
ನಾಳೆ ಸೋಮವಾರ ಡಿ,೧೧ರಂದು
ಕಲ್ಲೂರ ಶ್ರೀ ಕಲ್ಲಿನಾಥೇಶ್ವರ ಕಾರ್ತಿಕೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೦- ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಕಲ್ಲೂರ ಶ್ರೀ ಕಲ್ಲಿನಾಥೇಶ್ವರ ಮಹಾ ಕಾರ್ತಿಕೋತ್ಸವ ನಾಳೆ ಸೋಮವಾರ ಡಿ, ೧೧ ರಂದು ಜರುಗಲಿದೆ ಎಂದು ಯಲಬುರ್ಗಾ ತಹಶೀಲ್ದಾರ ಬಸವರಾಜ ತನ್ನಳ್ಳಿ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕಳಕನಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಪ್ರಕಟನೆ ನೀಡಿದ್ದು ಅಂದು ಬರುವ ಭಕ್ತಾದಿಗಳಿಗೆ ದೇವಸ್ಥಾನದಿಂದ ಪ್ರಸಾದ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರೆ.
ತುಲಾಭಾರ : ಅಂದು ರಾತ್ರಿ ಗ್ರಾಮದ ವತಿಯಿಂದ ಗದುಗಿನ ಉಟ್ಟರಾಜ ಗವಾಯಿಗಲ ಮಠದ ಶ್ರೀ ಕಲ್ಲಯ್ಯಜ್ಜ ಸ್ವಾಮಿಗಲಿಗೆ ತುಲಾಭಾರ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಲಂಕಾರ : ದೇವಸ್ಥಾನದಲ್ಲಿ ವಿಶೇಶ ಹೋವಿನ ಹಾಗೂ ಕಂಗೊಳಿಸುವ ಬಣ್ಣ ಬಣ್ಣದ ದೀಪದ ಅಲಂಕಾರ ಮಾಡಲಾಗಿದೆ. ಭಕ್ತರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.