Screenshot_2023_1101_093048

    ನವೆಂಬರ್ 2ರಂದು ಕೊಪ್ಪಳ ಜಿಲ್ಲೆಗೆ
ಜ್ಯೋತಿ ಯಾತ್ರೆ ಆಗಮನ: ಶಿವರಾಜ ತಂಗಡಗಿ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ಕರ್ನಾಟಕ ಸಂಭ್ರಮ-50 ಕಾರ್ಯಕ್ರಮಡಿ ಪ್ರತಿ ಜಿಲ್ಲೆಯಲ್ಲಿ ಹೊರಡುವ ಜ್ಯೋತಿಯಾತ್ರೆಯು ಕೊಪ್ಪಳ ಜಿಲ್ಲೆಗೆ ನವೆಂಬರ್ 02 ರಾತ್ರಿ 8 ಗಂಟೆಗೆ ಹೊಸಪೇಟೆ ಮಾರ್ಗವಾಗಿ ಕೊಪ್ಪಳ ಜಿಲ್ಲೆಗೆ ಮುನಿರಾಬಾದ್ ಮೂಲಕ ಆಗಮಿಸಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಹೇಳಿದರು.
ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ 1ರಂದು ನಡೆದ 68ನೇ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾದ ಬಳಿಕ ಅಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 2ರ ಸಂಜೆ 7.30ಕ್ಕೆ ಜ್ಯೋತಿ ಯಾತ್ರೆಯು ಹಂಪಿಯಿAದ ನಿರ್ಗಮಿಸಲಿದೆ. 7.45ಕ್ಕೆ ಹೊಸಪೇಟೆಗೆ ಆಗಮಿಸಲಿದೆ. ಅಲ್ಲಿಂದ ಹೊರಟು ರಾತ್ರಿ 8 ಗಂಟೆಗೆ ಕೊಪ್ಪಳ ಜಿಲ್ಲೆಯ ಗಡಿಭಾಗ ಎನ್‌ಹೆಚ್ 53 ಟಿಬಿ ಡ್ಯಾಮ್ ಬಳಿಕ ಸರ್ವೀಸ್ ರಸ್ತೆ ಮುನಿರಾಬಾದ್‌ನಲ್ಲಿ ಜ್ಯೋತಿ ಜಾತ್ರೆಗೆ ಪೂಜೆ, ಪುಷ್ಪಾರ್ಚನೆ, ಮೆರವಣಿಗೆ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಲಿದೆ.
ಇಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳ ಚಿತ್ರಗಳ ಪ್ರದರ್ಶನ ಕೂಡ ಇರಲಿದೆ. ಮುನಿರಾಬಾದ್‌ನಲ್ಲಿ ಮೆರವಣಿಗೆ ಕಲಾತಂಡಗಳೊAದಿಗೆ ಅದ್ದೂರಿಯಾಗಿ ಸ್ವಾಗತಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಹಿತಿಗಳು, ಕಲಾವಿದರು ಸೇರಿದಂತೆ ಅನೇಕರು ಇರಲಿದ್ದಾರೆ. ಅಲ್ಲಿ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಸಾಹಿತಿಗಳು, ಕಲಾವಿದರು, ಗಣ್ಯರು, ಕನ್ನಡಪರ ಸಂಘಟನೆಗಳು, ಇನ್ನೀತರ ಸಂಘಟನೆಗಳು, ಎಲ್ಲ ಗ್ರಾಮಸ್ಥರು, ವಿದ್ಯಾರ್ಥಿಗಳು, ಯುವಜನರು ಸರ್ವರು ಭಾಗಿಯಾಗಬೇಕು ಎಂದು ಸಚಿವರು ಇದೆ ವೇಳೆ ಸುದ್ದಿಗೋಷ್ಠಿ ಮೂಲಕ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅಂದು ರಾತ್ರಿ 