
ನಿಜ ಶರಣ ಅಂಬಿಗರ ಚೌಡಯ್ಯನವರು ವಚನಕಾರರಲ್ಲಿ ಶ್ರೇಷ್ಠ ವಚನಕಾರ : ಗ್ರೇಡ್ 2 ತಹಶೀಲ್ದಾರ್ ನಾಗಪ್ಪ ಸಜ್ಜನ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 21ನಿಜಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದ ವಚನಕಾರರಲ್ಲಿ ಅತ್ಯಂತ ಶ್ರೇಷ್ಠ ವಚನಕಾರರಾಗಿದ್ದರು.ಎಲ್ಲರೂ ಅವರ ತತ್ವ ಆದರ್ಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ನಾಗಪ್ಪ ಸಜ್ಜನ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಯಲ್ಲಿ ರವಿವಾರ ದಿವಸ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸುವ ಮೂಲಕ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ದಾರ್ಕ್ಷಣಿಕ ಶರಣರಲ್ಲಿ ಒಬ್ಬರಾದ ನಿಜಶರಣ ಅಂಬಿಗರ ಚೌಡಯ್ಯ ನೇರ ನಿಷ್ಟುರ ತಮ್ಮ 273ಕ್ಕೊ ವಚನಗಳ ಮೂಲಕ ಇವರು ರಚಿಸಿದ ಸಾಹಿತ್ಯ ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತ ಕರ್ತವ್ಯ ನಿರ್ವಹಿಸಿದವರು ಕಾಯಕ ನಿಷ್ಠೆ ಉಳ್ಳವರು ಹಸಿದವರಿಗೆ ಅನ್ನ ಕೊಡಿ, ಕಷ್ಟದಲ್ಲಿ ಇದ್ದವರಿಗೆ ಸಹಾಯ ಹಸ್ತ ನೀಡಿ ಎಂದು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದವರು
ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ಅದ್ಯಕ್ಷ ಉಮೇಶ್ ದಳವಾಯಿ. ಕಾರ್ಯದರ್ಶಿ ಮಂಜುನಾಥ ಕುದ್ರಿಮನಿ ಸಮಾಜದ ಮುಖಂಡರಾದ ಕೃಷ್ಣ ಮೂತಿ೯ ಜಾಲಗಾರ ಶಿವರಾಜ ಬಾರಕೇರ್ ಬಾಲಪ್ಪ ಬಾರಕೇರ್ ಸುರೇಶ್ ಫಕೀರಪ್ಪ ಇಟಗಿ ಮಂಜುನಾಥ ಕರಮುಢಿ ಸಮಾಜದ ಮಹಿಳೆಯರು ಹಾಗೂ ಮಲ್ಲಿ ಕಾರ್ಜುನಯ್ಯ ಆಹಾರ ಇಲಾಖೆ ಅಧಿಕಾರಿ, ದೇವರಡ್ಡಿ ಅಕ್ಷರ ದಾಸೋಹ ಅಧಿಕಾರಿ ಎಫ್ ಎಂ. ಕಳ್ಳಿ ಮತ್ತು ತಹಶೀಲ್ದಾರ್ ಕಛೇರಿಯ ಸಿಬ್ಬಂದಿಗಳು ಮತ್ತು ಇತರರು ಭಾಗವಹಿಸಿದ್ದರು.