
- ನ್ಯಾಯಾಲಯದ ತೀರ್ಪಿಗೆ ಬದ್ದ
ನನಗೆ ಜೀವ ಭಯವಿದೆ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ;ಶಭುಲಿಂಗನಗೌಡ
ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ವಿರುದ್ಧ ಬೆಸರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 21- ಕಳೆದ 30 ವರ್ಷದಿಂದ ಶಿಕ್ಷಕರ ಹಾಗೂ ಶಿಕ್ಷಕರ ಸಂಘದ ಸೇವೆ ಮಾಡುತ್ತಾ ಬಂದಿದ್ದೇನೆ .ರಾಜ್ಯ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಹುನ್ನಾರದಿಂದ ನನಗೆ ಅತ್ಯಂತ ನೋವಾಗಿದೆ . ಶಿಕ್ಷಕರ ಸಂಘದ ಗೊಂದಲದ ಗೂಡಾಗಿದೆ. ನ್ಯಾಯಾಲಯದ ತೀರ್ಪಿಗೆ ನಾನು ಬದ್ದನಿರುವೆ ಶಿಕ್ಷಕರು ದೃತಿಗೆಡಬೇಡಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶುಭುಲಿಂಗನಗೌಡ ಪಾಟೀಲ ಹಲಗೇರಿ ಹೇಳಿದರು.
ಅವರು ಮಂಗಳವಾರದಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ 9 ವರ್ಷದಿಂದ ರಾಜ್ಯ ಕಾರ್ಯದರ್ಶಿ ಯಾಗಿ ಕೆಲಸ ಮಾಡುತ್ತಿರುವ ಚಂದ್ರಶೇಖರ್ ನುಗ್ಲಿ ಅನಧಿಕೃತ ವಾಗಿ ಸಭೆ ಕರೆದು ಹೋಟೆಲ್ ನಲ್ಲಿ ಟರಾವು ಮಾಡಿದ್ದು ಅನಧಿಕೃತ ಅಧ್ಯಕ್ಷರನ್ನ ನೇಮಕ ಮಾಡಿದ್ದು. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಸಂಘದ ಚಟುವಟಿಕೆಗಳನ್ನು ಮಾಡುತ್ತಿರುವುದು ಕಾನೂನು ಭಾಹಿರ ಎಂದರು.
ಜೂನ್ ೧ಕ್ಕೆ ಬೆಂಗಳೂರಿನಲ್ಲಿ ಅನಧಿಕೃತ ಬೆಳವಣಿಗೆ ಕುರಿತು ಉಪ್ಪಾರ ಪೊಲೀಸ್ ಠಾಣೆಗೆ ಹೋಗಿದ್ದೇವೆ ಅವರು ಸಾಕ್ಷಿ ನೀಡುವಂತೆ ಕೇಳಿದರು ಸಂಘದಲ್ಲಿ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲಾ ಎಂದರು.
ಕೆಲವರು ಸಂಘವನ್ನು ಕಪಿ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ ಸಂಘವನ್ನು ತಮ್ಮ ಸ್ವಂತ ಮನೆಯಂತೆ ಮಾಡಿಕೊಂಡಿದ್ದಾರೆ. ನಮ್ಮ ಪ್ರಕರಣ ಬೆಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದೆ .ನಾನು 5 ವರ್ಷದ ಅವದಿಗೆ ಅವಿರೋಧವಾಗಿ ಆಯ್ಕೆಯಾದ್ದೆ ದೇವರಾಣೆಗೂ ನಾನು ಅವದಿ ಮಧ್ಯೆ ಇನ್ನೊಬ್ಬರಿಗೆ ಅಧಿಕಾರ ಬಿಟ್ಟು ಕೊಡುವ ಮಾತು ಕೊಟ್ಟಿಲ್ಲಾ ಎಂದು ಪ್ರಮಾಣ ಮಾಡಿದರು.
ಸಂಘದ ಕಾರು ನಾನು ಅಧ್ಯಕ್ಷನಾಗಿರುವುದ ರಿಂದ ನನ್ನ ಬಳಿ ಇತ್ತು ನ. ೧೯ರಂದು ರಾತ್ರೋರಾತ್ರಿ ಇದ್ದ ಕಾರು, ಬೆಳಿಗ್ಗೆ ಇಲ್ಲ. ಕಾರು ಕೀ ನನ್ನ ಬಳಿಯೇ ಇದೆ ಹಾಗಾಗಿ ದೂರು ನೀಡಿದ್ದು ಪೋಲಿಸರು ಕಾರು ಹುಡುಕ್ಕುತ್ತಾರೆ ಎಂದರು.
ಜೀವ ಭಯ : ಸಂಘದಲ್ಲಿ ನಡೆದಿರುವ ಬೆಳವಣಿಗೆ ಯಿಂದ ರಾಜ್ಯಾಧ್ಯಕ್ಷ ಯಾಕೆ ಆಗಿದ್ದೇನೆ ಎನ್ನುವ ಭಯದ ವಾತಾವರಣ ಸೃಷ್ಟಿಯಾಗಿದೆ. ಕಳೆದ 30 ವರ್ಷದಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಸಂಘದ ಪದಾಧಿಕಾರಿಯಾಗಿ ಶಿಕ್ಷಕರ ಸೇವೆ ಮಾಡಿದ್ದೆನೆ. ಸಂಘದ ಕಾರು ಕಳವಾಗಿದೆ ನನಗೆ ಏನಾದರೂ ಮಾಡಿದರೆ ಹೇಗೆ ನನಗೆ ಜೀವ ಭಯ ಕಾಡುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಮಂಜುನಾಥ, ಕೊಟ್ರಪ್ಪ ಗಡಗಿ, ಬಸವರಾಜ್ ಕೋಮಲಾಪುರ ಇತರರು ಇದ್ದರು.