
ಬಿಜೆಪಿ ಅಧ್ಯಕ್ಷ ವಿ ನಾಗರಾಜ ರೆಡ್ಡಿ ನೇತೃತ್ವದಲ್ಲಿ ಬಿರುಸಿನ ಪ್ರಚಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,04- ಬಿಜೆಪಿ ಕೌಲ್ ಬಜಾರ್ ವಿಭಾಗದ ಮಂಡಲ ಅಧ್ಯಕ್ಷರಾದ ವಿ ನಾಗರಾಜ ರೆಡ್ಡಿ ನೇತೃತ್ವದಲ್ಲಿ, ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ, ಶ್ರೀರಾಮುಲು ಅವರ ಪರವಾಗಿ ವಿಭಾಗ ಮಟ್ಟದ ನಾಯಕರು ಮತ್ತು ಕಾರ್ಯಕರ್ತರಿಂದ ನಾನಾ ಭಾಗಗಳಲ್ಲಿ ಬಿರುಸಿನ ಪ್ರಚಾರವನ್ನು ಕೈಗೊಳ್ಳಲಾಯಿತು.
33ನೇ ವ್ಯಾಪ್ತಿಯಲ್ಲಿ ಬರುವ ಅಲ್ಲಿಪುರ, ದಾರದ ಮಿಲ್, ಮತ್ತು ಇತರ ಭಾಗಗಳಲ್ಲಿ ಪ್ರಚಾರವನ್ನು ಕೈಗೊಳ್ಳಲಾಗಿತ್ತು. ಮನೆ ಮನೆಗೆ ವಿ ನಾಗರಾಜ ರೆಡ್ಡಿ ಗುಂಪು ಚುನಾವಣೆ ಪಾಂಪ್ಲೆಟ್ಟುಗಳನ್ನು ವಿತರಿಸಿ, ಮತಯಾಚನೆ ಮಾಡಲಾಯಿತು. ಬಳ್ಳಾರಿ ನಗರ ಸಂಪೂರ್ಣ ಅಭಿವೃದ್ಧಿಗಾಗಿ, ಮತ್ತು ಬಡವರ ಕುಟುಂಬಗಳಿಗೆ ಬೇಕಾದ ಸರ್ಕಾರದ ಸೌಲಭ್ಯಗಳು ತಲುಪಬೇಕೆಂದರೆ,ಮೇ 7 ರಂದುನಡೆಯುವ ಲೋಕಸಭಾ, ಮತದಾನ ದಿನದಂದು, ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಪರವಾಗಿ ಮತವನ್ನು ಚಲಾಯಿಸಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಕೌಲ್ ಬಜಾರ್ ವಿಭಾಗದ ಮುಖಂಡರು ಶಂಕರಪ್ಪ , ಮತ್ತು ಮಾಜಿ ಅಧ್ಯಕ್ಷರು ವೆಂಕಟೇಶ್, ಆಯ್ತು ಮೋರ್ಚಾ ವಿಭಾಗದ ಉಪಾಧ್ಯಕ್ಷರು ಕೆ. ಶ್ಯಾಮ್ ಸುಂದರ್, ಬಿಜೆಪಿ ರಾಜ್ಯಮಟ್ಟದ ಸದಸ್ಯರು, ಮತ್ತು ಮಾಜಿ ಕಾರ್ಪೊರೇಟರ್ ಸಂಜಯ್,ಚೌದರಿ ಸಿಂಗ್ ಗಳ ಜೊತೆಗೆ, ಹಲವಾರು ಮಂದಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.