8.15ಕ್ಕೆ ಹೊಸ ಲಿಂಗಾಪುರ, 8.30ಕ್ಕೆ ಹೊಸಳ್ಳಿ ಮಾರ್ಗವಾಗಿ ಜ್ಯೋತಿ ಯಾತ್ರೆಯು 8.45ಕ್ಕೆ ಗಿಣಿಗೇರಾ ಗ್ರಾಮಕ್ಕೆ ಬರಲಿದ್ದು ಗಿಣಿಗೇರಾ ಗ್ರಾಮ ಪಂಚಾಯತ್‌ನಿAದ ಪೂಜೆ ಮತ್ತು ಪುಷ್ಪಾರ್ಪಣೆ ಮತ್ತು ಬೀಳ್ಕೊಡುಗೆ ನಡೆಯಲಿದೆ. ಬಳಿಕ 9 ಗಂಟೆಗೆ ಕೊಪ್ಪಳ ನಗರಕ್ಕೆ ಆಗಮಿಸಲಿದ್ದು ನಗರದ ಬಸವೇಶ್ವರ ವೃತ್ತದಲ್ಲಿ ನಗರಸಭೆಯಿಂದ ಪೂಜೆ ಮತ್ತು ಪುಷ್ಪಾರ್ಪಣೆ ಮತ್ತು ಬೀಳ್ಕೊಡುಗೆ ನಡೆಯಲಿದೆ. 9.15ಕ್ಕೆ ಕೊಪ್ಪಳ ಭಾಗ್ಯನಗರ ಮೇಲ್ಸೇತುವೆ ಹತ್ತಿರ ಸಂಚರಿಸಲಿದ್ದು ಅಲ್ಲಿ ಭಾಗ್ಯನಗರ ಪಟ್ಟಣ ಪಂಚಾಯಿತಿಯಿAದ ಪೂಜೆ ಮತ್ತು ಪುಷ್ಪಾರ್ಪಣೆ ಮತ್ತು ಬೀಳ್ಕೊಡುಗೆ ನಡೆಯಲಿದೆ. ಬಳಿಕ 9.30ಕ್ಕೆ ದದೇಗಲ್ ಮಾರ್ಗವಾಗಿ 9.40ಕ್ಕೆ ಹಲಗೇರಿ ಗ್ರಾಮಕ್ಕೆ ಆಗಮಸಲಿದ್ದು ಅಲ್ಲಿನ ಪಂಚಾಯಿತಿಯಿAದ ಪೂಜೆ ಮತ್ತು ಪುಷ್ಪಾರ್ಪಣೆ ಮತ್ತು ಬೀಳ್ಕೊಡುಗೆ ನಡೆಯಲಿದೆ. ಬಳಿಕ 9.50ಕ್ಕೆ ಭಾನಾಪುರ ಪ್ರವೇಶಿಸಲಿದ್ದು ಅಲ್ಲಿನ ಪಂಚಾಯಿತಿಯಿAದ ಪೂಜೆ ಮತ್ತು ಪುಷ್ಪಾರ್ಪಣೆ ಮತ್ತು ಬೀಳ್ಕೊಡುಗೆ ನಡೆಯಲಿದೆ. 10 ಗಂಟೆಗೆ ತಳಕಲ್ ಪ್ರವೇಶಿಸಲಿದ್ದು ಅಲ್ಲಿನ ಪಂಚಾಯಿತಿಯಿAದ ಪೂಜೆ ಮತ್ತು ಪುಷ್ಪಾರ್ಪಣೆ ಮತ್ತು ಬೀಳ್ಕೊಡುಗೆ ನಡೆಯಲಿದೆ. 10.10ಕ್ಕೆ ಬನ್ನಿಕೊಪ್ಪದಲ್ಲಿ ಅಲ್ಲಿನ ಪಂಚಾಯಿತಿಯಿAದ ಪೂಜೆ ಮತ್ತು ಪುಷ್ಪಾರ್ಪಣೆ ಮತ್ತು ಬೀಳ್ಕೊಡುಗೆ ನಡೆಯಲಿದೆ. ಬಳಿಕ ಗದಗ ಜಿಲ್ಲೆಯ ಲಕ್ಕುಂಡಿ ಮಾರ್ಗವಾಗಿ ಜ್ಯೋತಿಯಾತ್ರೆಯು ಗದಗ ನಗರದತ್ತ ಸಂಚರಿಸಲಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ಸಂಭ್ರಮ-50ರ ಆಚರಣೆಗೆ ಸಂಬAಧಿಸಿದAತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯಾದ್ಯಂತ ಈ ಜ್ಯೋತಿಯಾತ್ರೆ ಸಂಚರಿಸಲಿದೆ. ಈ ಜ್ಯೋತಿ ಯಾತ್ರೆಗೆ ಸ್ವಾಗತಿಸುವ ಹಾಗೂ ಬೀಳ್ಕೊಡುವ ಕಾರ್ಯಕ್ರಮದ ವ್ಯವಸ್ಥೆ ಮಾಡಿಕೊಳ್ಳಲು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಇನ್ನೀತರರು ಇದ್ದರು.

Leave a Reply

Your email address will not be published. Required fields are marked *

error: Content is protected !!