
ನಡವಿ ಆಯುರ್ವೇದಿಕ್ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು
ಪ್ರತಿಯೊಬ್ಬರಿಗೂ ಆರೋಗ್ಯ ಮಹಾ ಭಾಗ್ಯ ಶಾಸಕ ಬಿ ಎಂ ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ – ಪ್ರತಿಯೊಬ್ಬರಿಗೂ ಆರೋಗ್ಯವೇ ಮಹಾಭಾಗ್ಯ ಆಯುರ್ವೇದ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಹೇಳಿದರು .
ಸಿರುಗುಪ್ಪ ತಾಲೂಕು ನಡವಿ ಗ್ರಾಮದಲ್ಲಿ ಆಯುಷ್ ಇಲಾಖೆಯ ಅನುದಾನದಲ್ಲಿ ಮಂಜೂರು ಆಗಿರುವ ನೂತನ ಆಯುರ್ವೇದಿಕ್ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಾ ನಡವಿ ಗ್ರಾಮದಿಂದ ಸಿರುಗುಪ್ಪ ತಾಲೂಕು ಕೇಂದ್ರ ಮತ್ತು ತೆಕ್ಕಲಕೋಟೆ ಆರೋಗ್ಯ ಕೇಂದ್ರಗಳಿಗೆ ದೂರವಾಗುತ್ತದೆ ಇಲ್ಲಿನ ವಾಸಿಗಳು ಈ ಆಸ್ಪತ್ರೆಯ ಸದುಪಯೋಗ ಪಡೆದುಕೊಳ್ಳಬೇಕು ಜೀವನದಲ್ಲಿ ಸತ್ವಯುತ ಆಹಾರ ಸೇವನೆ ಶೈಲಿಯನ್ನು ಬೆಳೆಸಿಕೊಳ್ಳಿ ಪ್ರತಿ ಮನೆಯ ಆಯುಷ್ಯ ಔಷಧಿಯುಳ್ಳ ಚಿಕಿತ್ಸಾಲಯ ಆಯುರ್ವೇದ ಮನುಷ್ಯನಿಗೆ ಪ್ರಕೃತಿವಾಗಿ ಲಭಿಸುವ ಗಿಡಮೂಲಿಕೆಗಳ ಆರೈಕೆ ಮಹತ್ವದ್ದಾಗಿದೆ.
ಅನಾದಿ ಕಾಲದಿಂದಲೂ ಆಯುರ್ವೇದ ವೈದ್ಯ ವಿಜ್ಞಾನ ಎಷ್ಟೇ ಮುಂದುವರೆದರು ಆಯುರ್ವೇದ ತನ್ನದೇ ಆದಮಹತ್ವ ಸ್ಥಾನ ಉಳಿಸಿಕೊಂಡಿದೆ ಎಲ್ಲಾ ಕಾಯಿಲೆಗಳಿಗೆ ಆಯುರ್ವೇದದಲ್ಲಿ ಪರಿಹಾರ ಎಂದು ಅವರು ನುಡಿದರು ಗ್ರಾಮ ಪಂಚಾಯತ್ ಸದಸ್ಯರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ವೈ ರಾಮಸ್ವಾಮಿ ಸಾಹುಕಾರ್ ನಗರಸಭಾ ಸದಸ್ಯರಾದ ಎಚ್ ಗಣೇಶ್ ಕಾಂಗ್ರೆಸ್ ಮುಖಂಡ ಬಿ ವೆಂಕಟೇಶ್ ಕಾರ್ಮಿಂಚನಗೌಡ ರಾಷ್ಟ್ರೀಯ ಸಾಕ್ಷರತಾ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸದಸ್ಯ ಅಬ್ದುಲ್ ನಬಿ ನಡೆವಿ ಗುರು ಸಮುದಾಯ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರು ಗ್ರಾಮದ ಮುಖಂಡರು ಇದ್ದರು.