
ಪದವಿದರರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ
ನಾರಾ ಪ್ರತಾಪ್ ರೆಡ್ಡಿ ಗೆ ಎಎಪಿ ಬೆಂಬಲ ಘೋಷಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ: ಇಷ್ಟರಲ್ಲಿ ನಡೆಯುವ ಈಶಾನ್ಯ ಪದವೀಧರ ಕ್ಷೇತ್ರದ ( ಎಂಎಲ್ಸಿ ), ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ನಾರಾ ಪ್ರತಾಪ್ ರೆಡ್ಡಿ ಅವರಿಗೆ ಆಮ್ ಆದ್ಮಿ ಪಕ್ಷ ಸಂಪೂರ್ಣವಾಗಿ ಬೆಂಬಲ ನೀಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಚಂದ್ರು ಸ್ಪಷ್ಟನೆ ಮಾಡಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ಎಂಎಲ್ಸಿ ಚುನಾವಣೆಯಲ್ಲಿ ಕಡಿಮೆ ಅಂತರದ ಲ್ಲಿ ಸೋತಿದ್ದರು. ಈ ಸಾರಿ ಚುನಾವಣೆಯಲ್ಲಿ ಇವರಿಗೆ ಆಪ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ನಂತರ ನಾರಾ,ಪ್ರತಾಪ್ ರೆಡ್ಡಿ ಅವರು ಮಾತನಾಡುತ್ತಾ ಹಿಂದಕ್ಕೆ,ಬುಡ ಅಧ್ಯಕ್ಷರಾಗಿ, ಮತ್ತು ಇತರ ಹುದ್ದೆಗಳಲ್ಲಿ ಕೆಲಸ ಮಾಡಿದಾಗ ಅತ್ಯುತ್ತಮ ಕೆಲಸವನ್ನು ಮಾಡಿ ಜನರ ಮೆಚ್ಚುಗೆ ಪಡೆದಿರುವುದಾಗಿ ತಿಳಿಸಿದರು.. ಈ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಏಳು ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಬೆಂಬಲ ನೀಡಿ, ನಮ್ಮ ವಿಜಯಕ್ಕೆ ಸಹಕಾರ ನೀಡಬೇಕೆಂದು ಕೇಳಿದರು.
ಈ ಸಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾನುಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತಾಗ ನಮ್ಮ ತಂಡದ ಸದಸ್ಯರ ಜೊತೆಗೆ ಮಾತನಾಡಿ ಮತ್ತೊಮ್ಮೆ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ನಮ್ಮ ತಂಡದಿಂದ ಈ ಬಾರಿ 35 ರಿಂದ 40, ಸಾವಿರಕ್ಕೂ ಹೆಚ್ಚುಮತದಾರ ನೋಂದಣಿ ಯಾಗಲು ನಮ್ಮ ತಂಡ ಶ್ರಮಿಸಿದೆ ಎಂದರು .
ಕಳೆದ ಬಾರಿ ಚುನಾವಣೆಗೆ ನಿಂತಾಗ ನನ್ನ ನೋಡಿ ನಗುವ ಮತ್ತು ಗೇಲಿ ಮಾಡಿದವರಿಗೆ ಹೆಚ್ಚಿನ ಮತಗಳನ್ನು ಪಡೆದು ನಗುತ್ತಲೇ ಉತ್ತರಿಸಿದೆ ಎಂದರು. ಈ ಬಾರಿ ಮತ್ತೊಮ್ಮೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಏಳು ಜಿಲ್ಲೆಗಳಲ್ಲಿ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವದಾಗಿ ತಿಳಿಸಿದರು. ಹಿಂದಿನ ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ಚುನಾವಣೆಯಲ್ಲಿ ಗೆದ್ದ ನಂತರ ಅವರ ದರ್ಶನ ಯಾರಿಗೂ ಸಿಕ್ಕಿಲ್ಲ ಎಂದರು.
ಈ ಸಾರಿ ಚುನಾವಣೆಯಲ್ಲಿ ಮತದಾರರು ನನ್ನ ಗೆಲುವಿಗೆ ಸಹಕರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತ ಮಾಡಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡರಾದ, ಕೊರ್ಲಗುಂದಿ ದೊಡ್ಡಕೇಶವ ರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷರಾದ ಜೈ ಬಿ ಮಂಜುನಾಥ ಸೇರಿದಂತೆ, ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ನಾರಾ ಪ್ರತಾಪ ರೆಡ್ಡಿ ಅವರ ಬೆಂಬಲಿಗರು ಪಾಲ್ಗೊಂಡಿದ್ದರು.