮಂಜು ನಾಯಕ್, ಮೆಹಬೂಬ ಮಠದ ಮತ್ತು ಹನ್ಮಂತಮ್ಮ ಅವರಿಗೆ ಪ್ರತಿಭಾ ಸಂಗಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.