
ನಾಡಾ ಕಛೇರಿಯಲ್ಲಿ ಶಾಟ್ ಸರ್ಕ್ಯೂಟ್ ದೊಡ್ಡ ಅನಾಹುತ ತಪ್ಪಿದೆ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ,30- ಪಟ್ಟಣದ ಸಂತೆ ಮಾರುಕಟ್ಟೆ ಆವರಣದಲ್ಲಿರುವ ನಾಡಾ ಕಛೇರಿಯಲ್ಲಿದಿ.29ರ ಶುಕ್ರವಾರ, ಸಾಯಂಕಾಲ 5.00 ಗಂಟೆಯ ಸುಮಾರಿಗೆ ವಿದ್ಯುತ್ ಅವಘಡ ಸಂಭವಿಸಿ ಕಛೇರಿಯಲ್ಲಿನ 2-ಕಂಪ್ಯೂಟರ್, 1-ಲ್ಯಾಪ್ಟಾಪ್,1-ಸ್ಕ್ಯಾನರ್, ಆಧಾರ್ ಕಾರ್ಡ್ ಮಾಡುವ ಉಪಕಾರಣಗಳು, ಕಡತಗಳು ಮತ್ತು ಭೂಮಿಗೆ ಸಂಭಂಧಿಸಿದ ಹಳೆಯ ಧಾಖಲೆಗಳು ಸಹ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಶುಕ್ರವಾರ “ಗುಡ್ ಪ್ರೈಡೆ” ದಿನ ಸರ್ಕಾರಿ ರಜಾ ಇದ್ದಿದ್ದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಜೆಯಲ್ಲಿದ್ದರು. ಈ ಸಂಧರ್ಭದಲ್ಲಿ ಕಛೇರಿಯ ಗಣಕಯಂತ್ರ ಕೊಠಡಿಯಲ್ಲಿ ವಿದ್ಯುತ್ ಶಾಟ್ ಸರ್ಕ್ಯೂಟ್ ಸಂಭವಿಸಿ ದಟ್ಟವಾದ ಹೊಗೆ ಕಂಡ ಸ್ಥಳೀಯರು ಉಪತಹಶೀಲ್ದಾರ್ ನಾಗರಾಜ್ ನಾಯಕ್ ಮತ್ತು ಅಗ್ನಿಶಾಮಾಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಅಗ್ನಿಶಾಮಕದಳದವರು ಸರಿಯಾದ ಸಮಯಕ್ಕೆ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಈ ಅವಘಡ ದಿಂದಾಗಿ ಸುಮಾರು 5 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಮಹಜರು ಸಂಧರ್ಭದಲ್ಲಿ ಸ್ಥಳಕ್ಕೆ ಭೇಟಿನೀಡಿದ ಪದ್ಮಶ್ರೀ ಪುರಸ್ಕೃತೆ ಮಾತ ಮಂಜಮ್ಮ ಜೋಗತಿ ಪತ್ರಿಕೆಯೊಂದಿಗೆ ಮಾತನಾಡಿ ಶಾರ್ಟ್ ಸರ್ಕ್ಯೂಟ್ ನಿಂದ ದೊಡ್ಡ ಅನಾಹುತ ತಪ್ಪಿದೆ. ಅಗ್ನಿಶಾಮಕ ದಳದವರು ಸರಿಯಾದ ಸಮಯಕ್ಕೆ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಪಕ್ಕದ ರೆಕಾರ್ಡ್ ರೂಮ್ ಇದೆ ಅದರಲ್ಲಿ ಸುತ್ತಮುತ್ತಲಿನ ಹಳ್ಳಿಯ ರೈತರ ಭೂಮಿಗಳ ಸುಮಾರು 70 ವರ್ಷದ ಹಳೆಯ ದಾಖಲೆಗಳಿವೆ ಅವುಗಳನ್ನು ರಕ್ಷಿಸಿ ಭಾರಿ ಅವಘಡ ತಪ್ಪಿಸಿದ್ದಾರೆ. ಸರ್ಕಾರವು ನಷ್ಟವಾಗಿರುವ ಉಪಕರಣಗಳನ್ನು ಕೂಡಲೇ ಬರಿಸಿ. ಇನ್ನು ಮುಂದೆ ಎಚ್ಚರವಹಿಸಿ ಸಾರ್ವಜನಿಕರಿಗೆ ಸಂಭಂದಿಸಿದ ಭೂಮಿಯ ಧಾಖಲೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಇಂದು ಠಾಣೆಯಿಂದ ಪೊಲೀಸರು ಮಹಜರು ಮಾಡಿದರು ಈ ಸಂಧರ್ಭದಲ್ಲಿ ನಾಡಕಛೇರಿಯ ಕಂದಾಯ ನೀರಿಕ್ಷಕ ಅಂದಾನಗೌಡ, ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ, ಸಿಬ್ಬಂದಿ ವರ್ಗದವರು ಇದ್ದರು.
ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಕಂಪ್ಯೂಟರ್ ಉಪಕಾರಣಗಳು ಸುಟ್ಟು ಹಾಳಾಗಿವೆ. 2,3ಗಂಟು ಜಮೀನಿಗೆ ಸಂಭಂದಿಸಿದ ಪಹಣಿ, ಮೊಟೇಷನ್ ಹಳೇ ಧಾಖಲೆಗಳು ಜೆರಾಕ್ಸ್ ಮಾಡಲು ಕಂಪ್ಯೂಟರ್ ಕೊಠಡಿಯಲ್ಲಿ ಡಲಾಗಿತ್ತು. ಅವುಗಳು ಸಹ ಸುಟ್ಟಿರ ಬಹುದು ಎಂದು ಅಂದಾಜಿಸಲಾಗಿದೆ. ಪರಿಶೀಲಿಸಿದ ನಂತರ ನಿಖರವಾಗಿ ತಿಳಿದುಬರಲಿದೆ.