934575ed-8a26-4abe-a054-0a7e88c0e409
                              ನವೆಂಬರ್ 10 ರಂದು 8ನೇ ಆಯುರ್ವೇದ ದಿನಾಚರಣೆ

ಕರುನಾಡ ಬೆಳಗು ಸುದ್ದಿ
ಬೆಂಗಳೂರು, ೦೯-  ಭಾರತ ಸರ್ಕಾರದ ಆಯುಷ್ ಸಚಿವಾಲಯವು 2016 ರಿಂದ ಪ್ರತಿ ವರ್ಷ ಧನ್ವಂತರಿ ಜಯಂತಿಯಂದು ಆಯುರ್ವೇದ ದಿನವನ್ನು ಆಚರಿಸುತ್ತಿದೆ. ಕಳೆದ ಮೂರು ವರ್ಷಗಳಿಂದ, ಪಿ.ಎಂ.ಒ ತೆಗೆದುಕೊಂಡ ಕ್ರಿಯಾತ್ಮಕ ಉಪಕ್ರಮಗಳಿಂದಾಗಿ, ಸರ್ವ ಸರ್ಕಾರಿ ವಿಧಾನದೊಂದಿಗೆ ಕಾರ್ಯಗತಗೊಳ್ಳುತ್ತಿರುವ ಭಾರತ ಸರ್ಕಾರದ ಕಾರ್ಯಕ್ರಮವಾಗಿ ಇದು ರೂಪುಗೊಂಡಿದೆ. ಆಯುರ್ವೇದವು ಒಂದು ಪ್ರಾಚೀನ ವೈದ್ಯಕೀಯ ವಿಜ್ಞಾನ. ಇದು ಕೇವಲ ಪುರಾತನ  ಜ್ಞಾನವಾಗಿರದೆ, ಆರೋಗ್ಯವನ್ನು ಪ್ರಚುರಪಡಿಸಿ ರೋಗವನ್ನು ತಡೆಗಟ್ಟುವ ಜೀವಂತ ಪರಂಪರೆಯಾಗಿದ್ದು, ನವೆಂಬರ್ 10 ರಂದು 8ನೇ ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಜಾಗತಿಕ ಆರೋಗ್ಯ ರಕ್ಷಣೆಯ ಮುಂಚೂಣಿಯಲ್ಲಿ ಆಯುರ್ವೇದದ ಪ್ರಚಾರ ಮತ್ತು ಸ್ಥಾನ,  ರಾಷ್ಟ್ರೀಯ ಆರೋಗ್ಯ ನೀತಿ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ರೂಪಿಸವಲ್ಲಿ ಆಯುರ್ವೇದದ ಕೊಡುಗೆ ಮತ್ತು ಉಪಯುಕ್ತತೆಯ ಸದ್ಬಳಕೆ, ಆಯುರ್ವೇದದ ಸಾಮಥ್ರ್ಯವನ್ನು ಬಳಸಿ ರೋಗದ ಹೊರೆ, ಅಸ್ವಸ್ಥತೆ ಮತ್ತು ಮರಣ ಪ್ರಮಾಣವನ್ನು ಕುಗ್ಗಿಸುವುದು, ಮಾನವರು, ಸಸ್ಯಗಳು, ಪ್ರಾಣಿಗಳು ಮತ್ತು ಪರಿಸರದ ಆರೋಗ್ಯ ಹಾಗು ಯೋಗಕ್ಷೇಮವನ್ನು ಸಂರಕ್ಷಿಸುವಲ್ಲಿ ಆಯುರ್ವೇದದ ಅನನ್ಯ ಶಕ್ತಿ ಮತ್ತು ಅದರ ಸುಸಂಗತ ತತ್ವಗಳ ಮೇಲೆ ಕೇಂದ್ರೀಕೃತ ದೃಷ್ಟಿ, ಆಯುರ್ವೇದದಲ್ಲಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಿ, ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು ಹಾಗು ಸಮಸ್ತ ಸಮುದಾಯದ ಭಾಗವಹಿಸುವಿಕೆಯ ಮೂಲಕ ಆಯುರ್ವೇದದ ಪ್ರಚಾರ, ಆಯುರ್ವೇದದ ಮೂಲಕ, ಅದರ ಸಂಪೂರ್ಣ ಉಪಯೋಗಕ್ಕಾಗಿ “ಅಸ್ವಸ್ಥತೆಯಿಂದ  ಸ್ವಾಸ್ಥ್ಯ”   ಸಂಸ್ಕøತಿಯ ಬೆಳವಣಿಗೆ ಮತ್ತು ಆಯುರ್ವೇದವು ಪುರಾವೆ ಆಧಾರಿತ ಮತ್ತು ವೈಜ್ಞಾನಿಕ ವೈದ್ಯಕೀಯ ವ್ಯವಸ್ಥೆ ಎಂಬ ಅರಿವು ಮೂಡಿಸುವುದು ಆಯುರ್ವೇದ ದಿನದ ಉದ್ದೇಶವಾಗಿದೆ.

