
ಕೊಪ್ಪಳ ತಾಲೂಕ ನದಾಫ್ ಪಿಂಜಾರ ಸಂಘದ
ಅಧ್ಯಕ್ಷರಾಗಿ ಉಸ್ಮಾನ್ ಸಾಬ್ ಕರ್ಕಿಹಳ್ಳಿ. ಉಪಾಧ್ಯಕ್ಷರಾಗಿ ಫಕ್ರು ಸಾಬ್ ನದಾಫ್ ಅವಿರೋಧ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ತಾಲೂಕ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನವಾಗಿ ತಾಲೂಕಾ ಅಧ್ಯಕ್ಷರಾಗಿ ಉಸ್ಮಾನ್ ಸಾಬ್ ಕರ್ಕಿಹಳ್ಳಿ. ಉಪಾಧ್ಯಕ್ಷರಾಗಿ ಫಕ್ರು ಸಾಬ್ ನದಾಫ್ ಚುಕ್ಕನ್ಕಲ್. ಮುರ್ತುಜಾ ಸಾಬ್ ಚುಟ್ಟದ್. ಮೀರಾ ಸಾಬ್ ಬನ್ನಿಗೋಳ. ಮಹಿಳಾ ಉಪಾಧ್ಯಕ್ಷೆಯಾಗಿ ಶ್ರೀಮತಿ ಜರೀನಾ ಬೇಗಂ ಗಂಡ ರಶೀದ್ ಅಹಮದ್ ನೀರಲ್ಗಿ. ಮುಖ್ಯ ಕಾರ್ಯದರ್ಶಿಗಳಾಗಿ ಮುಸ್ತಫಾ ಕುದರಿಮೂತಿ. ಖಜಾಂಚಿಯಾಗಿ ಮರ್ದಾನ್ ಸಾಬ್ ಲುಂಗಿ. ಜಿಲ್ಲಾ ಪ್ರತಿನಿಧಿಗಳಾಗಿ ಶಾಬುದ್ದೀನ್ ಸಾಬ್ ನೂರ್ ಬಾಷಾ ಕುಕನೂರು. ಅಲ್ಲಿ ಸಾಬ್ ಗಬ್ಬೂರ್. ರಂಜಾನ್ ಸಾಬ್ ಕಂಬಳಿ. ಸಂಘಟನಾ ಕಾರ್ಯದರ್ಶಿಯಾಗಿ ಖಾಜಾವಲಿ ಮಂಗಳಾಪೂರ ಮುಂತಾದವರು ಅವಿರೋಧವಾಗಿ ಆಯ್ಕೆಯಾದರು.
ಕೊಪ್ಪಳ ತಾಲೂಕಾ ಹಾಗೂ ನಗರ ಘಟಕದ ಆಜೀವ ಸದಸ್ಯತ್ವ ಹೊಂದಿದ ಮತದಾರರು “ಕೊಪ್ಪಳ ನಗರದ ಹಜರತ್ ಮರ್ದಾನ್ ಎ ಗೈಬ್ ದರ್ಗಾ ಶರೀಫ್” ಆವರಣದಲ್ಲಿ ಶನಿವಾರ ರಾಜ್ಯ ಸಂಘದ ಸೂಚನೆಯಂತೆ ಐದು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಸಭೆಯಲ್ಲಿ ಸಮಾಜದ ಜಿಲ್ಲಾ ಅಧ್ಯಕ್ಷ ಕೆ.ಎಫ್. ಮುದ್ದಾಬಳ್ಳಿ.ಜಿಲ್ಲಾ ಮಹಿಳಾ ಅಧ್ಯಕ್ಷೆ ರೇಷ್ಮಾ ಖಾಜಾವಲಿ ಬನ್ನಿಕೊಪ್ಪ.ತಾಲೂಕಾ ಮಾಜಿ ಅಧ್ಯಕ್ಷ ಅಲ್ಲಿ ಸಾಬ್ ಗೂಂದಿ ಹೊಸಳ್ಳಿ. ಸೇರಿದಂತೆ ಹಿರಿಯ.ಕಿರಿಯ ಮುಖಂಡರ ಮಾರ್ಗದರ್ಶನದಂತೆ ಸೌಹಾರ್ದತೆಯಿಂದ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಸಿದರು.