
ನಗರಸಭೆ ವ್ಯಾಪ್ತಿಗೆ ಭಗ್ಯನಗರ ಸೇರಿದಂತೆ 14 ಹಳ್ಳಿಗಳನ್ನು ಸೇಪ್ರಡೆಗೆ ಸರ್ಕಾರಕ್ಕೆ ಪ್ರಸ್ಥಾವನೆ – ಅಮ್ಜದ ಪಟೇಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಕೊಪ್ಪಳ ನಗರಸಭೆ ವ್ಯಾಪ್ತಿಗೆ ಭಗ್ಯನಗರ ಸೇರಿದಂತೆ 14 ಹಳ್ಳಿಗಳನ್ನು ಸೇಪ್ರಡೆ ಮಾಡಿಕೊಳ್ಳಲು ಪ್ರಸ್ಥಾವನೆ ಸಲ್ಲಿಸಲು ನಗರಸಭೆ ಬಜೆಟ್ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ನಗರಸಭೆ ಅದ್ಯಕ್ಷ ಅಮ್ಜದ ಪಟೇಲ್ ಹೇಳಿದರು.
ಮಂಗಳವಾರದಂದು ಬೆಳಿಗ್ಗೆ ಜರುಗಿದ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ,ನಗರಸಭೆ ಸದಸ್ಯರ ಒತ್ತಾಯದಮೆರೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಕೊಪ್ಪಳ ನಗರಸಭೆ ವ್ಯಾಪ್ತಿಗೆ ನಗರದ ಐದು ಕಿ, ಮೀ ವ್ಯಾಪ್ತಿಯ ಕಿಡದಾಳ ,ಬಸಾಪೂರ ,ಚಿಲವಾಡಗಿ, ಟನಕನಕಲ್, ಓಜನಹಳ್ಳಿ , ದದೇಗಲ್, ಮಂಗಳಾಪೂರ ,ಗುನ್ನಳಿ , ಹೊರತಟ್ನಾಳ ,ಬಹದ್ದೂರ್ ಬಂಡಿ ,ಹಸಳ್ಳಿ ಸೇರಿದಂತೆ 14 ಹಳ್ಳಿಗಳನ್ನು ಸೇಪ್ರಡೆ ಮಾಡಲಾಗುವುದು ಎಂದರು.