ಇತ್ತೀಚಿನ ಜಿ20 ಶೃಂಗಸಭೆಯಲ್ಲಿ, ಎಲ್ಲಾ ಸದಸ್ಯ ರಾಷ್ಟ್ರಗಳು ಸರ್ವಾನುಮತದಿಂದ ಜಿ20 ಘೋಷಣೆಯನ್ನು ಅಂಗೀಕರಿಸಿದವು, ಇದು ಸಾರ್ವಜನಿಕ ಆರೋಗ್ಯ ವಿತರಣಾ ವ್ಯವಸ್ಥೆಗಳಲ್ಲಿ ಪುರಾವೆ ಆಧಾರಿತ ಸಾಂಪ್ರದಾಯಿಕ ಔಷಧ ಪದ್ಧತಿಗಳ ಸಾಮಥ್ರ್ಯವನ್ನು ಗುರುತಿಸಿತು ಮತ್ತು ಅಂಗೀಕರಿಸಿತು. ಪೌಷ್ಠಿಕಾಂಶ ಸೇರಿದಂತೆ ವಿವಿಧ ಆರೋಗ್ಯ ಅಂಶಗಳನ್ನು ತಿಳಿಸುವಾಗ ಘೋಷಣೆಯು ‘ಏಕರೂಪೀ ಆರೋಗ್ಯ’ ವಿಧಾನಕ್ಕೆ ಒತ್ತು ನೀಡಿದೆ. ಸಾಂಪ್ರದಾಯಿಕ ಔಷಧ ಮತ್ತು ಭಾರತದ ಜಿ20   ಅಧ್ಯಕ್ಷತೆಯ ವಿಷಯವಾದ ‘ವಸುಧೈವ ಕುಟುಂಬಕಂ’ ಕುರಿತು ಜಿ20 ನ ಅರಿವಿನೊಂದಿಗೆ ಹೊಂದಾಣಿಕೆಯಲ್ಲಿ, ಈ ಆಯುರ್ವೇದ ದಿನದ ವಿಷಯವು ಮಾನವ-ಪ್ರಾಣಿ-ಸಸ್ಯ-ಪರಿಸರವನ್ನು ಕೇಂದ್ರೀಕರಿಸುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ, ಗಣ್ಯ ವ್ಯಕ್ತಿಗಳಿಂದ ವೀಡಿಯೊ ಸಂದೇಶಗಳು, ಆಯುರ್ವೇದದ ಮೇಲೆ ಮಾಹಿತಿ ಪತ್ರಗಳ ಪ್ರಸರಣ, ಆಕಾಶವಾಣಿ /ಟಿವಿ ಸಂದೇಶಗಳು , ಕಿರುಚಿತ್ರಗಳು/ ಜಾಹಿರಾತು ಫಲಕಗಳು / ಎಲ್‍ಇಡಿ ಪ್ರದರ್ಶಕಗಳು / ಯೂಟ್ಯೂಬ್ ದೃಶ್ಯ ಸಂದೇಶಗಳು /ಪತ್ರಿಕಾ  ಜಾಹೀರಾತುಗಳು, ಆಯುರ್ವೇದದಲ್ಲಿ ರೇಡಿಯೋ ಮತ್ತು ಟಿವಿ ವಿಚಾರವಿನಿಮಯ ಕಾರ್ಯಕ್ರಮಗಳು, ಆಯುರ್ವೇದ ದಿನದಂದು ಇ-ಕಿಟ್ ಪ್ರಸಾರ, ಒಣ ಭೂಮಿಗೆ ಸೂಕ್ತವಾದ ಔಷಧೀಯ ಸಸ್ಯಗಳನ್ನು ಒಳಗೊಂಡಂತೆ (ರಾಜ್ಯವಾರು) ಕೃಷಿಗೆ ಸೂಕ್ತವಾದ ಔಷಧೀಯ ಸಸ್ಯಗಳ ಪಟ್ಟಿಯ ಪ್ರಸರಣ, ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿ ಅಭಿವೃದ್ಧಿಪಡಿಸಿರುವ  ಕೃಷಿ-ತಂತ್ರಜ್ಞಾನಗಳ ಪ್ರಸರಣ, ವಿವಿಧ ಪಾಲುದಾರರು, ರೈತ ಉತ್ಪಾದಕರ ಸಂಸ್ಥೆಗಳು,  ಇತ್ಯಾದಿಗಳೊಂದಿಗೆ ಔಷಧೀಯ ಸಸ್ಯಗಳು/ ಇ-ಚರಕ್‍ಗಳ ಮಾರುಕಟ್ಟೆಯ ಅರಿವು ಮೂಡಿಸುವಿಕೆ ಮತ್ತು ರೈತರಲ್ಲಿ ಉತ್ತಮ ಕೃಷಿ ಪದ್ಧತಿ (ಜಿಎಪಿ) ಮತ್ತು ಉತ್ತಮ ಕ್ಷೇತ್ರ ಸಂಗ್ರಹ ಪದ್ಧತಿಗಳ (ಜಿಎಫ್‍ಸಿಪಿ) ಪರಿಕಲ್ಪನೆಯ ಬಗ್ಗೆ ಜಾಗೃತಿ ಕುರಿತು ಜನರಿಗೆ ಸಂದೇಶವನ್ನು ತಲುಪಿಸಲಾಗುವುದು.

ಪ್ರದರ್ಶನ ಮತ್ತು ಸಣ್ಣ – ಎಕ್ಸ್ ಪೋ , ದೇಶಾದ್ಯಂತ ವೈದ್ಯಕೀಯ ಮತ್ತು ಸ್ವಾಸ್ಥ್ಯ ಶಿಬಿರಗಳು, ಸಾರ್ವಜನಿಕ ಜಾಗೃತಿ ಉಪನ್ಯಾಸಗಳು, ಸಾಮಾನ್ಯ ಔಷಧೀಯ ಸಸ್ಯಗಳ ವಿತರಣೆ, ಪಾರಂಪರಿಕ ಸ್ಥಳಗಳಲ್ಲಿ ಎಲ್‍ಎಡಿ ಪ್ರದರ್ಶನ (ವಿಷಯಗಳನ್ನು ಆಯುಷ್   ಸಚಿವಾಲಯ  ಒದಗಿಸುವುದು), ಶಾಲಾ ಸಂಪರ್ಕ ಕಾರ್ಯಕ್ರಮಗಳು, ಅಂಗನವಾಡಿಗಳ ಒಳಗೊಳ್ಳುವಿಕೆ, ಆಯುರ್ವೇದ ಘೋಷಣೆ ಯನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದೊಂದಿಗೆ ಜೋಡಿಸುವುದು, MyGov  ಮತ್ತು ಆಯುಷ್   ಕ್ಯಾಂಪೇನ್ ಪೆÇೀರ್ಟಲ್‍ನಲ್ಲಿ ರಸಪ್ರಶ್ನೆ / ಸ್ಪರ್ಧೆಗಳು, ಸಮುದಾಯ ಸೇವಾ ಕೇಂದ್ರಗಳು / ಸಮುದಾಯ ಆರೋಗ್ಯ ಕೇಂದ್ರಗಳು / ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ತೊಡಗಿಸಿಕೊಳ್ಳುವಿಕೆ, ಆಯುರ್ವೇದದ ಬಳಕೆಗೆ ಸಂಬಂಧಿಸಿದಂತೆ MyGov  ವೇದಿಕೆಯಲ್ಲಿ ಪ್ರಮಾಣ ಸ್ವೀಕಾರ, ಸಿಸಿಆರೆಎಸ್ ಅಭಿವೃದ್ಧಿಪಡಿಸಿದ ಆನ್‍ಲೈನ್ ಪೆÇೀರ್ಟಲ್‍ಗಳ ಮೂಲಕ ಪ್ರಕೃತಿ ಮೌಲ್ಯಮಾಪನ ಮತ್ತು ಸ್ವಾಸ್ಥ್ಯ ಮೌಲ್ಯಮಾಪನ ಮತ್ತು ಆರ್‍ಸಿಎಫ್‍ಸಿ / ಎಸ್‍ಎಂಪಿಬಿ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು, ಐಸಿಎಆರ್ ಇತ್ಯಾದಿ ಸೇರಿದಂತೆ ಇತರ ಅನುಷ್ಠಾನ ಸಂಸ್ಥೆಗಳ ಮೂಲಕ ಸಸ್ಯಗಳ ಔಷಧೀಯ ಮತ್ತು ಆರ್ಥಿಕ ಮೌಲ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು.

