
ನಂ. 5 ರಂದು ಕೊಪ್ಪಳಕ್ಕೆ ಭೋವಿ ಸಮಾಜದ ಸ್ವಾಮಿಗಳು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 04- ಭೋವಿ ಸಮಾಜದ ಸ್ವಾಮಿಗಳಾದ ಮಹಾ ಸಂಸ್ಥಾನಮಠ ಭೋವಿ ಗುರುಪೀಠದ ಇಮ್ಮಡಿ ಶ್ರೀ ಸಿದ್ದರಾಮೇಶ್ವರರು ಕೊಪ್ಪಳಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಮತ್ತು ತಾಲೂಕಿನ ಭೋವಿ ಸಮಾಜದ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.ಲಿಂ. ಶ್ರೀಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವ, ಗದ್ದುಗೆ ಶಿಲಾಮಂಟಪ ಶಿಲಾನ್ಯಾಸ ಗುರು ಕುಟೀರ ಉದ್ಘಾಟನೆಯ ನಿಮಿತ್ಯ ನಂ 5 ರಂದು 10- 30 ಕ್ಕೆ ಕೊಪ್ಪಳ ನಗರದ ವಡ್ಡರ ಓಣಿಯಲ್ಲಿ ಶ್ರೀಗಳು ಭೇಟಿ ನೀಡುತ್ತಿದ್ದಾರೆಂದು ಸಮಾಜದ ಜಿಲ್ಲಾಅದ್ಯಕ್ಷ ನಿಂಗಪ್ಪ ಸುಣಗಾರ, ಜಿಲ್ಲಾಉಪಾಧ್ಯಕ್ಷ ರಾಮಣ್ಣ ಅಳವಂಡಿ, ಜಿಲ್ಲಾ ಸದಸ್ಯರು ಮಾಸ್ತೆಪ್ಪ ಕಟ್ಟಿಮನಿ, ರಾಮಣ್ಣ ಅಳವಂಡಿ, ಬರಮಜ್ಜ ಪೂಜಾರ, ರಮೇಶ್ ಬಸಾಪಟ್ಟಣ, ತಾಲ್ಲೂಕು ಉಪಾಧ್ಯಕ್ಷ ಲಕ್ಷಣ ಪೂಜಾರ, ಕಾರ್ಯದರ್ಶಿ ಹನುಮಂತ ಹಾಲವರ್ತಿ, ಗಿರೀಶ ಪೂಜಾರ, ಕೃಷ್ಣಮೂರ್ತಿ ಮಲಸಮುದ್ರ, ತಿಮ್ಮಣ್ಣ ಪೂಜಾರ, ಕಲ್ಯಾಣ ಕರ್ನಾಟಕ ಮಾದ್ಯಮ ಪ್ರತಿನಿಧಿ ರಾಮು ಪೂಜಾರ ತಿಳಿಸಿದ್ದಾರೆ.