
ನೇಹ ಹಿರೇಮಠ್ ಹತ್ಯೆ ಖಂಡಿಸಿ, ಬಿಜೆಪಿ ವತಿಯಿಂದ ಪ್ರತಿ ಘಟನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 22- ಹುಬ್ಬಳ್ಳಿ ನಗರದ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಬರ್ಬರ ಕೊಲೆ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ನ್ಯಾಯ ವಿಚಾರಣೆ ನಡೆಸಬೇಕೆಂದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸುತ್ತಾ ಎಂದು ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಭಾರತೀಯ ಜನತಾ ಪಾರ್ಟಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಘಟನೆ ನಡೆಸಿದರು.
ನೇಹಾ ಹಿರೇಮಠ ಭಾವಚಿತ್ರವನ್ನು ಕೈಯಲ್ಲಿ ಹಿಡ್ಕೊಂಡು, ಹತ್ಯೆಯನ್ನು ಖಂಡಿಸುತ್ತಾ ಪ್ರತಿ ಘಟನೆ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚ ರಾಜ್ಯ ಉಪಾಧ್ಯಕ್ಷರು, ಎಸ್ ಗುರುಲಿಂಗನಗೌಡ ಮಾತನಾಡುತ್ತಾ ರಾಜ್ಯದ ಸರ್ಕಾರ ಕೂಡಲೇ ಕ್ರಮವಹಿಸಲು ಒತ್ತಾಯಿಸಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಗೆ ಜನರ ಮಾನ ಪ್ರಾಣಗಳಿಗೆ ರಕ್ಷಣಾ ಕಲ್ಪಿಸುವುದು ಆಗುತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.
ಒಂದು ಹೆಣ್ಣು ಮಕ್ಕಳ ಮಾನ ಪ್ರಾಣಗಳಿಗೆ ರಕ್ಷಣೆ ಕೊಡದ ಕೈಲಾಗದ ಈ ಸರ್ಕಾರವು ಜನತೆಗೆ ಏನು ಗ್ಯಾರಂಟಿಗಳನ್ನು ಕೊಡುತ್ತದೆ ಎಂದು ಪ್ರಶ್ನಿಸಿದರು.
ಕಾಲ್ ಬಜಾರ್ ಬಿಜೆಪಿ ವಿಭಾಗದ ಮಂಡಲ ಅಧ್ಯಕ್ಷ ವಿ ನಾಗರಾಜ ರೆಡ್ಡಿ ಮಾತನಾಡುತ್ತಾ ನೇಹಾ ಹಿರೇಮಠ ಕೊಲೆ ವಿಚಾರದಲ್ಲಿ ಹಿರಿಯ ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಸುವುದರ ಜೊತೆಗೆ, ಕಠಿಣ ಶಿಕ್ಷೆ ಒಳಪಡಿಸಬೇಕೆಂದು ಒತ್ತಾಯಿಸುತ್ತಿರುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವೂ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಶಾಮ್ ಸುಂದರ್, ವೆಂಕಟೇಶ್ ಗಳ ಜೊತೆಗೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.