bd36fc01-a3cb-4481-9e87-e7751d2181ae

                             ಮಂಗಳೂರ ಗ್ರಾಮದಲ್ಲಿ ಅದ್ದೂರಿ ಸ್ವಾಗತ

ನನ್ನ ಈ ಸ್ಥಾನಕ್ಕೆ ಕ್ಷೇತ್ರದ ಜನರೆ ಕಾರಣ

ಮಂತ್ರಿ ಗಳ ಆರ್ಥಿಕ ಸಲಹೆಗಾರ ರಾಯರಡ್ಡಿ

ಕರುನಾಡ ಬೆಳಗು ಸುದ್ದಿ
ಕುಕನೂರ 06-ನನ್ನ ಈ ಸ್ಥಾನಕ್ಕೆ ಕಾರಣ ನೀವು ನನಗೆ ಓಟ ಹಾಕಿ ನನ್ನನು ಗೆಲ್ಲಿಸಿದಕ್ಕೆ ನಾನು ಶಾಸಕ ಆದೆ ಆದರೆ ನನ್ನಗೆ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ನನಗೆ ಮುಖ್ಯ ಮಂತ್ರಿ ಗಳ ಆರ್ಥಿಕ ಸಲಹೆಗರರಾಗಿ ನೇಮಕಾಮಾಡಿದ್ದಾರೆ ಇದಕ್ಕೆ ಕಾರಣ ನನ್ನಗೆ ಓಟ್ ಹಾಕಿ ಗೆಲ್ಲಿಸಿದ ನಮ್ಮ ಯಲಬುರ್ಗಾ ವಿಧಾನ ಕ್ಷೇತ್ರದ ಜನರೆ ಕಾರಣ ಎಂದು ಮುಖ್ಯ ಮಂತ್ರಿ ಗಳ ಆರ್ಥಿಕ ಸಲಹೆಗಾರ ಯಲಬುರ್ಗಾ ವಿಧಾನ ಸಭ ಕ್ಷೆತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಹೇಳಿದರು.
ತಾಲೂಕಿನ ಮಂಗಳೂರ ಗ್ರಾಮದಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯತಿ ಕುಕನೂರ ಗ್ರಾಮ ಪಂಚಾಯತಿ ಮಂಗಳೂರು ಇವರು ಸಂಯುಕ್ತ ಆಶ್ರಯದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ರಾಯರೆಡ್ಡಿ ಯವರಿಗೆ ಅಭಿನಂದನ ಸಮಾರಂಭ ಹಾಗೂ ಸಾರ್ವಜನಿಕ ಸಭೆ ಶನಿವಾರ ಹಮ್ಮಿಕೊಳ್ಳಲಾಗಿತ್ತು.ಸಭೆಯನ್ನು ಉದ್ದೇಶಿಸಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಯವರು ಮಾತನಾಡಿ, ನನ್ನ ಈ ಸ್ಥಾನಕ್ಕೆ ನನ್ನ ಕಾರಣ ನನ್ನ ಯಲಬುರ್ಗಾ ವಿಧಾನ ಕ್ಷೇತ್ರದ ಜನರೇ ಕಾರಣ
ಎಂದರು

ಜುಲೈ ತಿಂಗಳಿನಲ್ಲಿ ನಿನ್ನನ್ನು ಮಂತ್ರಿಯಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.ಈ 7 ತಿಂಗಳಿನಲ್ಲಿ ನಾಲ್ಕು ಗ್ಯಾರೆಂಟಿಗಳನ್ನು ಚಾಲುವು ಮಾಡಿದ್ದೇವೆ ಇನ್ನು ಉಳಿದಿರುವುದು ಇನ್ನೂ ಒಂದು ಗ್ಯಾರಂಟಿ ಮಾತ್ರ ಅದನ್ನು ಚಾಲುವು ಮಾಡುತ್ತೇವೆ.ಮಂಗಳೂರು ಗ್ರಾಮದಲ್ಲಿ ಬುದ್ಧ ಬಸವ ಅಂಬೇಡ್ಕರ್ ಕಲ್ಯಾಣ ಮಂಟಪಕ್ಕೆ 4 ಕೋಟಿ ಹಣ ಕೊಟ್ಟಿದ್ದೇನೆಮತ್ತು 200 ವಿದ್ಯಾರ್ಥಿಗಳ ಹಾಸ್ಟೆಲ್ ಕೊಡುತ್ತೇನೆ ನಿಮ್ಮೂರಿಗೆ ಬೈಪಾಸ್ ಕೂಡ ಮಾಡಿಸುತ್ತೇನೆ ರಿಂಗ್ ರೋಡ್ ರಸ್ತೆ ಮಾಡಿಸುತ್ತೇನೆ ನಿಮ್ಮೂರಿನ ಮನೆಗಳ ಹಕ್ಕು ಪತ್ರ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸಿ ನಿಮ್ಮೂರಿನಲ್ಲೇ ಹಕ್ಕು ಪತ್ರ ವಿತರಣೆ ಮಾಡುತ್ತೇನೆ ಮತ್ತು ರೈತರ ವಿಶ್ವಾಸದಿಂದ ರೈತರು ಹೊಲಕ್ಕೆ ಹೋಗಲು ರಸ್ತೆ ಮಾಡಿಕೊಡುತ್ತೇನೆ ಎಂದರು.
ಎಬಿಸಿಡಿ ಗೊತ್ತಿಲ್ಲದವರು ಎಂಎಲ್ಎ ನೀರಾವರಿ ಎಂದರೇನು ಎಂಬುವುದೇ ಗೊತ್ತಿಲ ದವರು ಸುಮ್ಮನೆ ನೀರಾವರಿ ಬಗ್ಗೆ ಮಾತನಾಡುತ್ತಾರೆ ಸುಮ್ನೆ ಕಾಲಿ ಮಾತು ಹೇಳುತ್ತಾರೆ.ಮುಂದಿನ ವರ್ಷ 6 ಹೈ ಸ್ಕೂಲ್ ಕೊಡುತ್ತೇನೆ. ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಹೇಳಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಎಚ್ ಪ್ರಾಣೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದರ್, ಸಿಪಿಐ ಮೌನೇಶ್ ಪಾಟೀಲ್, ರಾಘವೇಂದ್ರ ಜೋಶಿ, ಗ್ರಾಮ ಪಂಚಾಯಿತಿ ಪಿಡಿಒ ನೀಲಮ್ಮ ಚಳಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಕ್ರಪ್ಪ ಚಿನ್ನೊರ, ಉಪಾಧ್ಯಕ್ಷ ಅನ್ನಪೂರ್ಣ ಸುರೇಶ್ ಮ್ಯಾಗಳೇಶಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಯಂಕಣ್ಣ ಯರಾಶಿ, ಹನುಮಂತ ಚಂಡೂರ್, ಬಸವರಾಜ ಉಳ್ಳಾಗಡ್ಡಿ, ಈರಪ್ಪ ಕುಡುಗುಂಟಿ, ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!