
ನಾಗರಿಕರು ಸ್ವಚ್ಛ ನಗರಕ್ಕಾಗಿ ಸಹಕರಿಸಿ : ಶಾಸಕ ಹೆಚ್.ಆರ್.ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ವಿಜಯನಗರ, 30- ನಗರಸಭೆ ಹೊಸಪೇಟೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಹೊಸಪೇಟೆಗಾಗಿ ಸಮುದಾಯ ಸಂಕಲ್ಪ ನಗರ ಕಾಲುವೆಗಳ ಸ್ವಚ್ಛತಾ ಅಭಿಯಾನವನ್ನು ನಗರದ ಆರ್.ಟಿ.ಓ ಕಛೇರಿ ಬಳಿ ಇರುವ ಹೆಚ್.ಎಲ್.ಸಿ ಕಾಲುವೆಯನ್ನು ಸ್ವಚ್ಛಗೊಳಿಸುವುದರ ಮುಖಾಂತರ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ಹೆಚ್.ಎಲ್.ಸಿ ಕಾಲುವೆಯನ್ನು ಸ್ವಚ್ಛಗೊಳಿಸುವುದರ ಮುಖಾಂತರ ಪ್ರಾರಂಭಿಸಲಾಗಿದೆ ಮುಂದಿನ ದಿನಗಳಲ್ಲಿ ನಗರದಲ್ಲಿರುವ ಎಲ್ಲಾ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುವುದು, ರೈತರಿಗೆ ಒಳ್ಳೆಯ ನೀರನ್ನು ಕೊಡಲಾಗುವುದು, ನಗರ ಸ್ವಚ್ಛವಾಗಿರಬೇಕೆಂದರೆ ಸಾರ್ವಜನಿಕರಾದ ನಮ್ಮ ಪಾತ್ರವೂ ಬಹಳ ಮುಖ್ಯವಾಗಿದೆ.
ಮನೆಯಲ್ಲಿನ ಕಸ, ಬಾಟಲಿ, ಇತ್ಯಾದಿ ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಮತ್ತು ಕಾಲುವೆಗೆ ತಂದು ಎಸೆಯಬೇಡಿ ನಗರ ಸಭೆಯವರಿಗೆ ಕೊಡಿ ನಗರವನ್ನು ಸ್ವಚ್ಛವಾಗಿಡಲು ಎಲ್ಲರೂ ಮುಂದಾಗಿ ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ ನಗರದಲ್ಲಿನ ಸ್ವಚ್ಛತೆಯ ಬಗ್ಗೆ ಯಾರು ದೂರು ಕೊಡುವ ಅಗತ್ಯವಿಲ್ಲ ನಮ್ಮ ಗಮನಕ್ಕೆ ಬಂದ ತಕ್ಷಣ ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಜನರು ನಗರವನ್ನು ಸ್ವಚ್ಛವಾಗಿಡಳು ಸಹಕರಿಸಬೇಕು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ನಗರ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಹಂಪಿ ಪ್ರವಾಸಿ ತಾಣವಾಗಿರುವುದರಿಂದ ಹೊಸಪೇಟೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಹಾಗಾಗಿ ನಗರವನ್ನು ಕಾಲುವೆಗಳನ್ನು ಮತ್ತು ನಗರವನ್ನು ಸ್ವಚ್ಛತೆಯಿಂದಿಡನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಸ್ವಚ್ಛತಾ ಅಭಿಯಾನದಲ್ಲಿ ನಗರ ಸಭೆ ಸದಸ್ಯರು, ರೋಟರಿ ಸಂಸ್ಥೆಯ ಸದಸ್ಯೆರು, ಪೌರಕಾರ್ಮಿಕರು ವಿವಿಧ ಸ್ವಯಂ ಸೇವಾ ಕಾರ್ಯಕ್ರತರು ಭಾಗವಹಿಸಿದ್ದರು.