ಚಿತ್ರಕಲೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆಯುರ್ವೇದ ಪಾಕವಿಧಾನಗಳ ಜ್ವಾಲೆಯಿಲ್ಲದ ಅಡುಗೆ ಸ್ಪರ್ಧೆ,  ಜಿಂಗಲ್ ಸ್ಪರ್ಧೆ, ಘೋಷಣೆ ಸ್ಪರ್ಧೆ, ಪೆÇೀಸ್ಟರ್ ಸ್ಪರ್ಧೆ,  ಕಿರು ವಿಡಿಯೋ ಚಿತ್ರ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಔಷಧೀಯ ಸಸ್ಯ ಸಂಬಂಧಿತ ಸ್ಪರ್ಧೆ ಮತ್ತು ಚರ್ಚಾ ಮತ್ತು ರಸಪ್ರಶ್ನೆ ಸ್ಪರ್ಧೆ ಮುಂತಾದ ಜನ ಭಾಗೀದಾರಿಯ ವಿವಿಧ ಚಟುವಟಿಕೆ ಮತ್ತು ವಿವಿಧ ಸ್ಪರ್ಧೆಗಳನ್ನು ದೇಶಾದ್ಯಂತ ಆಯೋಜಿಸಲಾಗುವುದು.

ಸೆಲ್ಫಿ ಪಾಯಿಂಟ್‍ಗಳು, ದೇಶದಾದ್ಯಂತ ಆಯುರ್ವೇದಕ್ಕಾಗಿ ಓಟ, ರೈಡರ್ಸ್ ರ್ಯಾಲಿ (ದೇಶದಾದ್ಯಂತ ವೃತ್ತಿಪರ ಬೈಕರ್‍ಗಳ ಮೂಲಕ), ಸಾರ್ವಜನಿಕ ಆರೋಗ್ಯ ಸಂಶೋಧನಾ ಚಟುವಟಿಕೆಗಳ ಒಗ್ಗೂಡಿಸುವಿಕೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯುರ್ವೇದದ ಬಗ್ಗೆ ಅರಿವು ಮೂಡಿಸಲು ವಿವಿಧ ಆಯುರ್ವೇದ ಸಂಸ್ಥೆಗಳಿಗೆ ಭೇಟಿ ಮತ್ತು ದೇಶಾದ್ಯಂತ ವಿವಿಧ ಶಾಲೆಗಳು ಮತ್ತು ಸಂಸ್ಥೆಗಳಲ್ಲಿ ಗಿಡಮೂಲಿಕೆಗಳ ಉದ್ಯಾನಗಳ ಅಭಿವೃದ್ಧಿ ಕುರಿತು ಜನಾಂದೋಲಗಳನ್ನು ಹಮ್ಮಿಕೊಳ್ಳುವುದು.

ಆಯುರ್ವೇದದ ಚಿಕಿತ್ಸೆಯನ್ನು ಬಳಸಿ, ಬೆಳಿಸಿ ಬೆಂಬಲಿಸೋಣ ಎನ್ನುವ ಮೂಲಕ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ  ಆಯುರ್ವೇದ ಸಂಶೋಧನಾ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಡಾ. ಸುಲೋಚನಾ ಭಟ್ಟ್ ಅವರು ಸಂಸ್ಥೆಯಲ್ಲಿ ಲಭ್ಯವಿರುವ ಉಚಿತ ಆರೋಗ್ಯ ಸೇವೆಗಳನ್ನು ಉಪಯೋಗಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!