8b871ace-42f4-4af4-91a3-ef7aa8065a01

ಕ್ರೀಡೆಗಳು ಮನಸ್ಸುಗಳನ್ನು ಬೆಸೆಯುತ್ತವೆ 

ಸಿರಾಜ್ ಬಿಸರಳ್ಳಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೦೯- ಸದೃಢವಾದ ದೇಹ ಆರೋಗ್ಯಕರ ಮನಸ್ಸುಗಳನ್ನು ಕಟ್ಟಿದರೆ ಆರೋಗ್ಯವಂತ ಮನಸ್ಸುಗಳು ಸದೃಢವಾದ ದೇಶವನ್ನು ಕಟ್ಟುತ್ತವೆ. ಕ್ರೀಡೆಗಳು ಸೌಹಾರ್ದತೆಯನ್ನು ಹೆಚ್ಚಿಸುತ್ತವೆ ಪರಸ್ಪರ ಬೆಸೆಯುವಂತ ಇಂಥ ಕ್ರೀಡೆಗಳು ಮತ್ತು ಕ್ರಿಕೆಟ್ ಟೂರ್ನಮೆಂಟ್ ಗಳು ಇಂದಿನ ಅವಶ್ಯಕತೆಗಳಾಗಿವೆ ಎಂದು ಪತ್ರಕರ್ತ ಸಿರಾಜ್ ಬಿಸರಳ್ಳಿ ಹೇಳಿದರು.

ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಕಾಳಜಿ ಗ್ರಾಮೀಣಾಭಿವೃದ್ಧಿ ಕ್ರೀಡೆ ಹಾಗೂ ಶಿಕ್ಷಣ ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕೆಪಿಎಲ್ ಸೀಸನ್ ೩ರಲ್ಲಿ ಪಂದ್ಯ ಪುರುಷೊತ್ತಮ ಪ್ರಶಸ್ತಿ ವಿತರಿಸಿ ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಆಯೋಜಕರಾದ ಮೈನುದ್ದೀನ್ ವರ್ದಿ ಹಾಗೂ ಸಂಗಡಿಗರು ಹಮ್ಮಿಕೊಂಡಿರುವ ಕೆಪಿಎಲ್ ಮೂರನೇ ಸೀಸನ್ ನಿಜಕ್ಕೂ ಶ್ಲಾಘನೀಯ. ಇದರಿಂದ ನಮ್ಮ ಭಾಗದ ಪ್ರತಿಭೆಗಳು ಹೊರಬರಲಿ, ನಮ್ಮ ಭಾಗದ ಪ್ರತಿಭೆಗಳಿಗೆ ಅವಕಾಶ ಸಿಗಲಿ, ಮುಂದೆ ಅವರು ವಿಭಾಗ ಮಟ್ಟದಲ್ಲಿ, ರಣಜಿ ಮಟ್ಟದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡುವಂತಾಗಲಿ ಎಂದು ಹಾರೈಸಿದರು.

ಕೆಪಿಎಲ್ ೨ನೇ ಸೀಸನ್ ನ ಮದ್ಯಾಹ್ನದ ಪಂದ್ಯ ಸರಕಾರ ಟೀಂ ಹಾಗೂ ಎಸ್ ಜಿ ಫೈಟರ್ಸ್ ಟೀಂ ನಡುವೆ ನಡೆಯಿತು, ಕೊನೆಯ ಓವರ್ ನವರೆಗೆ ಕುತೂಹಲ ಕಾಯ್ದುಕೊಂಡ ಪಂದ್ಯದಲ್ಲಿ ಸರಕಾರ ಟೀಂ ಗೆಲುವನ್ನು ಸಾಧಿಸಿತು‌, ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ ಸರಕಾರ ಟೀಂನ ಸಕ್ಲೈನ್ ಪಂದ್ಯ ಪುರುಷೊತ್ತಮ ಪ್ರಶಸ್ತಿ ಪಡೆದರು.

ಈ ಸಂದರ್ಭದಲ್ಲಿ ಎರಡೂ ತಂಡಗಳ ಆಟಗಾರರು, ಮೈನುದ್ದೀನ್ ವರ್ದಿ, ಸುಹೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಆಯೋಜಕರು ಪತ್ರಕರ್ತ ಸಿರಾಜ್ ಬಿಸರಳ್ಳಿ ಯವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

Leave a Reply

Your email address will not be published. Required fields are marked *

error: Content is protected !!