
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಮ್ಮ ದೇಶದ ಹೆಮ್ಮೆಯ ಹೋರಾಟಗಾರ : ಶ್ರೀಕಾಂತಗೌಡ ಮಾಲಿ ಪಾಟೀಲ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 24- ನಮ್ಮ ದೇಶದ ಹೆಮ್ಮೆಯ ಹೋರಾಟ ಗಾರ ಸ್ವಾತಂತ್ರ್ಯವನ್ನು ಯಾರು ಕೂಗುವದಿಲ್ಲ ಅದನ್ನು ನಾವೇ ಪಡೆದುಕೊಳ್ಳಬೇಕು. ನೀವು ನನ್ನಗೆ ರಕ್ತ ಕೂಡಿ ನಾನು ನಿಮ್ಮಗೆ ಸ್ವಾತಂತ್ರ್ಯ ಕೂಡುಸುತ್ತೇನೆ ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ಎಂದು ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀಕಾಂತಗೌಡ ಮಾಲಿಪಾಟೀಲ ಹೇಳಿದರು.
ತಾಲೂಕಿನ ತರಲಕಟ್ಟಿ ಸರಕಾರಿ ಕಿರಿಯ ಪ್ರಾಥಮೀಕ ಶಾಲೆಯಲ್ಲಿ ಮಂಗಳವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127 ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಣೆ ಕಾರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಾಕಷ್ಟು ಜನರಿಗೆ ಸ್ಪೂರ್ತಿ ತುಂಬಿದ್ದಾರೆ ನಮ್ಮ ಭಾರತ ದೇಶವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡಿಸಬೇಕೆಂದು ಪಣ್ಣತೊಟ್ಟವರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನ ನಾಯಕರಾಗಿದ್ದರು ಎಂದು ಹೇಳಿದರು.
ನಂತರ ಮಾತನಾಡಿದ ಸಹ ಶಿಕ್ಷಕರಾದ ನಿರುಪಾದಿ ತಳವಾರ ಮಾತನಾಡಿ ನೇತಾಜಿ ಅವರ ಜೀವನ, ಅವರ ಕಾರ್ಯ, ಅವರ ಪ್ರತಿ ದಿಟ್ಟ ನಿರ್ಧಾರ ಎಲ್ಲರಿಗೂ ಪ್ರೇರಣೆ. ಅವರ ತ್ಯಾಗವನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಸಲುವಾಗಿ ಸರ್ಕಾರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕನಕರಾಯ ಗಡಾದ, ಸಹ ಶಿಕ್ಷಕರಾದ ಲೋಹಿತ ಲಮಾಣಿ, ದ್ರಾಕ್ಷಾಯಣಿ ಮಾಲಿ ಪಾಟೀಲ್, ಶಿವಶರಣಪ್ಪ ಬೇವೂರ, ರಮೇಶ ಮಾಲಿ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು