b61faa2d-8e2f-498b-a876-f3df2cea15ea

ನರೇಂದ್ರ ಮೋದಿ ಅತ್ಯುತ್ತಮ ಪ್ರಧಾನಮಂತ್ರಿ

ಸಂಸದ ಜಿ ಎಂ ಸಿದ್ದೇಶ್ವರ

ಕರುನಾಡ ಬೆಳಗು ಸುದ್ದಿ

ಹರಪನಹಳ್ಳಿ , ಜ -4 ,ದೇಶದಲ್ಲಿ ಜನರಿಗೆ ಮೋದಿಯೇ ಗ್ಯಾರಂಟಿ, ಕಳೆದ ಹತ್ತು ವರ್ಷಗಳಿಂದ ಭಾರತದ ಪ್ರಧಾನಿ ಒಬ್ಬರು 18 ತಾಸು ಕರ್ತವ್ಯ ನಿರ್ವಹಿಸಿದ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿಯವರಾಗಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದ ಜಿಎಂ ಸಿದ್ದೇಶ್ವರ್ ಹೇಳಿದ್ದಾರೆ .

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಎಂ ಹಾಲಮ್ಮ ಮಲ್ಲಿಕಾರ್ಜುನಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಕ್ಸಿಜನ್ ಘಟಕ ವನ್ನು ಉದ್ಘಾಟಿಸಿ ಮಾತನಾಡಿದ ಅವರು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ಮತ್ತು ಹರಿಹರ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮತ್ತೆ ಕೋವಿಡ್ ಪ್ರಾರಂಭವಾದ ಕಾರಣದಿಂದ ಸುಮಾರು 60 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ಅನ್ನು ಗಂಟೆಗೆ 330 ಲೀಟರ್ ಆಕ್ಸಿಜನ್ ಉತ್ಪಾದಿಸುವ ಘಟಕವನ್ನು ನಮ್ಮ ತಂದೆ ತಾಯಿಯವರ ಹೆಸರಿನಲ್ಲಿ ದೇಣಿಗೆ ನೀಡಿದ್ದೇನೆ ಇದರ ಉಪಯೋಗವೂ ಜನತೆಗೆ ಸದ್ಬಳಕೆಯಾಗಲಿ ಎಂಬುದು ನನ್ನ ಆಶಯ ಎಂದರು .

ಕರೋನವು ಉತ್ತುಂಗದಲ್ಲಿರುವ ಸಂದರ್ಭದಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಗಾಗಿ ಜನರು ಪರದಾಡಿ ಸಾವನ್ನಪ್ಪುತ್ತಿದಿದ್ದು ದುರದೃಷ್ಟಕರ ಆ ಕಾರಣಕ್ಕಾಗಿ ಬಡ ರೋಗಿಗಳಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಈ ಆಕ್ಸಿಜನ್ ಘಟಕಗಳನ್ನು ತೆರೆಯಲು ಮನಸ್ಸು ಮಾಡಿದ್ದೆವು ಎಂದರು .

ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಅತ್ಯುತ್ತಮವಾದಂತ ಆಡಳಿತವನ್ನು ನೀಡಿದ್ದಾರೆ ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಜನಸಾಮಾನ್ಯರ ಬದುಕು ಹಸನಾಗಲು ದೇಶದ ಉದ್ದಗಲಕ್ಕೂ ಕ್ರಮ ಕೈಗೊಂಡಿದ್ದಾರೆ ದೇಶದ ಪ್ರತಿಯೊಬ್ಬ ನಾಗರೀಕನೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕೆಂಬ ಮಹದಾಸೆಯಿಂದ ಶೂನ್ಯ ಖಾತೆಯ ಜನಧನ್ ಖಾತೆಯನ್ನು ತೆರೆಯಲು ಮೋದಿಯವರು ಅವಕಾಶ ಮಾಡಿಕೊಟ್ಟಿದ್ದಾರೆ ಇದರ ಪ್ರತಿಫಲವಾಗಿ ದೇಶದಲ್ಲಿ 110 ಕೋಟಿ ಜನರು ವಿವಿಧ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆದು ಇಷ್ಟೊಂದು ಸಂಖ್ಯೆಯಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ ಅತಿ ದೊಡ್ಡ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಎಲ್ಲ ಯೋಜನೆಗಳು ನರೇಂದ್ರ ಮೋದಿ ಯಂತ ಧೀಮಂತ ಪ್ರಧಾನಿಯವರಿಂದ ಮಾತ್ರ ಸಾಧ್ಯ ಎಂದರು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಗೆದ್ದು ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಂಕರ್ ನಾಯಕ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದರು ಆಕ್ಸಿಜನ್ ಮತ್ತು ವೆಂಟಲೇಟರ್ಗಳ ಕೊರತೆಯಿಂದ ರೋಗಿಗಳನ್ನ ಉಳಿಸಲು ನಾವು ಅಸಹಾಯಕ ರಾಗಿದ್ದೆವು ಇಂತಹ ಸಂದರ್ಭದಲ್ಲಿ ಆಕ್ಸಿಜನ್ ಪ್ಲಾಂಟನ್ನು ದೇಣಿಗೆ ನೀಡುವ ಮೂಲಕ ಅನೇಕ ಜನರ ಉಸಿರು ಉಳಿಸುವಲ್ಲಿ ಮಹತ್ತರವಾದ ಕಾರ್ಯವನ್ನು ನಿರ್ವಹಿಸಿದ ಕೀರ್ತಿ ಸಂಸದ ಜಿಎಂ ಸಿದ್ದೇಶ್ವರ ಅವರಿಗೆ ಸಲ್ಲುತ್ತದೆ ಎಂದರು .

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ವೈದ್ಯಾಧಿಕಾರಿ ಡಾ ಶಂಕರ್ ನಾಯಕ್ ತಾಲೂಕು ಉಪ ವಿಭಾಗಾಧಿಕಾರಿ ಟಿವಿ ಪ್ರಕಾಶ್ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಹಾಲಸ್ವಾಮಿ , ಬಿಜೆಪಿಯ ಮುಖಂಡರಾದ ಆರುಂಡಿ ನಾಗರಾಜ್ ಸತ್ತೂರ್ ಹಾಲೇಶ್, ಪುರಸಭೆ ಮಾಜಿ ಅಧ್ಯಕ್ಷ ಆರ್ ಆರ್ ಅಶೋಕ್ ,ಮಹಾಬಲೇಶ್ವರ ಗೌಡ್ ಗಿರಾಜ್ ರೆಡ್ಡಿ ರಾಘವೇಂದ್ರ ಶೆಟ್ಟಿ ವೀರೇಶ ಶೆಟ್ಟಿ ನಿಟ್ಟೂರು ಸಣ್ಣ ಹಾಲಪ್ಪ , ಕುಸುಮ ಜಗದೀಶ್, ಚಿಗಟೇರಿ ಉದಯ್ ಕುಮಾರ್ ಸೇರಿದಂತೆ ಮುಂತಾದವರು ಹಾಜರಿದ್ದರು .

Leave a Reply

Your email address will not be published. Required fields are marked *

error: Content is protected !!